Janardhan Kodavoor/ Team KaravaliXpress
21.6 C
Udupi
Thursday, December 8, 2022
Sathyanatha Stores Brahmavara

ಕರಾವಳಿ ಎಕ್ಸ್ ಪ್ರೆಸ್  ಡಾಟ್‌ಕಾಂ ಅಂತರ್ಜಾಲ ಪತ್ರಿಕೆ ಲೋಕಾರ್ಪಣೆ  

ಕರಾವಳಿ ಎಕ್ಸ್ ಪ್ರೆಸ್ ಡಾಟ್‌ಕಾಂ ಆರಂಭ
ಪೌರಕಾರ್ಮಿಕನಿಂದ ಅಂತರ್ಜಾಲ ಪತ್ರಿಕೆ ಲೋಕಾರ್ಪಣೆ

ನಗರದ ಪತ್ರಿಕಾ ಭವನದಲ್ಲಿ ನಡೆದ ಸರಳ ಕಾರ‍್ಯಕ್ರಮದಲ್ಲಿ ಉಡುಪಿ ನಗರಸಭೆ ಪೌರಕಾರ್ಮಿಕ ಸುಧೀಂದ್ರ ಅವರು ಚಾಲನೆ ನೀಡಿದರು.

ವೆಬ್ ಡಿಸೈನರ್ ಗೌತಮ ನಾವಡರನ್ನು ಗೌರವಿಸಲಾಯಿತು.
ಲಾಂಛನ ಸಿದ್ಧಗೊಳಿಸಿದ ರಂಜಿತ್ ಕೊಡವೂರು ಅವರನ್ನು ಗೌರವಿಸಲಾಯಿತು.
ಅಭ್ಯಾಗತರಾಗಿದ್ದ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಸಮಾಜದ ಎಲ್ಲ ಅಂಕುಡೊಂಕುಗಳನ್ನು ತಿದ್ದುವಲ್ಲಿ ಈ ವೆಬ್ ಪತ್ರಿಕೆ ಸಹಕಾರಿಯಾಗಲಿ ಎಂದು ಹಾರೈಸಿದರು.
ಉಡುಪಿ ಜಿಲ್ಲಾ ಕಾರ‍್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಅಲೆವೂರು ದಿನೇಶ ಕಿಣಿ, ಸುದ್ದಿಯೊಂದಿಗೆ ಕಲೆ, ಸಂಸ್ಕೃತಿಯತ್ತಲೂ ಗಮನಹರಿಸುವ ಪತ್ರಿಕೆಯ ಆಶಯ ಶ್ಲಾಘನೀಯ ಎಂದರು. ಪತ್ರಕರ್ತರ ಸಂಘದ ಕೋಶಾಧಿಕಾರಿ ದಿವಾಕರ ಹಿರಿಯಡಕ, ಛಾಯಾಚಿತ್ರ ಮಾಹಿತಿ ಬಗ್ಗೆಯೂ ಗಮನಹರಿಸಿರುವುದು ಸಂತಸದಾಯಕ ಎಂದರು.
ಪತ್ರಕರ್ತ ಕಿರಣ್ ಮಂಜನಬೈಲು ಸ್ವಾಗತಿಸಿ, ನಿರೂಪಿಸಿದರು.
ಪತ್ರಿಕಾ ಛಾಯಾಗ್ರಾಹಕ ಜನಾರ್ದನ್  ಕೊಡವೂರು  ವಂದಿಸಿದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!