Janardhan Kodavoor/ Team KaravaliXpress
26.6 C
Udupi
Saturday, November 26, 2022
Sathyanatha Stores Brahmavara

ಕಾನೂನು ಸೇವೆಗಳ ಅರಿವು ಹಾಗೂ ವನಮಹೋತ್ಸವ  

ಉಡುಪಿ​:​  ನವ್ಯಚೇತನ ಎಜುಕೇಷನ್‌   ರೀಸರ್ಚ್  ವೆಲ್ಫೇರ್  ಟ್ರಸ್ಟ್‌ ಮತ್ತು  ಕಾನೂನು ಸೇವೆ ಹಾಗೂ ಉಡುಪಿ ಜಿಲ್ಲಾ  ಉಚಿತ ಕಾನೂನು ಸೇವೆಗಳ ಪ್ರಾಧಿಕಾರ ಇವರ ಆಶ್ರಯದಲ್ಲಿ   ಕಾನೂನಿನ ಬಗ್ಗೆ  ಅರಿವು ಮೂಡಿಸುವ ಕಾರ್ಯಕ್ರಮವು  ಎಲ್.ವಿ.ಪಿ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪುತ್ತೂರು ಇಲ್ಲಿ ನಡೆಯಿತು. ​ ​ಸಮಾರಂಭದ ಅಧ್ಯಕ್ಷತೆಯನ್ನು  ನವ್ಯ ಚೇತನ  ಟ್ರಸ್ಟ್‌ ನ ಅಧ್ಯಕ್ಷ ಡಾ। ಶಿವಾನಂದ  ನಾಯಕ್  ವಹಿಸಿದ್ದರು.
ಮುಖ್ಯ  ಅಥಿತಿಗಳಾಗಿ ಉಡುಪಿ ಜಿಲ್ಲಾ  ನ್ಯಾಯಾಧೀಶರಾದ  ಸಿ.ಎಮ್.ಜೋಷಿ  ಮತ್ತು  ಜಿಲ್ಲಾ  ಉಚಿತ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ  ನ್ಯಾಯಾಧೀ​ಶೆ ಕಾವೇರಿ ಇವರು ಭಾಗವಹಿಸಿದ್ದರು. ಸಿ.ಎಮ್. ಜೋಷಿ ಯವರು ಮಾತನಾಡುತ್ತಾ ಆಥಿ೯ಕವಾಗಿ ಹಿಂದುಳಿದವರಿಗೆ, ಮಹಿಳೆಯರಿಗೆ  ಮತ್ತು  ಹಿರಿಯ ನಾಗರಿಕರಿಗೆ ಪ್ರಾಧಿಕಾರದಿ೦ದ ಸಿಗುವ ಕಾನೂನಿನ  ನೆರವುಗಳ ಬಗ್ಗೆ  ವಿವರವಾಗಿ ತಿಳಿಸಿದರು.
ಕಾನೂನು  ಸೇವಾ ಪ್ರಾಧಿಕಾರದ ಸದಸ್ಯ  ಕಾರ್ಯದರ್ಶಿ ಹಾಗೂ ನ್ಯಾಯಾಧೀ​ಶೆ ಕಾವೇರಿಯವರು ವಿದ್ಯಾರ್ಥಿಗಳ ಹಕ್ಕು  ಹಾಗೂ ಬಾಲಕಾರ್ಮಿಕ  ಪಧ್ಧತಿಯ ಕುರಿತು ವಿವರಿಸಿದರು. ಸಮಾರಂಭದ ಅಧ್ಯಕ್ಷ ಶಿವಾನಂದ  ನಾಯಕ್ ಮಾತನಾಡುತ್ತಾ ನವ್ಯ ಚೇತನ ಟ್ರಸ್ಟ್‌ ನ ಸಾಮಾಜಿಕ  ಕಾರ್ಯಕ್ರಮಗಳ ವಿವರಗಳನ್ನು ನೀಡಿದರು. ವೇದಿಕೆಯಲ್ಲಿ ಆದಾಯ ತೆರಿಗೆ ನಿವೃತ್ತ ಕಛೇರಿ ಅಧೀಕ್ಷಕ​ ​ಕರುಣಾಕರ ರಾವ್ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯಿನಿ  ಐರಿನ್ ಮಿನೆಜಸ್ ಮತ್ತು  ಟ್ರಸ್ಟಿ  ರಾಜಶ೦ಕರ್ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ​   ಲೂಸಿ ಸೋಜಾ ಸ್ವಾಗತಿಸಿ ಶೈಕ್ಷಣಿಕ ವರದಿಯನ್ನು  ನೀಡಿದರು. ಶಿಕ್ಷಕಿ ಶ್ಯಾಮಲಾ ಕಾರ್ಯಕ್ರಮ  ನಿರೂಪಣೆ ಮಾಡಿ ವ೦ದಿಸಿದರು. ಶಿಕ್ಷ​ಕಿ ಲಲಿತಾ, ಸ೦ತೋಷಕುಮಾರ್ ಶೆಟ್ಟಿ, ಪ್ರಕಾಶ್  ಶೆಟ್ಟಿ, ಉಮೇಶ್, ಸುರೇಶ್ ಮತ್ತು ಪ್ರತಿಮಾ ಉಪಸ್ಥಿತರಿದ್ದರು.​ ​
ವನ ಮಹೋತ್ಸವದ ಅ೦ಗವಾಗಿ ಶಾಲೆಯ ಆವರಣದಲ್ಲಿ ಔಷಧೀಯ ಗಿಡಗಳನ್ನು  ನೆಡಲಾಯಿತು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!