Janardhan Kodavoor/ Team KaravaliXpress
23.6 C
Udupi
Friday, December 2, 2022
Sathyanatha Stores Brahmavara

ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ‘ಕಾಂತಾರ’ ಅಬ್ಬರ..!

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ ಕಾಂತಾರ ಸಿನಿಮಾ ವಿಶ್ವದಾದ್ಯಂತ ಮೆಚ್ಚುಗೆ ಗಳಿಸಿ ಇದೀಗ ಒಟಿಟಿ ಬಳಗಕ್ಕೆ ಕಾಲಿಟ್ಟಿದೆ. ಹೊಂಬಾಳೆ ಫಿಲಂಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಸೆಪ್ಟೆಂಬರ್ 30 ರಂದು ಕನ್ನಡದಲ್ಲಿ ಬಿಡುಗಡೆಯಾದ ಚಿತ್ರಕ್ಕೆ ಅನಿರೀಕ್ಷಿತ ಯಶಸ್ಸು ಸಿಕ್ಕಿತು.

ಪ್ಯಾನ್ ಇಂಡಿಯಾ‌ ಸಿನಿಮಾ ಆಗಿಯೂ ಕೂಡ ಭರ್ಜರಿ ಯಶಸ್ಸನ್ನು ದಾಖಲಿಸಿದೆ. ಈ ಸಿನಿಮಾ ಈಗಾಗಲೇ 400 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಸೃಷ್ಟಿಸಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ಎಲ್ಲರನ್ನೂ ಮತ್ತೊಮ್ಮೆ ಥಿಯೇಟರ್‌ಗಳಿಗೆ ಹೋಗುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ. ವಿಶ್ವದಾದ್ಯಂತ ಎಲ್ಲಾ ಬಿಗ್‌ ಸ್ಕ್ರೀನ್‌ಗಳಲ್ಲಿ ಮಿಂಚಿದ ಕಾಂತಾರ ಈಗ OTTಯಲ್ಲಿ ಧೂಳೆಬ್ಬಿಸುತ್ತಿದೆ. ಇನ್ನೂ ಅದೆಷ್ಟೋ ಜನ ಸಿನಿಮಾ ನೋಡದೆ ಇರುವವರು ಮನೆಯ್ಲೇ ಕುಳಿತು ಸಿನಿಮಾವನ್ನು ನೋಡಬಹುದು. ನಿನ್ನೆ ರಾತ್ರಿಯಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕಾಂತಾರ ಹಬ್ಬ ಶುರುವಾಗಿದೆ.

ಬಿಡುಗಡೆಯಾಗಿ 50 ದಿನ ಕಳೆದರೂ ಈ ಸಿನಿಮಾದ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಕರ್ನಾಟಕ, ತೆಲುಗು ರಾಜ್ಯಗಳು, ತಮಿಳುನಾಡು, ಕೇರಳ, ಬಾಲಿವುಡ್‌ ಸೇರಿದಂತೆ ವಿದೇಶದಲ್ಲೂ ಕೂಡಾ ಭಾರೀ ಕಲೆಕ್ಷನ್‌ ಬಾಚಿಕೊಂಡಿದೆ. ಇದೀಗ OTT ನಲ್ಲಿ ಯಾವ ಬದಲಾವಣೆಗಳಾಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!