ಸರಿಯಾದ ದಾರಿಯಲ್ಲಿ ಹೋಗಬೇಕಾದರೆ ಸರಿಯಾದ ದೃಷ್ಟಿಯ ಅವಶ್ಯಕತೆ​~ಸಂಸದೆ ಶೋಭಾ ಕರಂದ್ಲಾಜೆ ​

ಕೊಡವೂರು ವಾರ್ಡಿನಲ್ಲಿ ದೃಷ್ಟಿ ಸಮಸ್ಯೆ ಇದ್ದವರನ್ನು ಗುರುತಿಸಿ  ಅವರ ಸಮಸ್ಯೆಗಳಿಗೆ ಉತ್ತರ ನೀಡಬೇಕೆಂದು ಯೋಚಿಸಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಮುಖಾಂತರ 35 ಜನರಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಿದ,ಹಾಗೂ 215 ಜನರಿಗೆ ಉಚಿತವಾಗಿ ಕನ್ನಡಕ ವಿತರಣೆಯನ್ನು ಸಂಸದರಾದ ಶೋಭಾ ಕರಂದ್ಲಾಜೆಯವರು ನಡೆಸಿ ಕೊಟ್ಟರು.​ ಬಿಜೆಪಿ ಮಹಿಳಾ ಮೋರ್ಚಾ ಉಡುಪಿ ಜಿಲ್ಲೆ, ಬ್ರಾಹ್ಮಣ ವಲಯ ಸಮಿತಿ ಕೊಡವೂರು, ವಾರ್ಡ್ ಅಭಿವೃದ್ಧಿ ಸಮಿತಿ ಕೊಡವೂರು, ಪ್ರಸಾದ್ ನೇತ್ರಾಲಯ ಮತ್ತು ದಾನಿಗಳಾದ ಧರ್ಮಪಾಲ್ ರೈ ಸಹಕಾರದಲ್ಲಿ ಕಾರ್ಯಕ್ರಮವು ನಡೆಯಿತು.
ಸರಿಯಾದ ದಾರಿಯಲ್ಲಿ ಹೋಗಬೇಕಾದರೆ ಸರಿಯಾದ ದೃಷ್ಟಿಯ ಅವಶ್ಯಕತೆ ಇದೆ, ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ದೃಷ್ಟಿ ದೋಷದಿಂದ ಬಳಲುತ್ತಿರು​ ​ವವರಿಗೆ, ಬಡವರಿಗೆ ಉಚಿತವಾಗಿ ಪರೀಕ್ಷೆ ಮಾಡಿ ಕನ್ನಡಕ  ವಿತರಣೆ ಮಾಡುವುದು ಪುಣ್ಯದ ಕೆಲಸ ಇದಕ್ಕೆ  ಸಹಕರಿಸಿದ ಎಲ್ಲಾ ಸಂಘ ಸಂಸ್ಥೆಗಳಿಗೆ ವಂದಿಸಿ, ಮುಂದಿನ ದಿನಗಳಲ್ಲಿ  ಇಂತಹ ಕಾರ್ಯಗಳು ಕೊಡವೂರು ವಾರ್ಡಿನಲ್ಲಿ ನಡೆಯುತ್ತಿರಲಿ ಸಮಾಜದ ಸಮಸ್ಯೆ ಗಳಿಗೆ ಉತ್ತರ ಕೊಡಲು ಕೊಡವೂರು ನಗರ ಸಭಾ ಸದಸ್ಯರಾದ ಕೆ ವಿಜಯ್ ಕೊಡವೂರು  ಸಿದ್ಧರಾಗಿದ್ದಾರೆ ಮತ್ತು ಅನೇಕ ಜನಪರ ಕಾರ್ಯಗಳನ್ನು ಮಾಡಿದ ಅನುಭವ, ಇಚ್ಛಾಶಕ್ತಿ ಇದೆ ಎಂದರು.
 ಈ ಸಂದರ್ಭದಲ್ಲಿ  ಸಹಕರಿಸಿದ ಧರ್ಮಪಾಲ್ ಇವರನ್ನು ಗೌರವಿಸಲಾಯಿತು. ಡಾಕ್ಟರ್ ಕೃಷ್ಣಪ್ರಸಾದ್ ಮಾತನಾಡಿ ಜಿಲ್ಲೆಯಾದ್ಯಂತ ಅನೇಕ ಶಿಬಿರಗಳನ್ನು ಆಯೋಜಿಸಿದ್ದೆವು ಮತ್ತು ಇಂತಹ ಕಾರ್ಯ ಇನ್ನಷ್ಟು ಮಾಡುತ್ತೇವೆ ಎಂದರು.​ ಸರಿಯಾದ ದಿಕ್ಕಿನ ಕಡೆಗೆ ಹೋಗಬೇಕಾದರೆ ಸರಿಯಾದ ದೃಷ್ಟಿ ಅವಶ್ಯಕತೆಯಿದೆ, ಆ ದೃಷ್ಟಿದೋಷವನ್ನು ನಿವಾರಣೆ  ಮಾಡುವುದು ಜನಪ್ರತಿನಿಧಿಯಾದ ನನ್ನ ಕರ್ತವ್ಯ ಆದ್ದರಿಂದ ಕೊಡವೂರು ವಾರ್ಡಿನ ಕಳೆದ ಎರಡು ವರ್ಷದ ಹಿಂದೆ ನಾವು ಸರ್ವೆ ಮಾಡಿದಾಗ 21 ಕ್ಯಾನ್ಸರ್ ಮತ್ತು  188 ಜನರಿಗೆ  ದೃಷ್ಟಿದೋಷ ಮುಂತಾದ ಅನೇಕ ಸಂಗತಿಗಳಿಗೆ  ಉತ್ತರಕೊಡಬೇಕೆಂದು ಯೋಚಿಸಿದ್ದೇನೆ.

ಕೊಡವೂರು ವಾರ್ಡಿನ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಿ ನನ್ನಿಂದ ಸಾಧ್ಯವಾಗುವಷ್ಟು ಮತ್ತು ದಾನಿಗಳ ಮುಖಾಂತರ ಕಾರ್ಯ ಮಾಡಲು ಸಾಧ್ಯವಾಯಿತು,ಮುಂದಿನ ದಿನಗಳಲ್ಲಿ ಇದೇ ರೀತಿ ಸೇವಾಕಾರ್ಯವನ್ನು ದಾನಿಗಳು ಮತ್ತು ಕಾರ್ಯಕರ್ತರ ಮುಖಾಂತರ ಮಾಡುತ್ತೇವೆ ಎಂದರು.​ ಶ್ರೀಲಂಕಾದಂತಹ ದೇಶಗಳಲ್ಲಿ ದೃಷ್ಟಿ ಸಮಸ್ಯೆ ಇಲ್ಲ ಆದೇಶದಲ್ಲಿ ಕಣ್ಣು ದೇಶದ  ಆಸ್ತಿ ಎಂದು ಘೋಷಿಸಿದ್ದಾರೆ.ಯಾರಾದರೂ ಮೃತಪಟ್ಟರೆ ಯಾವುದೇ ಒಪ್ಪಿಗೆ ಇಲ್ಲದೇ ಮೃತ ದೇಹದಿಂದ ಕಿತ್ತು ಇನ್ನೊಬ್ಬರಿಗೆ ನೀಡುವ ವ್ಯವಸ್ಥೆ ಇದೆ. ಭಾರತ ದೇಶದಲ್ಲಿ ಕಣ್ಣಿನ ಸಮಸ್ಯೆ ದೊಡ್ಡದಾಗಿದೆ​. 

ಶ್ರೀಲಂಕಾ ದಂತಹ ವ್ಯವಸ್ಥೆ ನಮ್ಮ ದೇಶದಲ್ಲಿ ಆದರೆ ಈ ಸಮಸ್ಯೆಗೆ ಉತ್ತರ ಕೊಡಬಹುದು ಎಂದು ನಗರ ಸಭಾ ಸದಸ್ಯರಾದ ಕೆ ವಿಜಯ್ ಕೊಡವೂರು ಶೋಭಾ ಕರಂದ್ಲಾಜೆ ಯಲ್ಲಿ ಮನವಿಯನ್ನು ಮಾಡಿದರು.​ ಈ ಸಂದರ್ಭ ದಲ್ಲಿ  ವಾರ್ಡ್ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಪ್ರಭಾತ್ ಕೊಡವೂರು, ಆರೋಗ್ಯ ಸಮಿತಿ ಪ್ರಮುಖ್ ಉಮೇಶ್ ಕೊಡವೂರು​ ​,ಕೃಷ್ಣ ಪ್ರಸಾದ್( ಪ್ರಸಾದ್ ನೇತ್ರಾಲಯ), ಸುರೇಶ್ ನಾಯ್ಕ್ (ಬಿಜೆಪಿ ಜಿಲ್ಲಾಧ್ಯಕ್ಷರು), ವೀಣಾ ಎಸ್ ಶೆಟ್ಟಿ(ಅಧ್ಯಕ್ಷರು ಬಿಜೆಪಿ ಮಹಿಳಾ ಮೋರ್ಚಾ) ನಾರಾಯಣ್ ಬಲ್ಲಾಳ್( ಅಧ್ಯಕ್ಷರು ಬ್ರಾಹ್ಮಣ ವಲಯ) ಕೊಡವೂರು,​ ​ರಾಜೇಶ್ ಲಕ್ಷ್ಮೀ ನಗರ, ಚಂದ್ರಕಾಂತ್ ಶೇಖರ್ ಮಾಬಿಯಾನ್, ಅರುಣ್ ರಾವ್,  ವಿನಯ್  ಲಕ್ಷ್ಮೀನಗರ,​ ​ಮಂಜುನಾಥ್ ಲಕ್ಷ್ಮೀನಗರ, ಪ್ರತೀಷ್ ಲಕ್ಷ್ಮೀನಗರ,​ ​ವಾಣಿ ಇನ್ನಿತರರು ಉಪಸ್ಥಿತರಿದ್ದರು.​​
 
 
 
 
 
 
 
 
 
 
 

Leave a Reply