ಯು.ಕಮಲಾಬಾಯೀ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

ಯು.ಕಮಲಬಾಯಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿ ಸಾಧನೆಗೈದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರಗಿತು. ದಿ.ಅಕಾಡಮಿ ಆಫ಼್ ಜನರಲ್ ಎಜುಕೇಶನ್ ಕಾರ್ಯದರ್ಶಿಯಾದ ಶ್ರೀ .ವರದರಾಯ್.ಪೈ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಿದರು.

ಆಡಳಿತ ಮಂಡಳಿಯ ಸದಸ್ಯರಾದ ಡಾ||ಪ್ರತಾಪ್ ಕುಮಾರ್, ಶ್ರೀ ಅಣ್ಣಪ್ಪ.ಶೆಣೈ, ಶಿಕ್ಷಕಣಾಧಿಕಾರಿ ಶ್ರೀ ನಾಗೇಶ್ ಶ್ಯಾನಭಾಗ, ಶಿಕ್ಷಕ ವೃಂದ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರು ಶಿವಕುಮಾರ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ವಿಜಯೇಂದ್ರ ವಸಂತ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾದ್ಯಾಯರಾದ ಶ್ರೀ ಸುದರ್ಶನ್ ನಾಯಕ್ ಪ್ರಾಸ್ಥಾವಿಕದೊಂದಿಗೆ ಸ್ವಾಗತಿಸಿ, ಶ್ರೀ ಜಗದೀಶ ನಾಯ್ಕ್ ವಂದಿಸಿದರು.ಶ್ರೀಮತಿ ಉಷಾ.ಭಟ್ ಕಾರ್ಯಕ್ರಮ ನಿರೂಪಿಸಿದರು.

Leave a Reply