ರಾಜ್ಯದಲ್ಲಿಯೇ ಮಾದರಿಯಾದ ಕಡಿಯಾಳಿ ಗ್ರಾಮ ಭಜನೆ

ಕಡಿಯಾಳಿ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ವಿನೂತನ ಶೈಲಿಯ ಗ್ರಾಮ ಭಜನೆ ಏಪ್ರಿಲ್ 2 ರಿಂದ ಪ್ರಾರಂಭಗೊಂಡು ಗ್ರಾಮದ 2035 ಮನೆಗಳಲ್ಲಿ ಭಜನೆ ನಡೆಯಿತು. ಕಾತ್ಯಾಯಿನಿ ,ಬೈರವಿ, ಪಾರ್ವತಿ ,ನಾರಾಯಣಿ, ಶಾಂಭವಿ ಹೀಗೆ 5 ತಂಡಗಳನ್ನು ರಚನೆ ಮಾಡಿ ತಂಡದಲ್ಲಿ ಸರಾಸರಿ 50/60 ಮಂದಿ ಪುಟಾಣಿಗಳು, ಯುವತಿಯರು ,ತಾಯಿಯಂದಿರು ಮತ್ತು ಹಿರಿಯರು ಇದ್ದರು. ಮಹಿಷಮರ್ದಿನಿ ಪ್ರೇರಣೆಯಿಂದ ಪ್ರಾರಂಭಗೊಂಡ ಭಜನೆ ದಿನ ನಿತ್ಯವೂ 15 ರಿಂದ 20 ಮನೆಗಳಲ್ಲಿ ನಡೆಯುತ್ತಿತ್ತು. ಹೀಗೆ ಸಾಗಿದ ಮನೆಮನೆ ಭಜನೆ ಕಾರ್ಯಕ್ರಮ ಗ್ರಾಮದ ಪ್ರತಿಯೊಂದು ಮನೆಯಲ್ಲಿಯೂ ಉತ್ಸಾಹ ಇಮ್ಮಡಿ ಗೊಂಡು ಜಾತಿ-ಮತಭೇದವಿಲ್ಲದೆ ನಡೆಯಿತು. ಅಷ್ಟೇ ಅಲ್ಲದೆ ಕ್ರೈಸ್ತ ಸಮುದಾಯದ ವಿನಂತಿ ಮೇರೆಗೆ ಅವರುಗಳ ಮನೆಯಲ್ಲಿ ಭಜನೆ ನಡೆಯಿತು. ಕೆಲವು ತಂಡವು ದಿನ ನಿತ್ಯವೂ ಕನಿಷ್ಠ 2 ರಿಂದ 3ಕಿಲೋಮೀಟರ್ ಹಾದಿಯಲ್ಲಿ ನಡೆದು ಭಜನೆಯನ್ನು ಯಶಸ್ವಿಯಾಗಿ ನಡೆಸಿ ಕೊಟ್ಟರು*10 ರಿಂದ 12 ಜನ ಭಜನೆಗೆ ಬರಬಹುದು ಎಂದು ಪ್ರಾರಂಭಿಸಿದ ಭಜನೆ ಕೊನೆಕೊನೆಗೆ 100 ರ ಗಡಿದಾಟಿ ಹಲವಾರು ಮಂದಿಗೆ ಪ್ರೇರಣೆಯಾಯಿತುಕೆಲವು ಮಹಿಳೆಯರು ಚಾಚೂ ತಪ್ಪದೆ 21 ದಿನವು ಭಕ್ತಿ ಮತ್ತು ಶ್ರದ್ಧೆಯಿಂದ ಪಾಲ್ಗೊಂಡರುಪುಟಾಣಿಗಳ ಉತ್ಸಾಹ ಕಂಡಾಗ ನಮ್ಮೆಲ್ಲರ ಬಾಲ್ಯದ ಭಜನಾ ನೆನಪುಗಳು ಮರುಕಳಿಸುತ್ತಿತ್ತು.


ಹಿರಿಯರಾದ ಜೀವರತ್ನ ದೇವಾಡಿಗರು ಮತ್ತು ತಂಡದ ನಾಯಕಿಯರಾದ ಶ್ರೀಮತಿ ಗೀತಾ ನಾಯಕ್, ಶ್ರೀಮತಿ ಸುಮಲತಾ ಉದಯ ದೇವಾಡಿಗ, ಶ್ರೀಮತಿ ಶಕುಂತಳಾ ಶೆಟ್ಟಿ, ಶ್ರೀಮತಿ ಅಶ್ವಿನಿ ಪೈ ಮಾದರಿಯಾಗಿ ಭಜನೆ ನಡೆಸಿಕೊಟ್ಟರು ಇವರೊಂದಿಗೆ ಕಚೇರಿಯಲ್ಲಿ ಕೆಲವರಿಗಂತೂ ದಿನನಿತ್ಯದ ಭಜನಾ ಮಾರ್ಗವನ್ನು ಮಾಡುವುದೇ ಕೆಲಸವಾಗಿಬಿಟ್ಟಿತ್ತುಅವರು ಕೂಡ ಬಹಳ ನಿಷ್ಠೆಯಿಂದ ತಮ್ಮ ದೇವರ ಕಾರ್ಯಗಳನ್ನು ನಡೆಸಿಕೊಟ್ಟರು* ಕೆಲವು ದೇವಸ್ಥಾನಗಳು ಅನುಸರಿಸುವುದರ ಮೂಲಕ ನಮ್ಮ ಈ ಗ್ರಾಮ ಭಜನೆ ನಾಡಿಗೆ ಮಾದರಿಯಾಯಿತು.


ಪೂರ್ವನಿಗದಿ ಮಂಗಲೋತ್ಸವ
ಏಪ್ರಿಲ್ 28ರಂದು ನಿಗದಿಯಾಗಿದ್ದ ಮಂಗಲೋತ್ಸವು ಭಜನಾ ತಂಡದ ಉತ್ಸಾಹದಿಂದ ದಿನನಿತ್ಯ ಕೆಲವು ತಂಡಗಳು 30/35 ಮನೆಗಳನ್ನು ಸಂಪರ್ಕಿಸಿ ಭಜನೆ ಮಾಡಿದರ ಪರಿಣಾಮ ಏಪ್ರಿಲ್ 23ರಂದೇ ಭಜನಾ ಮಂಗಲೋತ್ಸವ ನಡೆಯಿತು.
ಭಜನಾ ಮಂಗಲೋತ್ಸವ
ಉಡುಪಿ ಶ್ರೀಕೃಷ್ಣಮಠದ ಪರ್ಯಾಯ ಮಠಾಧೀಶರಾದ ಶ್ರೀಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದಂಗಳವರಿಂದ ಚಾಲನೆಗೊಂಡು ಸಾವಿರಾರು ಮಂದಿ ಭಜನೆ ಹಾಡುವುದರ
ಮೂಲಕ ಬೃಹತ್ ಶೋಭಾಯಾತ್ರೆ ನಡೆಯಿತು ಈ ಮೆರವಣಿಗೆಯಲ್ಲಿ ಎಲ್ಲಾ ಭಜನಾ ತಂಡಗಳೊಂದಿಗೆ ಉಡುಪಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಯುವಕರ ಭಜನಾ ತಂಡ ಭಜನಾ ಮಂಗಲೋತ್ಸವಕ್ಕೆ ಕಿರೀಟಪ್ರಾಯವಾಗಿ ಮೂಡಿಬಂತು. ಪುಟಾಣಿಗಳು ಭಜನೆಗೆ ನಾಂದಿ ಹಾಡಿದ ದಾಸರೇಣ್ಯರು ಮತ್ತು ಪೌರಾಣಿಕ ಹಿನ್ನೆಲೆ ವೇಷಭೂಷಣಗಳನ್ನು ಧರಿಸಿ ಸಂಭ್ರಮಪಟ್ಟರು. ಸಮಸ್ತ ಗ್ರಾಮಸ್ಥರು ಶ್ರೀ ದೇವರ ಮುಂದೆ ನಿಂತು ಮಹಿಷಮರ್ದಿನಿ ಯ ಮತ್ತು ತಿರುಪತಿ ವೆಂಕಟರಮಣ ನ ಭಜನೆ ಮಾಡಿ ಕೊನೆಗೆ ಮಂಗಲ ಹಾಡಲಾಯಿತು.


ನಮ್ಮ ಸಮಿತಿಯ ವಿನೂತನ ಈ ಯೋಜನೆಯನ್ನು ಯಶಸ್ವಿಗೊಳಿಸಿದ ಯುವಕರಿಗೆ, ಪ್ರೀತಿಯ ಸಹೋದರಿಯರಿಗೆ, ಶ್ರದ್ಧೆಯ ತಾಯಂದಿರಿಗೆ, ಗೌರವಾನ್ವಿತ ಹಿರಿಯರಿಗೆ ಹೃದಯಾಂತರಾಳದ ಧನ್ಯವಾದವನ್ನು ಸಲ್ಲಿಸುತ್ತಾ ತಾವು ಶ್ರದ್ಧೆಯಿಂದ ಮತ್ತು ಭಕ್ತಿಯಿಂದ ಅರ್ಪಿಸಿದ ಭಜನೆ ಜಗನ್ಮಾತೆ ಕಡಿಯಾಳಿ ಶ್ರೀಮಹಿಷಮರ್ದಿನಿಯ ಪಾದಕಮಲಗಳಿಗೆ ಅರ್ಪಿಸುತ್ತಾ ತಮ್ಮೆಲ್ಲರಿಗೂ ಸನ್ಮಂಗಲ ಉಂಟುಮಾಡಲಿ ಎಂದು ಪ್ರಾರ್ಥಿಸುತ್ತೇನೆ.
🖊️ ಕೆ ರಾಘವೇಂದ್ರ ಕಿಣಿ
ಪ್ರಧಾನ ಕಾರ್ಯದರ್ಶಿ ಜೀರ್ಣೋದ್ದಾರ ಸಮಿತಿ
ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನ

 
 
 
 
 
 
 
 
 
 
 

Leave a Reply