ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಕರಸೇವೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗಿ

ಶುಕ್ರವಾರ ಜೀರ್ಣೋದ್ಧಾರ ಗೊಳ್ಳುತ್ತಿರುವ ಉಡುಪಿ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಕರಸೇವೆಗೆ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶೋಭಾ ಕರಂದ್ಲಾಜೆ ಸ್ವತಹ  ಭಾಗವಹಿಸಿ ಕರಸೇವೆ ನಡೆಸಿದರು. 
ನೆರೆದಿದ್ದ  ಕರಸೇವಕರೊಂದಿಗೆ ಸಚಿವರು ಬೆರೆತು ಹಾರೆ ಹಿಡಿದು ಬುಟ್ಟಿಗೆ ಮಣ್ಣು ತುಂಬಿಸಿದರು. ಸ್ವತಹ ಸಾಮಾನ್ಯ ಸ್ವಯಂ ಸೇವಕರಂತೆ ಒಂದು ತಾಸುಗಳ ಕಾಲ  ಜಗನ್ಮಾತೆ
ಮಹಿಷಮರ್ದಿನಿಯ ಸೇವೆ ನಡೆಸಿದರು.
ದೇವಿಯ ಕಾರ್ಯದಲ್ಲಿ ಭಾಗಿಯಾಗಿರುವುದು ಮನಸ್ಸಿಗೆ ಸಂತಸವಾಗಿದೆ. ಜಿಲ್ಲೆಯಲ್ಲಿ ಕರಸೇವೆಯಿಂದಲೇ ಹಲವು ದೇವಸ್ಥಾನ ನಿರ್ಮಾಣ ಹಾಗು ಜೀರ್ಣೋದ್ದಾರವಾಗಿದೆ~  ಕೇಂದ್ರ  ಸಚಿವೆ ಶೋಭಾ ಕರಂದ್ಲಾಜೆ 
ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ, ಉಡುಪಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ ಅಂಚನ್, ನಗರಸಭಾ ಸದಸ್ಯರಾದ ರಜನಿ ಹೆಬ್ಬಾರ್, ಮೋಹನ್ ಉಪಾಧ್ಯಾಯ,  ಶಿಲ್ಪಾ ರಘುಪತಿ ಭಟ್, ವೀಣಾ ಶೆಟ್ಟಿ, ಗೀತಾಂಜಲಿ ಸುವರ್ಣ, ಭಾರತಿ ಚಂದ್ರಶೇಖರ್, ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಅರ್ಚಕರು ಕಾರ್ಯನಿರ್ವಹಣಾಧಿಕಾರಿ ಸಿಬ್ಬಂದಿಗಳು ಸಮಸ್ತ ಗ್ರಾಮಸ್ಥರು, ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
 
 
 
 
 
 
 
 
 

Leave a Reply