ಜಿಲ್ಲಾಧಿಕಾರಿಗೆ ರಾಖಿ ಕಟ್ಟಿದ ಕೊರೊನಾ ವಾರಿಯರ್ ರಾಜೀವಿ

ನಡುರಾತ್ರಿಯಲ್ಲೇ ಸ್ವತಃ ಆಟೋ ಚಲಾಯಿಸಿಕೊಂಡು ಗ್ರಾಮದ ಗರ್ಭಿಣಿಗೆ ಆಸ್ಪತ್ರೆಗೆ ದಾಖಲಿಸಿ ಹಳ್ಳಿಯಿಂದ ದೆಹಲಿಯವರೆಗೆ ಸಂಚಲನವನ್ನುಂಟು ಮಾಡಿದ ಕೊರೊನಾ ವಾರಿಯರ್ ಆಶಾ ಕಾರ್ಯಕರ್ತೆ ರಾಜೀವಿ ಅವರು ಇಂದು ಉಡುಪಿ ಜಿಲ್ಲಾಧಿಕಾರಿ ಯವರನ್ನು ಭೇಟಿಯಾಗಿ ರಾಖಿಯನ್ನು ಕಟ್ಟುವ ಮೂಲಕ ವಿನೂತನ ರೀತಿಯಲ್ಲಿ ರಕ್ಷಾ ಬಂಧನವನ್ನು ಆಚರಿಸಿದ್ದಾರೆ.

ಉಚಿತ ರಿಕ್ಷಾ ಸೇವೆ ನೀಡುತ್ತಿರುವ ರಾಜೀವಿ ಅವರು, ತನ್ನ ರಿಕ್ಷಾವನ್ನು ಕೊರೊನಾಗೆ ಅನುಗುಣವಾಗಿ ಬದಲಾವಣೆ ಮಾಡಿ ಕೊರೊನಾ ತಡೆಗಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ವಿಭಿನ್ನ ರೀತಿಯಲ್ಲಿ ಜನ ಜಾಗೃತಿ ಮೂಡಿಸುತ್ತಿದ್ದಾರೆ.

ಇದೊಂದು ಅವಿಸ್ಮರಣೀಯ ಕ್ಷಣ ಎಂದು ಉಡುಪಿ ಜಿಲ್ಲಾಧಿಕಾರಿಯವರು ಸಂತಸವನ್ನು ವ್ಯಕ್ತಪಡಿಸಿ ಕೊರೊನಾ ವಾರಿಯರ್ ಗೆ ಶುಭ ಹಾರೈಸಿದ್ದಾರೆ.

Leave a Reply