ಉಡುಪಿ :- ಜೇಸಿಐ ಉಡುಪಿ ಸಿಟಿ ಇದರ ಆಶ್ರಯದಲ್ಲಿ ಜೇಸಿಐ ಉಡುಪಿ ಇಂದ್ರಾಳಿ ಮತ್ತು ಮಣಿಪಾಲ ಹಿಲ್ ಸಿಟಿ ಇದರ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣಿ ಕಾಯ೯ಕ್ರಮ ನಗರದ ಕ್ರಿಶ್ಚಿಯನ್ ಪ.ಪೂ ಕಾಲೇಜಿನಲ್ಲಿ ಮಾ.8 ರಂದು ನಡೆಯಿತು.
ಕಾಯ೯ಕ್ರಮದ ಅಧ್ಯಕ್ಷತೆಯನ್ನು ಉಡುಪಿ ಸಿಟಿ ಅಧ್ಯಕ್ಷ ಡಾ|| ವಿಜಯ್ ನೆಗಳೂರು ವಹಿಸಿದ್ದರು. ಮುಖ್ಯ ಅತಿಥಿ ವಲಯ ಮಹಿಳಾ ಜೆಸಿ ನಿದೇ೯ಶಕಿ ಅಕ್ಷತಾ ಗಿರೀಶ್ ಶುಭ ಹಾರೈಸಿದರು.ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಶ್ವೇತಾ ಶ್ರೀನಿವಾಸ್, ಜೇಸಿ ಅಧ್ಯಕ್ಷರುಗಳಾದ ಡಾ|| ಗುರುಮೂತಿ೯, ಕಿತೇ೯ಶ್ ಉಪಸ್ಥಿತರಿದ್ದರು.
ಈ ಸಂದಭ೯ದಲ್ಲಿ ಆಶಾ ಕಾಯ೯ಕತ೯ರುಗಳಿಗೆ, ಪೂವಾ೯ಧ್ಯಕ್ಷೆ ಉದ್ಯಮಿ ತನುಜಾ ಮಾಬೆನ್, ಶ್ವೇತಾ ಶ್ರೀನಿವಾಸ್ ಮುಂತಾದವರನ್ನು ಗೌರವಿಸಲಾಯಿತು. ಡಾ|| ಚಿತ್ರಾ ನೆಗಳೂರು ವಂದಿಸಿದರು.
ಕಾಯ೯ಕ್ರಮದಲ್ಲಿ ವಲಯ ಉಪಾಧ್ಯಕ್ಷ ಹರೀಶ್ ಶೇಟ್, ಸಂಯೋಜಕ ಉದಯ ನಾಯ್ಕ, ಜಗದೀಶ್ ಶೆಟ್ಟಿ, ಸಂದೀಪ್ ಕುಮಾರ್, ಮುಂತಾದವರಿದ್ದರು.ಕಾಯ೯ಕ್ರಮದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಿತು.






