Janardhan Kodavoor/ Team KaravaliXpress
23.4 C
Udupi
Saturday, February 4, 2023
Sathyanatha Stores Brahmavara

ಉಡುಪಿ ತುಳುಕೂಟದದಿಂದ ಬಿ.ಜಯಕರ್ ಶೆಟ್ಟಿ ಇಂದ್ರಾಳಿಗೆ ಅಭಿನಂದನೆ

​​ಸಹಕಾರಿ ರಂಗದಲ್ಲಿ ಇನ್ನಷ್ಟು ಕೆಲಸ ಮಾಡಲು ಉತ್ತೇಜನ ನೀಡಿದಂತಾಗಿದೆ – ಸಹಕಾರಿ ರತ್ನ ಬಿ.ಜಯಕರ್ ಶೆಟ್ಟಿ ಇಂದ್ರಾಳಿ

ಉಡುಪಿ: ಉಡುಪಿಯ ಬಡಗುಬೆಟ್ಟು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಹಾಗೂ ಉಡುಪಿ ತುಳುಕೂಟದಂತಹ ಸಂಘಟನೆಗಳು ಬೆನ್ನೆಲುಬಾಗಿ ನಿಂತಿದ್ದರಿ೦ದ ಸಹಕಾರಿ ರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಲು ನನಗೆ ಸಾಧ್ಯವಾಗಿದೆ.

ಸಹಕಾರ ರತ್ನ ಗೌರವದ ಸ್ಥಾನಮಾನ ದೊರಕಿರುವುದರಿಂದ ಸಹಕಾರಿ ರಂಗದಲ್ಲಿ ಇನ್ನಷ್ಟು ಕೆಲಸ ಮಾಡಲು ಉತ್ತೇಜನ ನೀಡಿದಂತಾಗಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ, ಸಹಕಾರಿ ರತ್ನ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
ಕರ್ನಾಟಕ ಸರಕಾರದ ಸಹಕಾರಿ ಇಲಾಖೆಯಿಂದ ಪ್ರತಿಷ್ಠಿತ ಸಹಕಾರಿ ರತ್ನ ಪ್ರಶಸ್ತಿ ಪಡೆದ ಬಳಿಕ ಉಡುಪಿ ತುಳುಕೂಟದ ವತಿಯಿಂದ ಉಡುಪಿಯ ಜಗನ್ನಾಥ ಸಭಾಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ತುಳುಕೂಟದ ಗೌರವ ಸ್ವೀಕರಿಸಿ ಮಾತನಾಡಿದರು.

 

ಉಡುಪಿ ತುಳುಕೂಟದ ಗೌರವ ಸಲಹೆಗಾರ ಡಾ.ಗಣನಾಥ ಎಕ್ಕಾರ್ ಅಭಿನಂದನಾ ಭಾಷಣ ಮಾಡಿ, ಸಹಕಾರಿ ರಂಗ, ಸಾಮಾಜಿಕ,  ಧಾರ್ಮಿಕ ರ೦ಗ,ಸಾ೦ಸ್ಕೃತಿಕ ರಂಗದಲ್ಲಿ ಅವಿರತವಾಗಿ ಸೇವೆ ಮಾಡುತ್ತಿರುವ ಇಂದ್ರಾಳಿ ಜಯಕರ್ ಶೆಟ್ಟಿ ಅವರು ರಾಷ್ಟ್ರೀಯ  ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆಯುವಂತಾಗಲಿ ಎಂದು ಆಶಿಸಿದರು.

ಉಡುಪಿ ತುಳುಕೂಟದ ಗೌರವ ಸಲಹೆಗಾರ ವಿಶ್ವನಾಥ ಶೆಣೈ ಉಡುಪಿ, ಉಡುಪಿ ತುಳುಕೂಟದ ಪದಾಧಿಕಾರಿಗಳಾದ ಮನೋರಮ ಎಂ.ಶೆಟ್ಟಿ, ಭುವನ ಪ್ರಸಾದ್ ಹೆಗ್ಡೆ, ಬಿ.ಪ್ರಭಾಕರ್ ಭಂಡಾರಿ, ದಯಾನಂದ ಕೆ.ಶೆಟ್ಟಿ ದೆಂದೂರು, ಎಸ್.ಎ.ಕೃಷ್ಣಯ್ಯ, ಜಯಕರ್ ಶೆಟ್ಟಿ ಅವರ ಸಹೋದರರು ಉಪಸ್ಥಿತರಿದ್ದರು.
ಉಡುಪಿ ತುಳುಕೂಟದ ಗೌರವ ಉಪಾಧ್ಯಕ್ಷ ದಿವಾಕರ್ ಸನಿಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರ್ ವರದಿ ಮಂಡಿಸಿದರು. ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಚೈತನ್ಯ ಎಂ.ಜಿ.ವ೦ದಿಸಿದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!