ಜನಾರ್ದನ ಹಾವಂಜೆಯವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಹಯೋಗದಲ್ಲಿ ಕಲಾವಿದರಾದ ಜನಾರ್ದನ ಹಾವಂಜೆಯವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉಡುಪಿಯ ಬಡಗುಪೇಟೆಯಲ್ಲಿರುವ ಹತ್ತು ಮೂರು ಇಪ್ಪಂತ್ತೆoಟು ಗ್ಯಾಲರಿಯಲ್ಲಿ ಯು. ವಿಶ್ವನಾಥ ಶೆಣೈಯವರು ಉದ್ಘಾಟಿಸಿ, ನಮ್ಮಲ್ಲಿನ ಅಭಿರುಚಿ ಗಳನ್ನು ಬೆಳೆಸಿಕೊಳ್ಳುತ್ತ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ನಾವೆಲ್ಲ ಮಾಡಬೇಕು ಎಂದು ಅಭಿಪ್ರಾಯ ವಿತ್ತರು.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಹಾಗೂ ಖ್ಯಾತ ಸಾಹಿತಿ ಡಾ. ಕಾತ್ಯಾಯನಿ ಕುಂಜಿಬೆಟ್ಟು ಹಾಗೂ ಯಕ್ಷ ರಂಗಾಯಣದ ನಿರ್ದೇಶಕರಾದ ಜೀವನರಾಂ ಸುಳ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿಗಳಾದ ರವಿರಾಜ್ ಹೆಚ್.ಪಿ.ಯವರು ಸ್ವಾಗತಿಸಿ, ರಾಜೇಶ್ ಭಟ್ ಪಣಿಯಾಡಿ ಧನ್ಯವಾದವಿತ್ತರು.
ಹಾವಂಜೆಯವರು ನಿಸರ್ಗದ ಬಗೆಗಿನ ಒಳನೋಟಗಳನ್ನು “ಹಳೆ ಬೇರು ಹೊಸ ಚಿಗುರು” ಶೀರ್ಷಿಕೆಯಡಿಯಲ್ಲಿ ತಾವೇ ಸ್ವತಃ ತಯಾರಿಸಿರುವ ಕಾಗದಗಳ ಮೇಲೆ ಜಲವರ್ಣ ಮಾಧ್ಯಮದಲ್ಲಿ ಅಭಿವ್ಯಕ್ತಿಸಿರುವ ಸುಮಾರು ನಲವತ್ತನಾಲ್ಕು ಕಲಾಕೃತಿಗಳು ಪ್ರದರ್ಶನಕ್ಕಿಟ್ಟಿದ್ದು ಕಲಾ ಪ್ರದರ್ಶನವು 14ನೆಯ ಡಿಸೆಂಬರ್ ತನಕ ಬೆಳಿಗ್ಗೆ 11ರಿಂದ ಸಂಜೆ 7ರ ತನಕ ಕಲಾಸಕ್ತರ ವೀಕ್ಷಣೆಗೆ ತೆರೆದಿರುತ್ತದೆ.
 
 
 
 
 
 
 
 
 
 
 

Leave a Reply