ಜನಪದ ಸಾಹಿತ್ಯ ಸಾಮಾನ್ಯರಿಗೆ ಸಹಕಾರಿ~ಗಣೇಶ ಗಂಗೊಳ್ಳಿ

ಕನ್ನಡ ಜಾನಪದ ಪರಿಷತ್ ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಘಟಕ ಹಾಗೂ ಸಂವೇದನಾ​ ​ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಕಂಬದ​ ​ಕೋಣೆ ಇವರ ಸಂಯುಕ್ತ ಆಶ್ರಯದಲ್ಲಿ​ ​ಕನ್ನಡ ಜನಪದ ರಾಜ್ಯೋತ್ಸವ ಕಾರ್ಯಕ್ರಮ ಸಂವೇದನಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಗಣೇಶ ಗಂಗೊಳ್ಳಿ “ಜನಸಾಮಾನ್ಯರ ಬದುಕಿನ ಸಾರವೇ ಆಗಿರುವ ಜನಪದ ಸಾಹಿತ್ಯವನ್ನು ಉಳಿಸಿ, ಮುಂದಿನ​ ​ತಲೆಮಾರಿಗೆ ವರ್ಗಾಯಿಸುವ ಗುರುತರ ಜವಬ್ದಾರಿ ನಮ್ಮ ಮೇಲಿದೆ.
ಆಯಾಯ ಕಾಲದ ಜನರ ಜೀವನ,​ ​ಆಚಾರ ವಿಚಾರ, ಸಾಹಿತ್ಯ, ಸಂಸ್ಕೃತಿಯನ್ನು ಕಟ್ಟಿಕೊಡುವ ಜನಪದ ಸಾಹಿತ್ಯ ಅಂದಿನ ಇತಿಹಾಸವನ್ನು ತೆರೆದಿಡುತ್ತದೆ.​  ತಮ್ಮೊಳಗಿನ ಬೇಗುದಿ, ಅಸಮಾಧಾನ, ಸಂತೋಷ, ಸಂಭ್ರಮವನ್ನು ​ಹೊರ ಹಾಕಲು​ ​ಜನಪದ ಸಾಹಿತ್ಯ ಸಾಮಾನ್ಯರಿಗೆ ಸಹಕಾರಿಯಾಗಿತ್ತು.” ಎಂದರು. 
 
ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷಡಾ. ಎಸ್. ಬಾಲಾಜಿಯವರ ನಿರ್ದೇಶನದಂತೆ ಯಳಜಿತದ ಜಾನಪದ ಕಲಾವಿದ ರಾಮ ಮರಾಠಿಹಾಗೂ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂವೇದನಾ ಕಾಲೇಜಿನ ವಿದ್ಯಾರ್ಥಿನಿ ಕು.ರಾಜೇಶ್ವರಿ​ಯ​ವರನ್ನು ಸನ್ಮಾನಿಸಲಾಯಿತು.​ ​ಸಭೆಯ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಡಾ.ಸುಬ್ರಹ್ಮಣ್ಯ ಭಟ್ ವಹಿಸಿದ್ದರು. 
 
​​ಮುಖ್ಯ ಅತಿಥಿಗಳಾಗಿ ಕಸಾಪ ಬೈಂದೂರು ತಾಲೂಕಿನ ಅಧ್ಯಕ್ಷ ರವೀಂದ್ರಎಚ್., ಕನ್ನಡ ಜಾನಪದ ಪರಿಷತ್ ಬೈಂದೂರು ತಾಲೂಕು ಅಧ್ಯಕ್ಷ ನಳೀನ್‌ಕುಮಾರ್ ಶೆಟ್ಟಿ,​ ​ಸಾಹಿತಿಗಳಾದ ಪುಂಡಲೀಕ್ ನಾಯಕ್, ಬಿ.ಪ್ರವೀಣ ಶೆಟ್ಟಿ, ಸಂವೇದನಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಸಂಧ್ಯಾ ಭಟ್ ಉಪಸ್ಥಿತರಿದ್ದರು. ಕು. ಅನುಶ್ರೀ ಸ್ವಾಗತಿಸಿ, ಕು. ಪ್ರತಿಮಾ ಕಾರ್ಯಕ್ರಮ ನಿರೂಪಿಸಿ, ಕು. ಮುಜೈನಾ ವಂದಿಸಿದರು.   ​​
 
 
 
 
 
 
 
 
 
 
 

Leave a Reply