ಕಾಪುವಿನಲ್ಲಿ ಜನಾಂದೋಲನ ಜನಾಗ್ರಹ ಪ್ರತಿಭಟನೆ.

ಕಾಪು  : ಜನಾಗ್ರಹ ಆಂದೋಲನದ ವತಿಯಿಂದ ರಾಜ್ಯವ್ಯಾಪ್ತಿ  ” ನಾವೂ ಬದುಕಬೇಕು  ” ಎಂಬ ದ್ಯೇಯ ವಾಕ್ಯದಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಜನರು ತಮ್ಮ ತಮ್ಮ ಮನೆಯಿಂದ ಹೊರಗೆ ಬಂದು ಕಾಲಿ ಬಟ್ಟಲು , ಸೌಟು , ಕಾಲಿ ಚೀಲ, ಹಾಗೂ ಘೋಷಣಾ ಫಲಕ ಹಿಡಿದು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸರಕಾರದ ಮುಂದೆ, ಲಾಕ್ಡೌನ್ ವತಿಯಿಂದ ನಮಗೆ ಕೆಲಸವಿಲ್ಲದೆ ಅನ್ನ ಆಹಾರಕ್ಕೆ ತೊಂದರೆ ಆಗಿದ್ದು , ಕೂಡಲೇ ನಮಗೆ ಪಡಿತರ ಹಾಗೂ 5000 ರೂಪಾಯಿ ಪರಿಹಾರ ಧನ ನೀಡಬೇಕು. ಕೊರೋನ ಪೀಡಿತರಿಗೆ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡಿಸಬೇಕು. 
ಕೊರೋನ ದಿಂದ ಮರಣ ಹೊಂದಿದ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ಧನ ನೀಡಬೇಕು. ರಾಜ್ಯದಲ್ಲಿ ಇರುವ ಎಲ್ಲಾ ಪ್ರಜೆಗಳಿಗೆ ಕೂಡಲೇ ಲಸಿಕೆ ಹಾಕಿಸಲು ಮುಂದಾಗಬೇಕು. ಬೆಡ್ ಗಳು , ಆಮ್ಲಜನಕದ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕೆಂದು ಆಗ್ರಹಿಸಿದರು.
ಈ ಪ್ರತಿಭಟನೆಗೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಜಿಲ್ಲಾ ಉಪಾ​​ಧ್ಯಕ್ಷರಾದ ಅನ್ವರ್  ಅಲಿ ಕಾಪು ,ಒಕ್ಕೂಟದ ಕಾಪು ತಾಲೂಕು ಕೋಶಾಧಿಕಾರಿ ನಸೀರ್ ಅಹಮದ್ ಶರ್ಫುದ್ದೀನ್ ಬೆಂಬಲ ನೀಡಿ ಭಾಗವಹಿಸಿದರು.
 
 
 
 
 
 
 
 
 
 
 

Leave a Reply