Janardhan Kodavoor/ Team KaravaliXpress
23.6 C
Udupi
Friday, December 2, 2022
Sathyanatha Stores Brahmavara

ಜಾಂಬೂರು :ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಸನ್ಮಾನ

74ನೇ ಉಳ್ಳೂರು ಗ್ರಾಮದ ಜಾಂಬೂರು ಸ.ಕಿ.ಪ್ರಾ.ಶಾಲಾ ವಠಾರದಲ್ಲಿ 20ನೇ ವರುಷದ ಏಕದಂತ ಸಾರ್ವಜನಿಕ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯಿತು.

     ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಶಾಲಾಭಿವೃದ್ಧಿ ಸಮಿತಿಯವರು ಊರಿನ ಪ್ರಮುಖರಾದ ಶಾಲಾಭಿವೃದ್ಧಿ ಯಲ್ಲಿ ಸಹಕರಿಸಿದ ಪ್ರಮುಖರಾದ ಉಮೇಶ್ ರಾವ್,ಚಿಟ್ಟೆ ರಾಜಗೋಪಾಲ ಹೆಗ್ಡೆ,ಡಾ.ಸುಬ್ರಹ್ಮಣ್ಯ ರಾವ್ ಇವರಿಗೆ ಗಣೇಶೋತ್ಸವ ಸಮಿತಿ ವೇದಿಕೆಯಲ್ಲಿ ಸಾರ್ವಜನಿಕ ಸನ್ಮಾನ ವನ್ನು ಮಾಡಿದರು.

     ಸಭೆಯ ಅಧ್ಯಕ್ಷತೆ ಯನ್ನುಸ್ಥಳೀಯ ಬನಶಂಕರಿ ದೇಗುಲದ ಮುಖ್ಥೇಶ್ವರ ಸಂಪಿಗೇಡಿ ಸಂಜೀವ ಶೆಟ್ಟಿ ವಹಿಸಿಕೊಂಡರು. ಅತಿಥಿಗಳಾಗಿ ನಾರಾಯಣ ನಾಯ್ಕ್ ಗಣೇಶೋತ್ಸವ ಸಮಿತಿ ಅಧ್ಯಕ್ಷ, ಕೃಷ್ಣ ಕುಲಾಲ್ ಕಾರ್ಯದರ್ಶಿ,ವೈಶಾಲಿ ನಾಗೇಂದ್ರ ಯಡಿಯಾಳ್ ಅಸ್ಸಿಸ್ಟಂಟ್ ಪ್ರೊಫೆಸಾರ್ ಸ.ಪ್ರ.ದರ್ಜೆ ಕಾಲೇಜು ಭಟ್ಕಳ್, ಗ್ರಾ.ಪ. ಸದಸ್ಯ ಶಂಕರ ಶೆಟ್ಟಿ,ಪ್ರಸಾದ್ ಶೆಟ್ಟಿ, ರೋಹಿತ್ ಶೆಟ್ಟಿ (ಮಾಜಿ ಜಿ.ಪ.ಸದಸ್ಯ) ಮನೋರಾಜ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

     ಜಾಂಬೂರು ಸ.ಕಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯಿಣಿ ಶ್ರೀಮತಿ ಭಾಗ್ಯಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!