ಮಾ.20​ರಂದು ​ಮರವಂತೆಯಲ್ಲಿ “​ರಾಜ್ಯಮಟ್ಟದ ಜಲಜಾನಪದೋತ್ಸವ – 2022′

ಉಡುಪಿ, ಮಾ. 9: “ರಾಜ್ಯ ಮಟ್ಟದ​ ಜಲ ಜಾನಪದೋತ್ಸವ-2022′​ ‘ಮರವಂತೆ ಸಮುದ್ರ ಕಿನಾರೆ ಬಳಿ​ ಮಾ. 20ರಂದು ಬೆಳಗ್ಗೆ 8ರಿಂದ ರಾತ್ರಿ​ 9ರ ವರೆಗೆ ನಡೆಯಲಿದೆ ಎಂದು ಕನ್ನಡ​ ಜಾನಪದ ಪರಿಷತ್‌ ರಾಜ್ಯಾಧ್ಯಕ್ಷ ಡಾ|​ ಎಸ್‌. ಬಾಲಾಜಿ ಪತ್ರಿಕಾಗೋಷ್ಠಿಯಲ್ಲಿ​ ತಿಳಿಸಿದರು.
 

ಸಮುದ್ರ ಪೂಜೆಯೊಂದಿಗೆ ಉತ್ಸವ​ ಆರಂಭವಾಗಲಿದ್ದು ಮರವಂತೆಯ​ ​ಮಹಾರಾಜಸ್ವಾಮಿ ದೇವಸ್ಥಾನದಿಂದ​ ಸಮಾರಂಭದ ಸಭಾಂಗಣಕ್ಕೆ​ ಮೆರವಣಿಗೆ ಇರಲಿದೆ. ಗ್ರಾ.ಪಂ.​ ಅಧ್ಯಕ್ಷೆ ರುಕ್ಮಿಣಿ ರಾಷ್ಟ್ರದ್ವಜಾರೋಹಣ​ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ​ ಸಚಿವ. ಎಸ್‌. ಅಂಗಾರ​ ಉದ್ಬಾಟಿಸಲಿದ್ದಾರೆ. ವಿವಿಧ ವಸ್ತು​ ಪ್ರದರ್ಶನಗಳನ್ನು ಸಚಿವ ಸುನಿಲ್‌​ ಕುಮಾರ್‌, ಸಂಸದ ರಾಘವೇಂದ್ರ,​ ಶಾಸಕ ಸುಕುಮಾರ್‌ ಶೆಟ್ಟಿ ಅವರು​ ಉದ್ಭಾಟಿಸಲಿದ್ದಾರೆ​. 

ಪರಿಷತ್ತಿನ ಕರಾವಳಿ ವಿಭಾಗೀಯ​ ಸಂಚಾಲಕಿ​ ​ಡಾ। ಭಾರತಿ ಮರವಂತೆ​ ಮಾತನಾಡಿ,  ಜನಪದ ಕಲಾ​ ಪ್ರದರ್ಶನದ ಜತೆಗೆ ಸಾಂಸ್ಕೃತಿಕ​ ವೈಭವದ ಪ್ರದರ್ಶನ ನಡೆಯಲಿದೆ​ ಎಂದು ಹೇಳಿದರು.​ ಸಮಾರೋಪ​ ಅಪರಾಹ್ನ 4ಕ್ಕೆ ನಡೆಯುವ​ ಸಮ್ಮಾನ ಮತ್ತು ಸಮಾರೋಪದಲ್ಲಿ​ ಸಚಿವ ಕೋಟ ಶ್ರೀನಿವಾಸ​ ​ಪೂಜಾರಿ
ಭಾಗವಹಿಸಲಿದ್ದಾರೆ. ಜಾನಪದ​ ವಿದ್ದಾಂಸರು, ಹಾಗೂ ಜಾನಪದ​ ಸಾಧಕರಿಗೆ​ ​ಸಮ್ಮಾನ ನಡೆಯಲಿದೆ​ ಎಂದು ಜಿಲ್ಲಾಧ್ಯಕ್ಷೆ ಡಾ| ನಿಕೇತನಾ​ ಹೇಳಿದರು.

ದ.ಕ. ಜಿಲ್ಲಾಧ್ಯಕ್ಷ ಡಾ| ಪ್ರಶಾಂತ್‌​ ಕುಮಾರ್‌, ಉ.ಕ. ಜಿಲ್ಲಾಧ್ಯಕ್ಷ​ ಡಾ| ಪ್ರಕಾಶ್‌ ನಾಯಕ್‌, ಕಾರ್ಯ​ ಕಾರಿ ಸಮಿತಿಯ ರವಿ ಮಡಿವಾಳ​ ಮರವಂತೆ, ದಯಾನಂದ ಬಳೆಗಾರ್‌​ ಉಪಸ್ಥಿತರಿದ್ದರು. ಪರಿಷತ್‌ನ ಕರಾವಳಿಯ ವಿಭಾಗೀಯ ಘಟಕ ಮತ್ತು​ ಲಯನ್ಸ್‌ ಕ್ಲಬ್‌, ಕೋಸ್ಟಲ್‌ ಕುಂದಾಪುರ ಸಂಸ್ಥೆಯ ಸಹಯೋ​ಗವಿದೆ.

 
 
 
 
 
 
 
 
 

Leave a Reply