Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ವಿದೇಶದಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ ಇಲ್ಲ

ವಿದೇಶದಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿ ಇರಬೇಕೆಂಬ ನಿಯಮವನ್ನು ಹಿಂಪಡೆ ಯಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೊಸ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದ್ದು, ವಿದೇಶದಿಂದ ಬರಲಿರುವ ಪ್ರಯಾಣಿಕರು ಕೊರೋನಾ ನೆಗಟಿವ್ ವರದಿ ತೋರಿಸಿದರೆ ಕ್ವಾರಂಟೈನ್ ನಲ್ಲಿರುವ ಅಗತ್ಯವಿಲ್ಲ ಎಂದು ತಿಳಿಸಿದೆ.

ವಿದೇಶದಿಂದ ಆಗಮಿಸಲಿರುವ ಪ್ರಯಾಣಿ ಕರು 72 ಗಂಟೆಗಳ ಹಿಂದೆ ಪಡೆದ ಕೊರೋನಾ ನೆಗಟಿವ್ ವರದಿ ನೀಡಬೇಕು ಎಂದು ತಿಳಿಸಿದೆ. ಪರೀಕ್ಷೆ ಮಾಡಿಸಿಕೊಳ್ಳದ ಪ್ರಯಾಣಿಕರಿಗೆ 14 ದಿನದ ಕಡ್ಡಾಯ ಹೋಂ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!