ಶಾಂತಿ ಮಾತುಕತೆ ಒಂದಡೆ- ಮತ್ತೊಂದಡೆ ರಣಭೀಕರ ಯುದ್ಧ

ಕೀವ್ (ಉಕ್ರೇನ್)- ಒಂದು ಕಡೆ ರಷ್ಯಾ ಹಾಗೂ ಉಕ್ರೇನ್ ನಡುವೆ ಬೆಲಾರಸ್ ನಲ್ಲಿ ಶಾಂತಿ ಮಾತುಕತೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ರಣ ಭೀಕರ ಯುದ್ಧ ನಡೆಯುತ್ತಿದೆ.

ಯುದ್ಧ ಆರಂಭಗೊಂಡ ನಂತರ ಗೋಮೆಲ್ ನಲ್ಲಿ ನಡೆದ ಒಂದು ಸುತ್ತಿನ ಮಾತುಕತೆ ವಿಫಲವಾದ ಕಾರಣ ಈಗ ಬೆಲಾರಸ್ ನಲ್ಲಿ ಎರಡನೆ ಸುತ್ತಿನ ಮಾತುಕತೆ ನಡೆಯುತ್ತಿದೆ. ಶಾಂತಿ ಮಾತುಕತೆಯಲ್ಲಿ ಸ್ವತಃ ಉಕ್ರೇನ್ ದೇಶದ ರಕ್ಷಣಾ ಸಚಿವರು ಭಾಗಿಯಾಗಿದ್ದಾರೆ. ಇದರಲ್ಲಿ ರಷ್ಯಾದ ಪ್ರತಿನಿಧಿಗಳು ಕೂಡ ಪಾಲ್ಗೊಂಡಿದ್ದಾರೆ.

ನಮ್ಮನ್ನು ಎದುರಿಸಲು ಬಂದ ರಷ್ಯಾದ 5 ಸಾವಿರ ಸೈನಿಕರನ್ನು ಹತ್ಯೆಮಾಡಿದ್ದೇವೆ. 191 ಯುದ್ಧ ಟ್ಯಾಂಕರ್, 29 ಫೈಟರ್ ಜೆಟ್, 29 ಹೆಲಿಕಾಪ್ಟರ್ ಹೊಡೆದುರುಳಿಸಿದ್ದೇವೆ ಎಂದು ಉಕ್ರೇನ್ ಮಾಹಿತಿ ನೀಡಿದೆ. ಈ ಸುದ್ಧಿಯನ್ನು ಬಿಬಿಸಿ ವರದಿ ಮಾಡಿದೆ.

ಇನ್ನು ಉಕ್ರೇನ್ ಜೈಲಿನಲ್ಲಿರುವ ಸೇನಾ ಅನುಭವ ಇರುವ ಖೈದಿಗಳನ್ನು ರಿಲೀಸ್ ಮಾಡಿ ಅವರನ್ನು ಯುದ್ಧದಲ್ಲಿ ತೊಡಗಿಸಿಕೊಳ್ಳಲು ಉಕ್ರೇನ್ ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ.

ಇದೇ ವೇಳೆ ರಷ್ಯಾ ನಡೆಸಿದ ದಾಳಿಯಿಂದ ಉಕ್ರೇನ್ ನಲ್ಲಿರುವ 16 ಮಕ್ಕಳು ಮೃತರಾಗಿದ್ದಾರೆ. ಸದ್ಯ ಈ ಯುದ್ಧದಿಂದ ಉಕ್ರೇನ್ ನಲ್ಲಿ 4 ಲಕ್ಷ ನಿರಾಶ್ರಿತರಾಗಿದ್ದಾರೆ. ಎಂದು ಭಾರತದಲ್ಲಿನ ಉಕ್ರೇನ್ ರಾಯಭಾರಿ ಡಾ.ಇಗೊರ್ ಪೊಲಿಖಾ ಅವರು ದೆಹಲಿಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply