ಬುರ್ಜ್ ಖಲೀಫಾ ಮೇಲೆ ತ್ರಿವರ್ಣಧ್ವಜ ಹಾರಿಸಿ ಭಾರತದೊಂದಿಗೆ ನಾವಿದ್ದೇವೆ ಎಂದ ಯುಎಇ

ದುಬೈ: ಭಾರತದಲ್ಲಿ ಕೊರೋನಾ ಎರಡನೇ ಅಲೆಗೆ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ವಿಶ್ವದಲ್ಲೇ ಹೆಚ್ಚಿನ ಸೋಂಕಿತರನ್ನು ದಾಖಲಿಸುವತ್ತ ಭಾರತ ದಾಪುಗಾಲಿಡುತ್ತಿದೆ. ಈ ಮಧ್ಯೆ ವಿಶ್ವದ ಹಲವು ರಾಷ್ಟ್ರಗಳು ಭಾರತಕ್ಕೆ ಸಹಾಯಹಸ್ತ ಚಾಚಿದ್ದು, ಯುಎಇ ಕೂಡ ಬುರ್ಜ್ ಖಲೀಫಾ ಮೇಲೆ ತ್ರಿವರ್ಣ ಧ್ವಜ ಹಾರಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದೆ.

ಕೊರೋನಾ ಸಂಕಷ್ಟದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ನೀಡಿರುವ ಯುಎಇ, ಬುರ್ಜ್ ಖಲೀಫಾ ಮೇಲೆ ತ್ರಿವರ್ಣ ಧ್ವಜ ಹಾರಿಸಿದೆ. ಆ ಮೂಲಕ ಸಂಕಷ್ಟದಲ್ಲಿ ನಿಮ್ಮೊಂದಿಗೆ ನಿಲ್ಲುತ್ತೇವೆ ಎಂಬ ಧೈರ್ಯ ನೀಡಿದೆ. ಸಂಕಷ್ಟ ಹಾಗೂ ಸವಾಲಿನ ಸಂದರ್ಭದಲ್ಲಿ ಭಾರತಕ್ಕೆ ಹಾಗೂ ಭಾರತೀಯರಿಗೆ ಭರವಸೆ, ಪ್ರಾರ್ಥನೆ ಹಾಗೂ ಬೆಂಬಲವನ್ನು ಸೂಚಿಸುತ್ತೇವೆ. “ಸ್ಟೇ ಸ್ಟ್ರಾಂಗ್ ಇಂಡಿಯಾ” ಎಂದು ಬುರ್ಜ್ ಖಲೀಫಾದ ಅಧಿಕೃತ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಭಾರತದ ಜೊತೆಗಿದ್ದೇವೆ ಎಂಬ ಸಂದೇಶವನ್ನು ಸಾರಲಾಗಿದೆ.

 

ಬುರ್ಜ್ ಕಟ್ಟಡ ಮಾತ್ರವಲ್ಲದೇ ಯುಎಇಯಲ್ಲಿರೋ ಹಲವು ಪ್ರಮುಖ ಸ್ಥಳ ಹಾಗೂ ಲ್ಯಾಂಡ್ ಮಾರ್ಕ್ ಗಳ ಮೇಲೂ ತ್ರಿವರ್ಣ ಧ್ವಜ ಹಾರಿಸಲಾಗಿದೆ.

 
 
 
 
 
 
 
 
 
 
 

Leave a Reply