ಅಮೆರಿಕ ಫಲಿತಾಂಶ ವಿಳಂಬ ಸಾಧ್ಯತೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಅತೀ ಹೆಚ್ಚು ಸಂಖ್ಯೆಯಲ್ಲಿ ಮೇಲ್ ಇನ್ ಮತಪತ್ರಗಳು ಬಂದಿರುವ ಕಾರಣ ಮತ ಎಣಿಕೆ ಪ್ರಕ್ರಿಯೆ ವಿಳಂಬವಾಗಿ, ಫಲಿತಾಂಶ ಪ್ರಕಟಣೆ ನ.3ಕ್ಕಿಂತ ತಡವಾಗುವ ಸಾಧ್ಯತೆ ಇದೆ. ಈವರೆಗೆ ಒಟ್ಟು 58.7 ಮಿಲಿಯನ್ಗಿಂತಲೂ  ಅಧಿಕ ಮಂದಿ ಮತ ಚಲಾಯಿಸಿದ್ದು,  2016ರ ಚುನಾವಣೆಯ ಆರಂಭಿಕ ಮತದಾನಕ್ಕೆ ಹೋಲಿಸಿದರೆ ಇದು ಅಧಿಕವಾಗಿದೆ.

ಸದ್ಯ ಅಮೆರಿಕ ಮೂಲದ ಎಡಿಸನ್ ರಿಸರ್ಚ್ ಆಂಡ್ ಕ್ಯಾಟಲಿಸ್ಟ್, 50 ರಾಜ್ಯಗಳು ಮತ್ತು ವಾಷಿಂಗ್ಟನ್ ಡಿಸಿಯಲ್ಲಿನ ಚುನಾವಣಾಧಿಕಾರಿಗಳ ಸಮೀಕ್ಷೆಯ ಪ್ರಕಾರ, 2016ರಲ್ಲಿ ಚುನಾವಣಾ ಪೂರ್ವವಾಗಿ 58.3 ಮಿಲಿಯನ್ ಮತಗಳು ಚಲಾವಣೆಯಾಗಿದ್ದವು.  ಕರೊನಾ ಬಿಕ್ಕಟ್ಟಿನ ಮಧ್ಯೆಯೂ ಎಲ್ಲ ರಾಜ್ಯಗಳು ದಾಖಲೆ ಪ್ರಮಾಣದಲ್ಲಿ ಮತದಾನ ಪ್ರಮಾಣವನ್ನು ವರದಿ ಮಾಡುತ್ತಿವೆ.

ಇನ್ನು ತಜ್ಞರ ಅಂದಾಜಿನ ಪ್ರಕಾರ, ಮತ ಎಣಿಕೆಯ ಸಂಪೂರ್ಣ ಪ್ರಕ್ರಿಯೆ ಮತದಾನ ಮುಗಿದ ನಂತರದ ದಿನ ಬೆಳಗ್ಗೆ ಅಥವಾ ಮಧ್ಯಾಹ್ನ ದವರೆಗೂ ನಡೆಯಬಹುದು ಎನ್ನಲಾಗಿದೆ. ಮೆಲ್ ಇನ್ ಮತಪತ್ರಗಳಲ್ಲಿ ಶೇ. 54ರಷ್ಟು ಮತಗಳು 16 ರಾಜ್ಯಗಳಿಂದ ಬಂದಿದ್ದು, ಈ ರಾಜ್ಯಗಳು ಅಧ್ಯಕ್ಷೀಯ ಚುನಾವಣೆ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಅದರಲ್ಲೂ ಈ ಬಾರಿ 18 ರಿಂದ 29 ವರ್ಷದೊಳ ಗಿನವರು ಅತೀವ ಆಸಕ್ತಿ ತೋರಿಸಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 
 
 
 
 
 
 
 
 
 
 

Leave a Reply