ಶಿವಳ್ಳಿ ಕುಟುಂಬ ನಾರ್ತ್ ಅಮೇರಿಕಾ ಕೃಷ್ಣಜನ್ಮಾಷ್ಟಮಿ ಮತ್ತು ಗಣೇಶ ಹಬ್ಬದ ಆಚರಣೆ

ಎಲ್ಲೋ ಒಂದು ಕಡೆ ಓದಿದ ನೆನಪು. ತಾಯಿ ನಾಡಿನಿಂದ ಸಾವಿರಾರು ಮೈಲು ದೂರದಲ್ಲಿ ನೆಲಸಿದ ಒಬ್ಬ ಅನಿವಾಸಿ ಭಾರತೀಯನಿಗೆ ಒಂದು ಇಡೀ ಹಲಸಿನ ಹಣ್ಣನ್ನು ನೋಡಿ ಮನೆಗೆ ತಂದಾಗಾದ ಆನಂದದ ಪರಿ. ಆತ ಬಣ್ಣಿಸಿದ ಖುಷಿ , ಅನುಭವಿಸಿದವರಿಗೆ
ತಾಟುವಂತಿತ್ತು. ಆ ಹಲಸಿನ ಹಣ್ಣಿನ ಜೊತೆ ಹಲಸಿನ ಎಲೆ ಕಡುಬು, ಅರಸಿನ ಎಲೆ ಕಡುಬು ಸಿಕ್ಕಿದರೆ ಯಾವ ಅನುಭವ ಆದೀತು? ಆ ಅನುಭವ ಇದೇ ಆಗಸ್ಟ್ 27 ಮತ್ತು 28ರ ವಾರಾಂತ್ಯದಲ್ಲಿ ಶಿವಳ್ಳಿ ಕುಟುಂಬ ನಾರ್ತ್ ಅಮೇರಿಕಾದ ಸಧಸ್ಯರಿಗೆ ಆಗಿತ್ತು. ಇದು ಬಡಿಸಿದ ಊಟದ ಬಗೆಯಿಂದಲ್ಲ. ಈ ಅನುಭವ ಆಗಿದ್ದು ಶಿವಳ್ಳಿ ಕುಟುಂಬದ ಸದಸ್ಯರು ಸಮರ್ಪಿಸಿದ ಹಲವಾರು ಸಾಂಸ್ಕ್ರತಿಕ ಕಾರ್ಯಕ್ರಮಗಳ ಹಬ್ಬದಿಂದ.

ಏಪ್ರಿಲ್ 2020 ಅಲ್ಲಿ ಸ್ಥಾಪಿತವಾದ ಸಂಘಟನೆಯು ಒಟ್ಟಾರೆ 18 ಚಾಪ್ಟರಗಳಿಂದ ಸುಮಾರು ಆರು ನೂರಕ್ಕೂ ಮೀರಿ ಸದಸ್ಯರನ್ನು ಹೊಂದಿದೆ. ಕೃಷ್ಣಾಷ್ಟಮಿ ಮತ್ತು ಗಣೇಶ ಚತುರ್ಥಿ 2022 ಯ ಪ್ರಯುಕ್ತ ಸಧಸ್ಯರು ಮತ್ತು ಅತಿಥಿ ಕಲಾವಿದರುಗಳಿಂದ
ಸಾಂಸ್ಕೃತಿಕ ಹಬ್ಬವೇ ನೆರವೇರಿತ್ತು. ಯೂಟ್ಯೂಬ್ ಸೈಟ್ ನಲ್ಲಿ ನೇರವಾಗಿ ಪ್ರಸರಿತವಾದ ಕಾರ್ಯಕ್ರಮವನ್ನು ಸಧಸ್ಯರು, ಅವರ ಕುಟುಂಬದವರು ಹಾಗೂ ಹಲವಾರು ಗಣ್ಯರು ಎರಡೂ ದಿನ ಟಿವಿ ಮುಂದೆ ಕುಳಿತು , ಮೊಬೈಲ್ ಅಲ್ಲಿ ನೋಡಿ ಆನಂದಿಸಿದರು. ಆಗಸ್ಟ್
27 ಬೆಳಿಗ್ಗೆ 11 :00 ಗಂಟೆಗೆ ಪ್ರಾರಂಭವಾಗಿ ಆ ದಿನ ಸತತ ನಾಲ್ಕು ಗಂಟೆಗಳಿಗಿಂತಲೂ ಹೆಚ್ಚಾಗಿ ಪ್ರಸರಿತವಾಗಿತ್ತು. ಮಾರನೇ ದಿನ ಆಗಸ್ಟ್ 28 ಸಹ ಅಷ್ಟೇ ಸಮಯ ಕಾರ್ಯಕ್ರಮ ನೇರವಾಗಿ ಪ್ರಸಾರವಾಗಿತ್ತು.

ಮುಖ್ಯ ಅತಿಥಿಯಾಗಿ ಶ್ರೀ ಶ್ರೀನಿವಾಸ್ ಪೆಜತ್ತಾಯರು ಜನ್ಮಾಷ್ಠಮಿಯ ಮಹತ್ವ, ಪೇಜಾವರ ಸ್ವಾಮೀಜಿಯವರು ತಿಳಿಸಿದ ಬ್ರಾಹ್ಮಣ ಧರ್ಮದಲ್ಲಿ 4 G'ಸ್ (ಗೋ, ಗಾಯತ್ರಿ, ಗಂಗಾ ಮತ್ತು ಗೀತಾ) ಮಹತ್ವ ಮತ್ತು ಅದರ ವಿಶೇಷತೆಯನ್ನು ತಿಳಿಸಿದರು. ನಿಟ್ಟೆ
ವಿಶ್ವವಿದ್ಯಾಲಯದ ಉಪಕುಲಪತಿಯಾದ ಶ್ರೀ ಎಂ.ಸ್.ಮೂಡಿತಾಯರು ನಮ್ಮ ಸಂಸ್ಕೃತಿ, ಆಚಾರ-ವಿಚಾರವನ್ನು ಮುಂದಿನ ಜನಾಂಗಕ್ಕೆ ವರ್ಗಾಹಿಸುವುದು ನಮ್ಮೆಲ್ಲರ ಕರ್ತವ್ಯ. ಈ ದೃಷ್ಟಿಯಲ್ಲಿ ಶಿವಳ್ಳಿ ಕುಟುಂಬ ಆಫ್ ನಾರ್ತ್ ಅಮೆರಿಕಾವು ಒಳ್ಳೆಯ ಪ್ರಯತ್ನವನ್ನು
ಮಾಡುತ್ತಿದೆ ಎಂದು ಶ್ಲಾಘಿಸಿದರು. ವಿಖ್ಯಾತ ವಿಶ್ವೇಶ್ವರ ಭಟ್ ಹಾಗು ತಂಡದಿಂದ ಸಂಗೀತ ಸಾಗರವೇ ಹರಿದು ಬಂದಿತ್ತು. ಮೂವತ್ತು ನಿಮಿಷಗಳ ಕಾರ್ಯಕ್ರಮದಲ್ಲಿ ಹಲವಾರು ಕನ್ನಡ, ತುಳು ಹಾಡುಗಳನ್ನು ಹಾಡಿ ವಿಶ್ವೇಶ್ವರ ಭಟ್ ಹಾಗು ತಂಡವು ಸಧಸ್ಯರಿಗೆ ಭರ್ಜರಿ
ಮನರಂಜನೆಯನ್ನು ನೀಡಿತ್ತು. ವಿಶ್ವ ವಿಖ್ಯಾತ ರವಿಚಂದ್ರ ಕೂಳೂರು ಮತ್ತು ತಂಡ ಲಯತರಂಗದಿಂದ ಮೂವತ್ತು ನಿಮಿಷಗಳ ಅಮೋಘ ಸಂಗೀತ ಸವಿಯೂಟ ಶಿವಳ್ಳಿ ಕುಟುಂಬದ ಸಧಸ್ಯರಿಗೆ ದೊರೆತಿತ್ತು. ಕುಟುಂಬದ ಉಪಾಧ್ಯಕ್ಷರಾದ ಶ್ರೀ ಸಂತೋಷ್ ಗೋಳಿ, ಕಾರ್ಯದರ್ಶಿಯಾದ ಶ್ರೀ ಪ್ರಕಾಶ್ ಉಡುಪ, ಹಿರಿಯರ ಚಾವಡಿಯ ಲೀಡ್ ಆದ ಶ್ರೀ ಶ್ರೀವತ್ಸ ಬಲ್ಲಾಳರು ಮತ್ತು ಶ್ರೀಮತಿ ವಾಣಿ ರಾವ್
ಅವರು ಅತಿಥಿಗಳನ್ನೂ ಪರಿಚಯಿಸಿದರು.

ಚಾಪ್ಟರ್ ಸಧಸ್ಯರು ಅಷ್ಟೇ ಅಲ್ಲದೆ ಅತಿಥಿ ಕಲಾವಿದರ ತಂಡದಿಂದ ಸಿಹಿ ಊಟವೇ ಬಡಿಸಲಾಗಿತ್ತು. ಹಾಡು, ಭರತ ನಾಟ್ಯ, ಯಕ್ಷಗಾನ, ನಾಟಕ, ನೃತ್ಯ ಹೀಗೆ ಹಲವು ರೀತಿಯ ಮನೋರಂಜನೆಯನ್ನು ಸವಿಯುವ ಭಾಗ್ಯ ಕುಟುಂಬದ ಸದಸ್ಯರ ಪಾಲಾಗಿತ್ತು.
ಹಿರಿಯರು, ಕಿರಿಯರೆಂದು ಎಲ್ಲಾ ವಯಸ್ಸಿನ ಕಲಾವಿದರು ತಮ್ಮ ಕಲಾ ಕುಶಲತೆಯನ್ನು ಪ್ರದರ್ಶಿಸಿದರು. ರಂಗು ರಂಗಿನ ವೇದಿಕೆಗಳು, ಕಲಾವಿದರ ವೇಷ ಭೂಷಣಗಳು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗನ್ನು ನೀಡಿತ್ತು. ಸುಮಾರು ಒಂಬತ್ತು ಗಂಟೆಗಳ ಸಾಂಸ್ಕೃತಿಕ ಕಾರ್ಯಕ್ರಮವು ಶಿವಳ್ಳಿ ಕುಟುಂಬದ ಆಳವಾದ ಪ್ರತಿಭಾ ಪರಿಚಯವನ್ನು ಮಾಡಿಕೊಟ್ಟಿತು. ಮದುವೆಯ ಊಟದಲ್ಲಿ ಬಗೆ ಬಗೆಯ
ಭಕ್ಷ್ಯಗಳನ್ನು ಕ್ರಮಬದ್ಧವಾಗಿ ಬಡಿಸಿದಂತೆ ಶಿವಳ್ಳಿ ಕುಟುಂಬದ ಸಾಂಸ್ಕೃತಿಕ ಸಮಿತಿಯು ಕಾರ್ಯಕ್ರಮವನ್ನು ಬಹು ಸುಂದರವಾಗಿ ಮೂಡಿ ಬರುವಂತೆ ನೋಡಿಕೊಂಡಿತು. ಯೂಟ್ಯೂಬ್ ಸೈಟಿನಲ್ಲಿ ಸಾವಿರಕ್ಕಿಂತಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮ
ವೀಕ್ಷಣೆಯಾಗಿದ್ದಲ್ಲದೆ ಹಲವರಿಂದ ಪ್ರಶಂಸೆಯನ್ನು ಪಡೆದಿತು . ಅಷ್ಟಮಿ ಉಂಡೆ . ಗಣೇಶ ಚತುರ್ಥಿಯ ಕಡಬಿನ ಜೊತೆ ವೀಕ್ಷಿದ ಎಲ್ಲರೂ ಕಾರ್ಯಕ್ರಮವನ್ನು ಆನಂದಿಸಿದರು.

ಕಲ್ಚರಲ್ ಸಮಿತಿಯ ಲೀಡ್ ಆದ ಶ್ರೀ. ವೆಂಕಟೇಶ್ ಪೊಳಲಿಯವರು, ಸದಸ್ಯರಾದ ಶ್ರೀಮತಿ ಅಕ್ಷತಾ ಮಾವಂತೂರ್, ಶ್ರೀಮತಿ ಲಕ್ಷ್ಮಿ ಪುರಾಣಿಕ್ ಮತ್ತು ಯುವ ಪ್ರತಿಭೆಗಳು ಕಾರ್ಯಕ್ರಮದ ವಿವರಣೆಯನ್ನು ಮನರಂಜನೆಯ ರೀತಿಯಲ್ಲಿ ನಡೆಸಿಕೊಟ್ಟರು.
ಕಾರ್ಯಕ್ರಮದ ಕೊನೆಯಲ್ಲಿ ಕುಟುಂಬದ ಅಧ್ಯಕ್ಶರಾದ ಶ್ರೀ ಪ್ರಶಾಂತ್ ಕುಮಾರ್ ಮಟ್ಟು ಅವರು ಧನ್ಯವಾದವನ್ನು ಸಮರ್ಪಿಸುವರೊಂದಿಗೆ 2 ದಿನದ ಕಾರ್ಯಕ್ರಮವು ಮುಗಿಯಿತು.

 
 
 
 
 
 
 
 
 
 
 

Leave a Reply