ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಯವರಿಗೆ ಸನ್ಮಾನ ಸಮಾರಂಭ , ಗೀತಾ ಪ್ರವಚನ ಮತ್ತು ಗೀತಾ ಲೇಖನ ಯಜ್ಞ ದೀಕ್ಷೆ

ವಿಶ್ವಾದ್ಯಂತ ಶ್ರೀಕೃಷ್ಣಭಕ್ತಿ ಪ್ರಸಾರ ಮಾಡುತ್ತಾ ಇದೀಗ ಪರ್ಯಾಯ ಸಂಚಾರ ದಲ್ಲಿರುವ ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರ​ ​ತೀರ್ಥ ಸ್ವಾಮೀಜಿಯವರನ್ನು
October ​8​ ರಂದು ಅಮೆರಿಕಾದ ವಾಸಿಂಗ್ಟನ್ ಡಿಸಿ ಇಲ್ಲಿರುವ ಪ್ರಸಿದ್ಧ ಶ್ರೀ ಶಿವ ವಿಷ್ಣು ದೇವಸ್ಥಾನದಲ್ಲಿ ದೇವಸ್ಥಾನದ ಮುಖ್ಯಸ್ಥರಾದ ಶ್ರೀ ಮುರಳಿ ಇಳಂ ಬಿಲನ್ ಅವರು ಸ್ವಾಗತಿಸಿದರು ಮತ್ತು ಪರ್ಯಾಯಪೀಠ ಆರೋಹಣ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸಿದರು.

ಸ್ವಾಮೀಜಿಯವರಿಗೆ ವಾಷಿಂಗ್ಟನ್ ಡಿಸಿಯಲ್ಲಿರುವ ಜೆಎಸ್ಎಸ್ ಸಂಸ್ಥೆ ಮುಖ್ಯಸ್ಥರಾದ ಕುಮಾರ್ ರಾಜಶೇಖರ್ ಅವರು, ISKCON ಮುಖ್ಯಸ್ಥೆ ಯಾದ ಶ್ರೀಮತಿ ಆನಂದ ಬೃಂದಾವನ ಅವರು, ರಾಜಧಾನಿ ಮಂದಿರದ ವತಿಯಿಂದ ಶ್ರೀ ಶ್ರೀ ನಟೇಶ್ ಅಯ್ಯರ್ ರವರು​ , ವೇದಾಂತ ಉಪನ್ಯಾಸಕಾರ ಶ್ರೀ​ ​ಜಯಕೃಷ್ಣ ನೆಲಮಂಗಲ ​ ಕೂಡ ಅಭಿನಂದನೆಗಳನ್ನು ಸಲ್ಲಿಸಿದರು.

ಕಾವೇರಿ ​ ​ ಕನ್ನಡಕೂಟದ ಅಧ್ಯಕ್ಷರು ಶ್ರೀ ಸತೀಶ್ ಬೆಳಗುಟ್ಟಿ​,​ ​ ಮಾಜಿ ಅಧ್ಯಕ್ಷರಾದ ಶ್ರೀಮತಿ ಶರ್ಮಿಳಾ ಮೂರ್ತಿ , ಶ್ರೀ ಗುರು ನಾಗರಾಜ್, ಶ್ರೀ ಕೃಷ್ಣ ಮೂರ್ತಿ ಅವರು ಮಾಜಿ ಅಧ್ಯಕ್ಷರಾದ ಶ್ರೀಮತಿ ಶರ್ಮಿಳಾ ಮೂರ್ತಿ , ಶ್ರೀ ಗುರು ನಾಗರಾಜ್, ಶ್ರೀ ಕೃಷ್ಣ ಮೂರ್ತಿ ಅವರು ಕಾವೇರಿ ಸಂಘದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

​ ವೀರಶೈವದ ಸಂಘದ ಮುಖಂಡರು ಮಲ್ಲಿಕಾರ್ಜುನ್ ಅವರು, ಪ್ರಸಿದ್ಧ ಕನ್ನಡ ಅಂಕಣಕಾರರಾದ ಶ್ರೀ ಶ್ರೀನಿವಾಸ ಜೋಶಿಯವರು​ ​ಕೂಡ ಸ್ವಾಮೀಜಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಸ್ವಾಮೀಜಿಯವರು ಈ ಸಂದರ್ಭದಲ್ಲಿ ಆಧುನಿಕ ಜೀವನದಲ್ಲಿ ಭಗವದ್ಗೀತೆ ಎನ್ನುವ ವಿಷಯದ ಮೇಲೆ ಅತ್ಯುತ್ತಮ ರೀತಿಯಲ್ಲಿ ಜನರ ಮನ ಮನಸ್ಸಿನ ಮೇಲೆ ಪರಿಣಾಮ ಬೀರುವಂತೆ ಮಾತನಾಡಿದರು. ಜನಜೀವನದಲ್ಲಿನ ಉದಾಹರಣೆಗಳ ಮೂಲಕ ಭಗವದ್ಗೀತೆಯ ತತ್ವವನ್ನು ಮನಮುಟ್ಟುವಂತೆ ತಿಳಿಸಿದರು. ಅದಾದ ಮೇಲೆ ಸುಮಾರು ​100​ ಜನರು ಭಗವದ್ಗೀತೆ ಲೇಖನ ಯಜ್ಞದ ಸಂಕಲ್ಪ ತೆಗೆದುಕೊಂಡರು.
ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀ ವಾಸುದೇವ ಮೂರ್ತಿ ಯವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು​.

 
 
 
 
 
 
 
 
 
 
 

Leave a Reply