ಸ್ಯಾನ್‌ ಹೋಸೆಯು ಅತ್ಯಾಧುನಿಕವಾದ ತಂತ್ರಜ್ಞಾನದ ಕಾಶಿ. ಆವಿಷ್ಕಾರಗಳ ಕಾರಂಜಿ

ಇಂಥಾ ಸ್ಯಾನ್‌ ಹೋಸೆಯಲ್ಲೇ ಜಗದ್ಗುರುಶ್ರೀಮದಾನಂದತೀರ್ಥರ ಮೂಲಸಂಸ್ಥಾನವಾದ ಪುತ್ತಿಗೆಮಠದ ಸ್ವಾಮಿಗಳಾದ ಶ್ರೀಸುಗುಣೇಂದ್ರತೀರ್ಥರು ಈ ವರ್ಷ, 2022ರಲ್ಲಿ ತಮ್ಮ ಚಾತುರ್ಮಾಸ್ಯವನ್ನು ನೆರವೇರಿಸುತ್ತಿದ್ದಾರೆ.

ಶ್ರೀಮದ್ಭಗವದ್ಗೀತೆಯ ಉಪದೇಶಾಮೃತವನ್ನು ಜಗದುದ್ದಗಲವೂ ಹರಿಸುವ ದೀಕ್ಷಾಬದ್ಧರಾದ ಶ್ರೀಗಳ ಕಾರ್ಯವ್ಯಾಪ್ತಿಯಲ್ಲಿ ಸ್ಯಾನ್‌ ಹೋಸೆಯ ತಂತ್ರಜ್ಞಾನೋದ್ಯಮ ವಲಯವೂ ಸೇರುವುದು ಸಾಧುವೇ ಆಗಿದೆ.

ಶ್ರೀಗಳ ಆದೇಶದಂತೆ 2022ರ ಚಾತುರ್ಮಾಸ್ಯ ಸೇವಾಸಮಿತಿಯು “ಸ್ಪಿರಿಚುಲವಲ್‌ ಎಕಾನಮಿ”ಯ ಒಂದು ಶೃಂಗಸಭೆಯನ್ನು ಸ್ಯಾನ್‌ ಹೋಸೆಯ ಶ್ರೀಕೃಷ್ಣವೃಂದಾವನದಲ್ಲಿ ಆ.27 ಶನಿವಾರ ಬೆಳಗ್ಗೆ ನಡೆಸಿತು.

ಸಿಲಿಕಾನ್ ವ್ಯಾಲಿಯ ಸುಮಾರು ನಲವತ್ತು ಕಂಪನಿಗಳ ಧುರೀಣರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಅನೇಕರು ಸಕುಟುಂಬ ಆಗಮಿಸಿದ್ದರು.

ಶ್ರೀಗಳು ಭಗವದ್ಗೀತೆಯ ಉಪದೇಶಗಳನ್ನು ಕಂಪನಿಗಳ ಧುರೀಣರು ತಮ್ಮ ಕಾರ್ಯನಿರ್ವಣೆಯಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ಸುಲಭವಾದ ಸರಳವಾದ ಇಂಗ್ಲೀಷಿನಲ್ಲಿ ಸುಮಾರು ಒಂದು ಗಂಟೆಗಳಷ್ಟು ಕಾಲ ಸೋದಾಹರಣವಾಗಿ ಹೃದ್ಯವಾಗಿ ತಿಳಿಹೇಳಿದರು.

ಬಳಿಕ ಪಾಲ್ಗೊಂಡಿದ್ದವರಲ್ಲಿ ಅನೇಕರು ಕೇಳಿದ ಪ್ರಶ್ನೆಗಳಿಗೆ ಸೂಕ್ತವಾದ ಪರಿಹಾರಗಳನ್ನು ಶ್ರೀಗಳು ಸೂಚಿಸಿದರು.

ಬಳಿಕ ಭಗವನ್ನೈವೇದ್ಯಪ್ರಸಾದದ ರಸದೌಣತವನ್ಮು ಸ್ವಯಂಸೇವಕರು ಅಭ್ಯಾಗತರಿಗೆ ಉಣಬಡಿಸಿದರು.

ಮೂರಕ್ಕೂ ಹೆಚ್ಚು ಗಂಟೆಗಳ ಈ “ಸ್ಪಿರಿಚುಲವಲ್‌ ಎಕಾನಮಿ”ಯ ಒಂದು ಶೃಂಗಸಭೆಯು ಸಾರ್ಥಕ್ಯಭಾವದಲ್ಲಿ ಸಂಪನ್ನವಾಯ್ತು.

 
 
 
 
 
 
 
 
 
 
 

Leave a Reply