ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಪಾಕಿಸ್ತಾನದಲ್ಲಿ ಪರೇಡ್ ಕೂಡ ರದ್ದು!

ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಪಾಕಿಸ್ತಾನ ಮತ್ತೊಂದು ನಡೆಯಿಂದ ದಿವಾಳಿತನವನ್ನು ತೋರಿಸಿದೆ.

ಪಾಕ್‌ನ ವಿದೇಶಿ ವಿನಿಮಯ ಸಂಗ್ರಹ ಇದುವರೆಗಿನ ಅತ್ಯಂತ ಕಡಿಮೆ ಮಟ್ಟದಲ್ಲಿದೆ. ಇಷ್ಟು ಹಣ ಕೆಲವು ವಾರಗಳ ಮೌಲ್ಯದ ಆಮದುಗಳಿಗೆ ಸಾಕಾಗುವುದಿಲ್ಲ.

ಇಂಥ ಹೀನ ಸ್ಥಿತಿಯಲ್ಲಿ ಇರುವ ಪಾಕಿಸ್ತಾನದ ಇದೀಗ ಮಿಲಿಟರಿ ಪರೇಡ್‌ನ್ನು ರದ್ದು ಮಾಡಿದೆ. ಪ್ರತಿ ವರ್ಷ ಮಾರ್ಚ್ 23 ರಂದು ಪಾಕಿಸ್ತಾನದಲ್ಲಿ ಮಿಲಿಟರಿ ಪರೇಡ್ ನಡೆಯುತ್ತದೆ. ಪಾಕ್ ದಿನ ಆಚರಣೆಯ ಅಂಗವಾಗಿ ಪರೇಡ್ ಮಾಡಲಾಗುತ್ತದೆ.

ಆದರೆ ಈ ಬಾರಿ ಪರೇಡ್ ನಡೆಸಲು ಪಾಕ್ ಹಣಕಾಸು ಕೊರತೆ ಎದುರಿಸುತ್ತಿದೆ. ಪ್ರತಿ ವರ್ಷ ಮಾರ್ಚ್ 23 ರಂದು ಪಾಕ್ ತನ್ನ ಸೇನಾ ಶಕ್ತಿಯನ್ನು ಜಗತ್ತಿಗೆ ಸಾರಲು ಮಿಲಿಟರಿ ಪರೇಡ್ ನಡೆಸುತ್ತಿತ್ತು. ಈ ಬಾರಿ ಇದಕ್ಕೂ ದುಡ್ಡಿಲ್ಲದ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಇದೆ. ಪಾಕಿಸ್ತಾನದಲ್ಲಿ ಆಹಾರ ಮತ್ತು ಇಂಧನದ ಬೆಲೆ ಗಗನಕ್ಕೇರಿದೆ. ವಿದ್ಯುತ್ ಬೆಲೆಗಳು ಭರಿಸಲಾರದ ಮಟ್ಟಕ್ಕೆ ಬಂದು ತಲುಪಿದೆ. ಇದರ ಜತೆಗೆ ಪ್ರವಾಹದ ಭೀತಿಯಿಂದ ಮಕ್ಕಳಿಗೆ ಅಪೌಷ್ಠಿಕತೆ ಎದುರಾಗಿದೆ.

 
 
 
 
 
 
 
 
 
 
 

Leave a Reply