ಅಮೆರಿಕ ಉಪಾಧ್ಯಕ್ಷೆ ಕಮಲಾ~ ನರೇಂದ್ರ ಮೋದಿ  ಭೇಟಿ

ವಾಷಿಂಗ್ಟನ್ : ಪರಸ್ಪರ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮೊಟ್ಟಮೊದಲ ವೈಯಕ್ತಿಕ ಭೇಟಿ ಸಂದರ್ಭದಲ್ಲಿ ಸ್ನೇಹ ಸಂಬಂಧವನ್ನು ಬಿಂಬಿಸಿದರು. ಉಭಯ ದೇಶಗಳು ಜಾಗತಿಕ ಆರೋಗ್ಯ, ಹವಾಮಾನ ಮತ್ತು ಭದ್ರತಾ ವಿಚಾರಗಳಲ್ಲಿ ಜತೆಯಾಗಿ ಕಾರ್ಯ ನಿರ್ವಹಿಸುವ ವಾಗ್ದಾನ ನೀಡಿದರು.

ಹವಾಮಾನ ಬದಲಾವಣೆ, ಕೋವಿಡ್ ಮತ್ತು ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಭದ್ರತಾ ಸವಾಲು ಗಳನ್ನು ಕ್ವಾಡ್ ಮೂಲಕ ಸಮರ್ಥವಾಗಿ ನಿಭಾಯಿಸುವ ವಿಚಾರ ಸೇರಿದಂತೆ ಪರಸ್ಪರ ಸಹಕಾರ ಕುರಿತ ವಿಚಾರಗಳ ಬಗ್ಗೆ ಉಭಯ ಗಣ್ಯರು ಪತ್ರಕರ್ತರ ಜತೆ ಸುಮಾರು 15 ನಿಮಿಷ ಕಾಲ ಮಾತುಕತೆ ನಡೆಸಿದರು. ಆದರೆ ಯಾವುದೇ ಪ್ರಶ್ನೆಗಳಿಗೆ ಉಭಯ ಮುಖಂಡರು ಉತ್ತರಿಸಲಿಲ್ಲ.

ಅಮೆರಿಕದ ಚುನಾವಣೆಯಲ್ಲಿ ಹ್ಯಾರಿಸ್ ಅವರ ವಿಜಯದ ಬಗ್ಗೆ ಆತ್ಮೀಯವಾಗಿ ಮಾತನಾಡಿದ ಮೋದಿ, ಅವರ ವಿಜಯವನ್ನು ಭಾರತದಲ್ಲಿ ಸಂಭ್ರಮಿಸುವ ಸಲುವಾಗಿ ಅಮೆರಿಕದ ಉಪಾಧ್ಯಕ್ಷೆ ಯನ್ನು ಭಾರತಕ್ಕೆ ಆಹ್ವಾನಿಸಿದರು. ಅಮೆರಿಕದ ಹೊಸ ಆಡಳಿತವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಅವರು, ಬೈಡೆನ್ ಹಾಗೂ ಹ್ಯಾರಿಸ್ ಸವಾಲುದಾಯಕ ಸನ್ನಿವೇಶದಲ್ಲಿ ಅಮೆರಿಕದ ಚುಕ್ಕಾಣಿ ಹಿಡಿದಿದ್ದು, ಅಲ್ಪಾವಧಿಯಲ್ಲೇ ಹಲವು ಯಶಸ್ಸನ್ನು ಸಾಧಿಸಿದ್ದಾರೆ ಎಂದು ಬಣ್ಣಿ ಸಿದರು.

ಅಮೆರಿಕದ ಬಾಹ್ಯಾಕಾಶ ಪಡೆಯ ಮುಖ್ಯಸ್ಥೆಯಾಗಿ ಹ್ಯಾರಿಸ್ ಅವರ ಕಾರ್ಯವನ್ನು ಉಲ್ಲೇಖಿಸಿದ ಮೋದಿ, ಇದು ತಮ್ಮ ಆಸಕ್ತಿಯ ವಿಷಯವಾಗಿದ್ದು, ಉಭಯ ದೇಶಗಳು ಈ ನಿಟ್ಟಿನಲ್ಲಿ ಜತೆಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಆಶಿಸಿದರು. ಅಷ್ಟಾಗಿ ಮಾತನಾಡುವವರಲ್ಲದ ಹ್ಯಾರಿಸ್ ಕೂಡಾ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಮತ್ತು ಭಾರರತ ಜತೆಗಿನ ತಮ್ಮ ಕುಟುಂಬ ಸಂಬಂಧದ ಬಗ್ಗೆ ಮನಬಿಚ್ಚಿ ಮಾತನಾಡಿದರು.

 
 
 
 
 
 
 
 
 
 
 

Leave a Reply