‘ಕೈಲಾಸ’ ಕ್ಕೆ ಬರಲು ಭಕ್ತರಿಗೆ ರೂಟ್ ಮ್ಯಾಪ್ ಬಿಡುಗಡೆ ಮಾಡಿದ ನಿತ್ಯಾನಂದ

ನಿತ್ಯಾನಂದ ಸ್ವಾಮಿಯನ್ನು ಪಾಲಿಸುವ ಅನೇಕರಿದ್ದಾರೆ.ಬಹಳಷ್ಟು ಜನ ಭಕ್ತಿ ಭಾವದಿಂದ ಪೂಜೆಯನ್ನು ಮಾಡುತ್ತಾರೆ. ಆದರೆ ನಿತ್ಯಾನಂದರ ‘ಕೈಲಾಸ’ ಎಲ್ಲಿದೆ ಎಂಬ ಮಾಹಿತಿ ಯಾರಿಗೂ ಇಲ್ಲ. ಆದರೀಗ ಕಾಮಿ ಸ್ವಾಮಿ ನಿತ್ಯಾನಂದ ಕೈಲಾಸಕ್ಕೆ ಬರುವರಿಗೆ ವೀಸಾ ಅರ್ಜಿಯ ಆಹ್ವಾನ ನೀಡಿದ್ದಾನೆ.ಕೈಲಾಸಕ್ಕೆ ಬರುವರಿಗೆ ವೀಸಾ ಅರ್ಜಿ ಆಹ್ವಾನ ಮಾಡಿರುವ ನಿತ್ಯಾನಂದ, ಕೈಲಾಸಕ್ಕೆಹೇಗೆ ತಲುಪಬೇಕು ಎಂಬ ಬಗ್ಗೆ ಪ್ರಕ್ರಿಯೆಯ ಹಂತಗಳ ಕುರಿತಂತೆ ಮಾಹಿತಿ ತಿಳಿಸಿದ್ದಾನೆ. ಈ ಹೇಳಿಕೆಗೆ ಸಂಬಂಧಪಟ್ಟಂತೆ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗಿದ್ದು ನಿತ್ಯಾನಂದ, ಕೈಲಾಸದ ಮಾರ್ಗ ನಕ್ಷೆಯನ್ನು ಬಿಡುಗಡೆ ಮಾಡಿದ್ದಾನೆ. ಆದರೆ ವೀಸಾ ಅರ್ಜಿ ಸಲ್ಲಿಸಿದ ಎಲ್ಲಾ ಭಕ್ತರಿಗೂ ಅವಕಾಶ ನೀಡುವುದಿಲ್ಲ. ಸೀಮಿತ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು ಎಂಬ ನಿಯಮಗಳೂ

ಇವ ಭಕ್ತರು ಮೊದಲು ಆಸ್ಟ್ರೇಲಿಯಾದ ರಾಜಧಾನಿ ಸಿಡ್ನಿಗೆ ಬಂದು ತರುವಾಯ ಚಾರ್ಟೆಡ್ ಫ್ಲೈಟ್ ನಲ್ಲಿ ಕೈಲಾಸಕ್ಕೆ ಬರುವಂತೆ ಸೂಚನೆ ನೀಡಿದ್ದಾನೆ.  ಟ್ರೆನಿಡಾಡ್ ಸಮೀಪದ ಈಕ್ವೇಡಾರ್ ನಲ್ಲಿ ಖಾಸಗಿ ದ್ವೀಪ ಖರೀದಿ ಮಾಡಿರುವ ನಿತ್ಯಾನಂದ ತನ್ನದೆ ಆದ ಒಂದು ವಿಶಾಲ ಸಾಮ್ರಾಜ್ಯ ಕಟ್ಟಿ ಅದಕ್ಕೆ ‘ಕೈಲಾಸ’ ಎಂದು ಹೆಸರನ್ನು ಇಟ್ಟಿದ್ದಾನೆ.

ಸದ್ಯ ಅತ್ಯಾಚಾರ ಆರೋಪದಲ್ಲಿ ತಲೆ ಮರೆಸಿಕೊಂಡಿರುವ ನಿತ್ಯಾನಂದ ನಾನು ಈಕ್ವೇಡಾರ್ ನಲ್ಲೆ ಇರುವೆ ಅಂತ ಹೇಳಿದ್ರೂ, ಅಲ್ಲಿನ ಸರ್ಕಾರ ಮಾತ್ರ ಅಂತಹ ಯಾವುದೇ ದ್ವೀಪವನ್ನು ನಾವು ಮಾರಾಟ ಮಾಡಿಲ್ಲ. ಮತ್ತು ಅಂತಹ ಯಾವುದೇ ವ್ಯಕ್ತಿ ಇಲ್ಲಿಲ್ಲ ಎಂದು ಸ್ಪಷ್ಟನೆ ನೀಡಿದೆ.

 
 
 
 
 
 
 
 
 
 
 

Leave a Reply