ಅಶ್ಲೀಲ ಚಿತ್ರಗಳಲ್ಲಿ ನಟಿಸುತ್ತಿದ್ದ ನಟಿಯ ಹತ್ಯೆ

ಅಶ್ಲೀಲ ಚಿತ್ರಗಳಲ್ಲಿ ನಟಿಸುವುದರ ಮೂಲಕ ಜನಪ್ರಿಯತೆ ಗಳಿಸಿದ್ದ ಇಟಲಿಯ ನಟಿಯೊಬ್ಬರನ್ನು ಬ್ಯಾಂಕ್ ಅಧಿಕಾರಿಯೊಬ್ಬ ಹತ್ಯೆ ಮಾಡಿ ಗೋಣಿ ಚೀಲದಲ್ಲಿ ತುಂಬಿಸಿದ ಬಳಿಕ ಅದನ್ನು ಡಂಪ್ ಮಾಡಿದ್ದಾನೆ.

ಹತ್ಯೆಗೀಡಾದ ನಟಿಯನ್ನು ಕರೋಲ್ ಮಾಲ್ಸಿ ಎಂದು ಗುರುತಿಸಲಾಗಿದೆ. ಕರೋಲ್ ಅಶ್ಲೀಲ ಚಿತ್ರಗಳಲ್ಲಿ ಅಂದರೆ ವಯಸ್ಕರ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿ ಕೊಳ್ಳುತ್ತಿದ್ದರು.

ಮಾರ್ಚ್ 20 ರಂದು ಈ ಘಟನೆ ನಡೆದಿತ್ತು. ಹತ್ಯೆ ಮಾಡಿದ ಬಳಿಕ ಮೃತದೇಹವನ್ನು ತುಂಡರಿಸಿದ್ದ ಆರೋಪಿ ಅದನ್ನು ಫ್ರೀಜರ್ ನಲ್ಲಿ ಕೂಡ ಇರಿಸಿದ್ದ ಎಂದು ವರದಿಯಾಗಿದೆ.

ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ

 
 
 
 
 
 
 
 
 
 
 

Leave a Reply