ಇರಾನ್‌ನಲ್ಲಿ ಶಾಲಾ ವಿದ್ಯಾರ್ಥಿನಿಯರಿಗೆ ವಿಷ ಉಣಿಸಿದ ದುಷ್ಕರ್ಮಿಗಳು!

ಮಹಿಳೆಯರ ಮೇಲೆ ಶರಿಯಾ ಕಠಿಣ ನಿರ್ಬಂಧಗಳನ್ನು ವಿಧಿಸಲು ಯತ್ನಿಸುತ್ತಿರುವ ಇರಾನ್‌ನಲ್ಲಿ, ಮಹಿಳೆಯರಿಗೆ ಶಿಕ್ಷಣ ಸಿಗದಂತೆ ತಡೆಯಲು ನೂರಾರು ಶಾಲಾ ವಿದ್ಯಾರ್ಥಿನಿಯರಿಗೆ ವಿಷ ಉಣಿಸಿದ ಘಟನೆ ವರದಿಯಾಗುತ್ತಿವೆ.

ಕೋಮ್‌ ನಗರದಲ್ಲಿ ಕಳೆದ ನವೆಂಬರ್‌ನಿಂದಲೂ ಇಂಥ ಪ್ರಕರಣಗಳು ದಾಖಲಾಗುತ್ತಿದ್ದು, ಶಾಲೆಗಳನ್ನು ಮುಚ್ಚಿಸುವ ಅದರಲ್ಲೂ, ಬಾಲಕಿಯರ ಶಾಲೆಗಳನ್ನು ಮುಚ್ಚಿಸುವ ನಿಟ್ಟಿನಲ್ಲಿ ದುಷ್ಕರ್ಮಿಗಳು ಇಂಥ ಕೃತ್ಯ ಎಸಗುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಹಿಜಾಬ್‌ ಧರಿಸದ ಕಾರಣ, ಯುವತಿಯೊಬ್ಬಳನ್ನು ಆಡಳಿತ ಅಧಿಕಾರಿಗಳು ಥಳಿಸಿ, ಅದರಿಂದ ಆಕೆ ಸಾವನ್ನಪ್ಪಿದ್ದ ಘಟನೆ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿತ್ತು.

 
 
 
 
 
 
 
 
 
 
 

Leave a Reply