ಅಮೇರಿಕಾದಲ್ಲಿ ಇನ್ನು ಡೆಮಾಕ್ರಟಿಕ್ ‘ನೀಲಿ’ ಅಲೆ

ಜಗತ್ತಿನಾದ್ಯಂತ ಕೂತುಹಲ ಮೂಡಿಸಿದ್ದ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಗೆ ತೆರೆಬಿದ್ದಿದೆ. ಯುಎಸ್​ ಎ ಅಧ್ಯಕ್ಷರಾಗಿ ಡೆಮಾಕ್ರೆಟಿಕ್ ಪಕ್ಷದ ಜೋ ಬಿಡೆನ್ ಅವರು ಆಯ್ಕೆಯಾಗಿದ್ದಾರೆ. ತಾನೇ ಈ ಬಾರಿಯೂ ಗೆಲ್ಲುತ್ತೇನೆ ಎಂಬ ನಂಬಿಕೆ ಇಟ್ಟುಕೊಂಡಿದ್ದ ಹಾಲಿ ಅಧ್ಯಕ್ಷ ಹಾಗೂ ರಿಪಬ್ಲಿಕನ್​ ಪಕ್ಷದ ಡೊನಾಲ್ಡ್​ ಟ್ರಂಪ್​ ಹೀನಾಯ ಸೋಲು ಅನುಭವಿಸಿದ್ದಾರೆ.

ಚುನಾವಣೆಯಲ್ಲಿ ಒಟ್ಟು 538 ಮತಗಳ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಏರಲು ಕನಿಷ್ಠ 270 ಎಲೆಕ್ಟ್ರೋಲ್ ಮತಗಳನ್ನು ಪಡೆಯಬೇಕು. 77 ವರ್ಷದ ಬಿಡೆನ್ 290 ಮತಗಳ ಮುನ್ನಡೆಯೊಂದಿಗೆ ಭರ್ಜರಿ ಜಯ ಸಾಧಿಸಿದ್ದು, ಇದುವರೆಗೆ ಶ್ವೇತಭವನಕ್ಕೆ ಆಯ್ಕೆಯಾದ ಅತ್ಯಂತ ಹಿರಿಯ ಅಭ್ಯರ್ಥಿ ಎಂಬ ದಾಖಲೆಯನ್ನೂ ಸೃಷ್ಟಿಸಿದ್ದಾರೆ.

ಈ ಹಿಂದೆ ಬಿಡೆನ್ ​ಡೆಲಾವೇರ್ ನಿಂದ ಆರು ಬಾರಿ ಸೆನೆಟರ್ ಆಗಿದ್ದರು. 1972ರಲ್ಲಿ ಮೊದಲ ಬಾರಿಗೆ ಚುನಾಯಿತರಾದರು. 2009ರಿಂದ 2017ರ ವರೆಗೆ ಒಬಾಮಾ ಆಡಳಿತದಲ್ಲಿ ಅಮೆರಿಕದ 47ನೇ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಇನ್ನು ಜೋ ಬಿಡೆನ್ ಗೆಲುವು ಸಾಧಿಸುವುದು ಖಚಿತವಾಗಿದೆ ಎನ್ನುವುದು ತಿಳಿದ ಕೂಡಲೆ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರು ರಸ್ತೆಗಿಳಿದು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಈ ನಡುವೆ, ಟ್ರಂಪ್ ಬೆಂಬಲಿಗರು ಶಸ್ತ್ರ ಸಜ್ಜಿತರಾಗಿ ‘ಗೆಲುವು ಕದಿಯಬೇಡಿ’ ಎಂದು ಕಿರುಚಾಡಿದ್ದಾರೆ.

ಕಳೆದ ಬಾರಿ ಟ್ರಂಪ್ ಜಯ ಸಾಧಿಸಿದ್ದ ಮಿಚಿಗನ್​ನಲ್ಲಿ ಈ ಸಾರಿ ಡೆಮಾಕ್ರಟರ ಸಂಭ್ರಮ ಮೇರೆ ಮೀರಿದೆ. ಪೆನ್ಸಿಲ್ವೇನಿಯಾದ ಫಿಲಡೆಲ್ಪಿಯಾದಲ್ಲಿ ಬಿಡೆನ್ ಗೆದ್ದಿದ್ದು, ಅಮೇರಿಕಾದಲ್ಲಿ ಪಕ್ಷದ ಅಧಿಕೃತ ಬಣ್ಣ ‘ನೀಲಿ’ ಅಲೆ ಎದ್ದಿದೆ.

 
 
 
 
 
 
 
 
 
 
 

Leave a Reply