ಗಂಡ ಸಾವನ್ನಪ್ಪಿದ 2 ವರ್ಷದ ಬಳಿಕ ಆತನ ಮಗುವಿಗೆ ಜನ್ಮ ನೀಡಿದ ಲಾರೆನ್ ಮೆಕ್ರೆಗರ್

ಇಲ್ಲೊರ್ವ ಮಹಿಳೆ ತನ್ನ ಪತಿ ಮೃತಪಟ್ಟ ಎರಡು ವರ್ಷಗಳ ಬಳಿಕ ಮಗುವಿಗೆ ಜನ್ಮ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಇದು ಹೇಗೆ ಸಾಧ್ಯ? ಸಾವನ್ನಪ್ಪಿದ ವ್ಯಕ್ತಿಯಿಂದ ಮಗು ಪಡೆದಿದ್ದು ಹೇಗೆ ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಆಧುನಿಕ ಪ್ರಪಂಚದಲ್ಲಿ ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ವ್ಯಕ್ತಿ ಸಾವನ್ನಪ್ಪಿದರೂ ಅದೇ ವ್ಯಕ್ತಿಯಿಂದ ಮಗುವನ್ನು ಪಡೆಯಬಹುದು. ಇಂತಹ ವಿಧಾನದಲ್ಲಿ ಐವಿಎಫ್ ಕೂಡ ಒಂದು. ಲಾರೆನ್ ಮೆಕ್ರೆಗರ್ ಎಂಬ ಮಹಿಳೆಯ ಪತಿ ಕ್ರಿಸ್ 2020ರ ಜುಲೈ ತಿಂಗಳಲ್ಲಿ ಟರ್ಮಿನಲ್ ಬ್ರೇನ್ ಟ್ಯೂಮರ್ ನಿಂದ ಸಾವನ್ನಪ್ಪಿದ್ದರು.

ಲಾರೆನ್ ಹಾಗೂ ಆಕೆಯ ಪತಿ ಕ್ರಿಸ್ ಮಗು ಪಡೆಯಬೇಕು ಎಂದು ಯತ್ನಿಸಿದ್ದರು. ಆದರೆ ಕ್ರಿಸ್ ಗೆ ಬ್ರೇನ್ ಟ್ಯೂಮರ್ ಇದ್ದುದರಿಂದ ಮೊದಲು ಆತ ಚಿಕಿತ್ಸೆ ಪಡೆದು ಗುಣಮುಖನಾಗಲಿ ಎಂದು ಗಮನಹರಿಸಿದ್ದರು. ಈ ನಡುವೆ ಕ್ರಿಸ್ ವೀರ್ಯವನ್ನು ಸಂಗ್ರಹಿಸಿಡಲಾಗಿತ್ತು. 2020ರಲ್ಲಿ ಕ್ರಿಸ್ ಟರ್ಮಿನಲ್ ಬ್ರೇನ್ ಟ್ಯೂಮರ್ ಗೆ ಬಲಿಯಾಗಿದ್ದರು. ಇದು ಲಾರೆನ್ ಗೆ ಆಘಾತವನ್ನುಂಟು ಮಾಡಿತ್ತು.

ಹೆಪ್ಪುಗಟ್ಟಿಸಿ ಸಂಗ್ರಹಿಸಿಡಲಾಗಿದ್ದ ಕ್ರಿಸ್ ವೀರ್ಯವನ್ನು ಬಳಸಿಕೊಂಡು ಲಾರೆನ್ ಗರ್ಭಧರಿಸಿದ್ದಳು. ಇದೀಗ ಲಾರೆನ್ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ. ಕ್ರಿಸ್ ಸಾವನ್ನಪ್ಪಿದ್ದರೂ ಮಗು ಪಡೆಯಬೇಕು ಎಂಬ ಲಾರೆನ್ ಕನಸು ನನಸಾಗಿದೆ.

ವರದಿಗಳ ಪ್ರಕಾರ ಲಾರೆನ್ ಮಗು ಪಡೆದಿದ್ದು ಕೂಡ ಈಗ ಹೆಚ್ಚು ಪ್ರಸ್ತುತವಿರುವ ಐವಿಎಫ್ ನ ತಂತ್ರಜ್ಞಾನದ ಮೂಲಕವೇ. ಪತಿ ಮರಣಹೊಂದಿದ 9 ತಿಂಗಳ ಬಳಿಕ ಪತಿಯ ವೀರ್ಯವನ್ನು ಬಳಸಿಕೊಂಡು ಲಾರೆನ್ ಗರ್ಭ ಧಸಿದ್ದರು.

 ಇದೀಗ ಲಾರೆನ್ ತನ್ನ ಮಗ ಸೆಬ್ ಗೆ ಜನ್ಮ ನೀಡಿದ್ದಾರೆ. ಕ್ರಿಸ್ ಮತ್ತೆ ತನ್ನ ಮಗುವಿನ ರೂಪದಲ್ಲಿ ಹುಟ್ಟಿ ಬಂದಿದ್ದಾನೆ ಎಂಬುದರಲ್ಲಿ ಅನುಮಾನವಿಲ್ಲ ಎಂದು ಲಾರೆನ್ ಸಂತಸ ವ್ಯಕ್ತಪಡಿಸಿದ್ದಾಳೆ.

ಮಕ್ಕಳಿಲ್ಲ ಎಂದು ದು:ಖಿಸುವ ಅಥವಾ ಪತಿ ಪತ್ನಿ, ಕುಟುಂಬದ ನಡುವೆ ವೈಮನಸ್ಯಕ್ಕೆ ಕಾರಣವಾಗಿ ಬೇರೆಯಾಗುವ ಅದೆಷ್ಟೋ ಗಂಡ-ಹೆಂಡತಿ ಇಂದು ತಂತ್ರಜ್ಞಾನ ಬಳಸಿಕೊಂಡು ಸೂಕ್ತ ಮಾಹಿತಿ ಪಡೆದು ತಮ್ಮದೆ ಮಗುವನ್ನು ಪಡೆಯಬಹುದು ಎಂಬುದಕ್ಕೆ ಇದು ಕೂಡ ಉತ್ತಮ ಉದಾಹರಣೆ.

 
 
 
 
 
 
 
 
 

Leave a Reply