ಆಲ್ ಅಮೇರಿಕ ತುಳು ಅಸೋಸಿಯೇಶನ್ (AATA): ಬಿಸು ಹಬ್ಬ 2022

ವರದಿ: ಅನಿತಾ ನಾಯ್ಕ್, ಕ್ಯಾಲಿಫಾರ್ನಿಯ.

ಅಮೇರಿಕ ಹಾಗೂ ಕೆನಡಾ ದೇಶಗಳಲ್ಲಿ ನೆಲೆಸಿರುವ ತುಳು ಬಾಂಧವರ ಒಕ್ಕೂಟ ‘ಆಟ’ – ಆಲ್ ಅಮೇರಿಕ ತುಳು ಅಸೋಸಿಯೇಶನ್ (AATA), ತುಳು ಹೊಸ ವರ್ಷ ‘ಬಿಸು’ ಹಾಗೂ ತನ್ನ ಹುಟ್ಟು ಹಬ್ಬವನ್ನು ವರ್ಚುವಲ್ ಕಾರ್ಯಕ್ರಮದ ಮೂಲಕ ವಿಜ್ರಂಭಣೆಯಿಂದ ಆಚರಿಸಿತು.

‘ಆಟ ಬೀಸು ಪರ್ಬ ೨೦೨೨’ ಕಾರ್ಯಕ್ರಮವು ಫ್ಲೋರಿಡಾದ ಶ್ರೀ ದೀತೆಶ್ ಸುವರ್ಣ ಅವರ ಮಧುರವಾದ  ಭಕ್ತಿಗೀತೆಯ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ‘ಆಟ’ದ ನಿರ್ದೇಶಕ ಮಂಡಳಿಯ ಚೇರ್‌ಮನ್, ಕ್ಯಾಲಿ ಫೋರ್ನಿಯದ ಡಾ. ಶ್ರೀಧರ ಆಳ್ವ ಅವರು ಗೌರವಾನ್ವಿತ ಅತಿಥಿಗಳನ್ನು ಹಾಗೂ ಪ್ರಪಂಚದ ಬೇರೆ ಬೇರೆ ದೇಶಗಳಿಂದ ಅಂತರ್ಜಾಲದಲ್ಲಿ ವೀಕ್ಷಿಸುತ್ತಿರುವ ಎಲ್ಲರನ್ನೂ ಅಭಿಮಾನದಿಂದ ಸ್ವಾಗತಿಸಿದರು. ‘ಆಟ’ದ ಪ್ರಧಾನ ಕಾರ್ಯದರ್ಶಿಗಳಾದ ಟೆಕ್ಸಾಸಿನ  ಶ್ರೀ ಪ್ರಕಾಶ್ ಉಡುಪ, ಸಹಕಾರ್ಯದರ್ಶಿಯಾದ ಬಾಸ್ಟನ್ ನ ಪೂಜಾ ಶೆಟ್ಟಿ, ಖಜಾಂಚಿಯಾದ ಕ್ಯಾಲಿಫೊರ್ನಿಯಾದ ಶ್ರೀ ಸುಭಾಷ್‌ಚಂದ್ರ ಶೆಟ್ಟಿಯವರು ಅತಿಥಿಗಳನ್ನು ಸಭೆಗೆ ಪರಿಚಯಿಸಿ ದರು.

 

ಗೌರವಾನ್ವಿತ ಅತಿಥಿಗಳಾಗಿ ಪ್ರಸಿದ್ದ ತುಳು ಜನಪದ ವಿಧ್ವಾಂಸ ರಾದ ಶ್ರೀ ಕೆ. ಲಕ್ಷ್ಮೀಕಾಂತ ಕುಂಡಂತಾಯ, ನ್ಯೂಯಾರ್ಕಿನ ಪ್ರಸಿದ್ಧ ನಾಳೀಯ ಶಸ್ತ್ರಜ್ಞ ಡಾ. ದಿನಕರ ರೈ ಬೆಳ್ಳೆ, ಹಾಗೂ ಮಿಚಿಗನ್ ನಲ್ಲಿ ವಾಸವಾಗಿರುವ ತಂತ್ರಜ್ಞಾನ ಕ್ಷೇತ್ರದ ಉದಯೋನ್ಮುಖ ಉದ್ಯಮಿ ಶ್ರೀ ಸಂತೋಷ್ ಉಡುಪಿಯವರು ಆಗಮಿಸಿದ್ಧರು. ಆಟದ ಸ್ಠಾಪಕ ಅಧ್ಯಕ್ಷರಾದ ಶ್ರೀ ಭಾಸ್ಕರ್ ಶೇರಿಗಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

 

ಗೌರವಾನ್ವಿತ ಅತಿಥಿಗಳಾದ ಶ್ರೀ ಕುಂಡಂತಾಯ ಅವರು, ತುಳುನಾಡಿನಲ್ಲಿ ಆಚರಿಸುತಿರುವ ‘ಬಿಸು’ ಹಬ್ಬದ ವಿಶೇಷತೆ, ಪ್ರಾಮುಖ್ಯತೆ, ಹಿನ್ನೆಲೆಗಳ ಬಗ್ಯೆ ವಿವರಣೆ ನೀಡಿದರು. ‘ಬಿಸು’ ಹಬ್ಬ ಹೊಸತನದ ಸಂಕೇತ, ತುಳುನಾಡಿನಲ್ಲಿ ಕೃಷಿ ಚಟುವಟಿಕೆಗಳ ಆರಂಭ, ಹೊಸ, ಸುದೃಡ ಭವಿಷ್ಯದ ಆರಂಭದ ಸಂಕೇತ ಎಂದರು. ಮುಖ್ಯ ಅತಿಥಿಗಳಾದ ಡಾ. ದಿನಕರ ರೈಯವರು ‘ಆಟ’ ಸಂಸ್ಥೆಯು ಅಮೇರಿಕ ಹಾಗೂ ಕೆನಡಾ ದೇಶಗಳಲ್ಲಿರುವ ತುಳುವರಿಗೆ, ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವಂತೆ ಒಂದು ‘ಸ್ವಧರ್ಮ’. ಅವರು ‘ಆಟ’ ಹಮ್ಮಿಕೊಡಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಕುಗೆ ವ್ಯಕ್ತಪಡಿಸಿದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ಶ್ರೀ ಸಂತೋಷ್ ಉಡುಪಿಯವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ತುಳುನಾಡಿನ ಮಣ್ಣಿನ ಗುಣ, ಕರ್ತವ್ಯನಿಷ್ಠೆ, ಪ್ರಾಮಾಣಿಕತೆ, ಕ್ಷಮತೆಯನ್ನು ಪಾಲಿಸಿದರೆ ಉನ್ನತ ಗುರಿ ತಲುಪಲು ಸಾಧ್ಯ ಎಂದರು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ‘ಆಟ’ದ ಸ್ಥಾಪಕಾಧ್ಯಕ್ಷ ಶ್ರೀ ಭಾಸ್ಕರ್ ಶೇರಿಗಾರ್, ಕಳೆದ ವರ್ಷ ‘ ಬಿಸು’ ಹಬ್ಬದಂದು ಆರಂಭವಾದ ‘ಆಟ’ ಅಮೇರಿಕ ಹಾಗೂ ಕೆನಡಾ ದೇಶ ಗಳಲ್ಲಿರುವ ತುಳು ಬಾಂಧವರ ಒಗ್ಗಟ್ಟಿಗೆ ಹಾಗೂ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸಫಲವಾಗುವುದೆಂದು ವಿಶ್ವಾಸ ವ್ಯಕ್ತಪಡಿಸಿ ಮುಂದಿನ ಯೋಜನೆಗಳ ಬಗ್ಯೆ ವಿವರಿಸಿದರು.

 

‘ಆಟ’ದ ಮಿಶಿಗನ್ ನ ಅಂಬಾಸಿಡರ್ ಆದ ಶ್ರೀ ಪ್ರಜ್ವಲ್ ಶೆಟ್ಟಿ ಮುಖ್ಯ ಕಾರ್ಯಕ್ರಮ ನಿರೂಪಕರಾಗಿ, ಹಾಗೂ ಇತ್ತೀಚೆಗೆ ‘ಆಟ’  ನಡೆಸಿದ ತುಳು ಕಲಿಕೆಯಲ್ಲಿ ಭಾಗವಹಿಸಿದ ಮಕ್ಕಳು ತುಳುವಿನಲ್ಲಿಯೇ ನಿರೂಪಣೆ ನಡೆಸಿದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು. ಅಮೆರಿಕಾದ ಮಸ್ಸಾಚುಸ್ಸೆಟ್ಸ್, ಕನೆಕ್ಟಿಕಟ್, ನ್ಯೂಯಾರ್ಕ್, ಫಿಲ ಡೆಲ್ಫಿಯಾ, ಮಿಶಿಗನ್, ಟೆಕ್ಸಸ್,ಫ್ಲೋರಿಡಾ, ಇಲಿನಾಯ್, ನಾರ್ತ ಕರೊಲೈನ, ಯುಟಾಹ್, ವರ್ಜೀನಿಯ, ವಾಶಿಂಗ್ಟನ್,ಕೆಂಟೇಕೀ ಹಾಗೂ ಕೆನಡಾದ ಮಾಂಟ್ರಿಯಲ್, ಟೊರಾಂಟೋ ಭಾಗಗಳಿಂದ ಮಕ್ಕಳು ಹಾಗೂ ಹಿರಿಯರು ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಾಡುಗಳು, ಸ್ಯಾಕ್ಸಫೋನ್, ತಬಲಾ, ಕೊಳಲು, ನೃತ್ಯ, ಯಕ್ಷಗಾನ ಭಾಗವತಿಕೆ ಮೊದಲಾದ ಆಕರ್ಷಕವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿ ಸಿದರು.

 

ವಿಶ್ವದ ಬೇರೆ ಬೇರೆ ದೇಶದ ಜನರು ಅಂತರ್ಜಾಲದಲ್ಲಿ ಪ್ರಸಾರವಾದ ಈ ಕಾರ್ಯಕ್ರಮವನ್ನು ವೀಕ್ಷಿಸಿದರು. ಅಬುದಾಬಿಯಾ ತುಳು, ಕನ್ನಡ ರಾಯಭಾರಿ, ಸಂಘಟಕ ಶ್ರೀ ಸರ್ವೋತಮ ಶೆಟ್ಟಿ, ಕತಾರ್ ನ ಡಾ. ರವಿ ಶೆಟ್ಟಿ, ದೆಹಲಿಯ ವಸಂತ್ ಶೆಟ್ಟಿ ಬೆಳ್ಳಾರೆ, ಮಂಗಳೂರು ವಿಶ್ವವಿಧ್ಯಾಲಯದ ಡಾ. ಮಾಧವ ಯಮ್. ಕೆ., ನಿಟ್ಟೆ ವಿಶ್ವವಿಧ್ಯಾಲಯದ ಡಾ. ಸಾಯಿಗೀತ, ಐ ಲೇಸದ ಶಾಂತಾರಾಮ ಶೆಟ್ಟಿ, ರಮೇಶ್ಚಂದ್ರ, ಡಾ. ರಾಜೇಶ್ ಅಳ್ವ, ಹಾಗೂ ಅಮೇರಿಕ-ಕೆನಡಾ ದಲ್ಲಿರುವ ತುಳು ಬಾಂಧವರು ಕಾರ್ಯಕ್ರಮಕ್ಕೆ ಮೆಚ್ಚಿಗೆ ಸೂಚಿಸಿದರು.

 

‘ಆಟ’ ಒಂದು ವರ್ಷದಲ್ಲಿನಡೆಸಿದ ಕಾರ್ಯಕ್ರಮಗಳ ಬಗ್ಗೆ ಒಂದು ಕಿರುನೋಟವನ್ನು ಪ್ರದರ್ಶಿಸಲಾಯಿತು. .ಕಾರ್ಯಕಾರಿ ಸಮಿತಿಯ ಸದಸ್ಯರು, ನಿರ್ದೇಶಕರು, ವಿವಿದ ಅಂಬಾಸಿಡರ್ಗಳು, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ‘ಆಟ’ದ ಸಹಾಖಜಾಂಚಿಯಾದ ಶ್ರೀ ಫ್ರೆಡ್ರಿಕ್ಕ್ ಪೆರ್ನಾಂಡೆಸ್ ವಂದನಾರ್ಪಣೆ ಸಲ್ಲಿಸಿದರು.

 
 
 
 
 
 
 
 
 

Leave a Reply