ದೊಡ್ಡಣ್ಣ ಡೊನಾಲ್ಡ್ ಟ್ರಂಪ್’ಗೂ ಕೊರೋನಾ

ವಾಷಿಂಗ್ಟನ್‌: ವಿಶ್ವದ ದೊಡ್ಡಣ್ಣ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ವಂಪ್ ಅವರಿಗೆ ಕೊರೋನಾ ಸೋಂಕು ದೃಢ ಪಟ್ಟಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಆರೋಗ್ಯದ ಬಗ್ಗೆ ನಿನ್ನೆ ಶ್ವೇತಭವನವು ಅತಿರೇಕದ ಹೇಳಿಕೆಗಳನ್ನು ನೀಡಿದೆ. ಈ ಕುರಿತಂತೆ ಡೊನಾಲ್ಡ್ ಟ್ವಂಪ್ ಅವರೇ ವಿಡಿಯೋ ಮಾಡಿ ಸತ್ಯ ಸಂಗತಿಯನ್ನು ತಿಳಿಸಿದ್ದಾರೆ.

ಶ್ವೇತಭವನದ ಮುಖ್ಯಸ್ಥ ಮಾರ್ಕ್ ಮೆಡೋಸ್ ಮಾದ್ಯಮ ವರದಿಗಾರರೊಂದಿಗೆ ಮಾತನಾಡಿ, ಟ್ರಂಪ್ ಅವರ ಆರೋಗ್ಯ ಆತಂಕಕಾರಿಯಾಗಿದೆ. ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ಎರಡು ದಿನಗಳು ನಿರ್ಣಾಯಕವಾಗಿದೆ, ಎಚ್ಚರಿಕೆಯಿಂದ ಇರ ಬೇಕಾಗಿದೆ ಎಂದು ಹೇಳಿದ್ದಾರೆ. ಈ ಹೇಳಿಕೆಗಳು ಟ್ರಂಪ್ ಅವರನ್ನು ಕೆರಳಿಸಿವೆ ಎಂದು ಕೆಲವು ಮಾಧ್ಯಮ ಮೂಲಗಳು ಮಾಹಿತಿ ನೀಡಿವೆ.

ಇನ್ನು ಈ ಕುರಿತು ತಮ್ಮ ಆರೋಗ್ಯದ ಸ್ಥಿತಿ ತಿಳಿಸಲು ಸ್ವತಃ ಟ್ರಂಪ್ ಅವರೇ ವಿಡಿಯೊ ಮಾಡಿ ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ. ನಾನು ಆರೋಗ್ಯವಾಗಿದ್ದೇನೆ, ಕೊರೋನಾವನ್ನು ಗೆದ್ದು ಬರುತ್ತೇನೆ. ನನ್ನ ಆರೋಗ್ಯಕ್ಕಾಗಿ ಎಲ್ಲರೂ ಶ್ರಮಿಸುತ್ತಿದ್ದಾರೆ. ಆ ದೃಷ್ಟಿಯಿಂದ ಮುಂದಿನ ಎರಡು ದಿನಗಳು ನಿಜವಾದ ಪರೀಕ್ಷೆಯಾಗಿರಲಿದೆ ಮತ್ತು ಅಮೆರಿಕಾವನ್ನು ಎತ್ತರಕ್ಕೆ ಕೊಂಡೊಯ್ಯಲು ನಾನು ಹಿಂದುರುಗಿ ಬರುವುದು ಅಗತ್ಯ ಎಂದು ಹೇಳಿದ್ದಾರೆ.

 
 
 
 
 
 
 
 
 
 
 

Leave a Reply