ಎಲ್ಲಾ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಮಕ್ಕಳಿಗೆ ಉಚಿತ ಅಪಘಾತ ವಿಮೆ ಯೋಜನೆ

ಮಕ್ಕಳ ದಿನಾಚರಣೆಯ ಪ್ರಯುಕ್ತ ಉಡುಪಿಯ ಎಲ್ಲಾ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಮಕ್ಕಳಿಗೆ ಉಚಿತ ಅಪಘಾತ ವಿಮೆ ನೀಡುವ ಕಾರ್ಯಕ್ರಮಕ್ಕೆ ನಗರಸಭಾ ಸದಸ್ಯ ವಿಜಯ್ ಕೊಡವೂರು ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಇವರು ಸರ್ಕಾರಿ ಶಾಲೆಗಳಲ್ಲಿ ಮಧ್ಯಮವರ್ಗ ಮತ್ತು ಬಡವರ್ಗದ ಮಕ್ಕಳು ಇರುವುದರಿಂದ ಅವರಿಗೆ ಅಪಘಾತವಾದ ಸಂದರ್ಭದಲ್ಲಿ ಇವರಿಗೆ ಆರ್ಥಿಕವಾಗಿ ಧೈರ್ಯ ನೀಡುವ ಕಾರ್ಯ ಈ ವಿಮೆಯಲ್ಲಿ ಇದೆ. ಈ ಮೂಲಕ ಸೆಲ್ಯೂಟ್ ತಿರಂಗಾ ಸಮಿತಿ ವತಿಯಿಂದ ಮತ್ತು ಕೊಡವೂರು ವಾರ್ಡ್ ಸಮಿತಿಯ  ಸಂಯೋಜನೆಯಲ್ಲಿ ಕೊಡವೂರು ಶಾಲೆಗೆ ಆರೋಗ್ಯ ವಿಮೆ ನೀಡುವ ಕಾರ್ಯ ನಡೆಯಿತು.


ಉಡುಪಿಯ ತಾಲೂಕಿನ ಎಲ್ಲಾ ಶಾಲೆಗಳಿಗೂ ಈ ರೀತಿಯ ಆರೋಗ್ಯವನ್ನು ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಉಡುಪಿಯ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದಿಂದ ಈ ಕಾರ್ಯವನ್ನು ಉಡುಪಿಯ ಎಲ್ಲಾ ಶಾಲೆಗಳಿಗೂ ಅಂದರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ಮಕ್ಕಳಿಗೂ ಒಂದು ಗ್ರೂಪ್ ಇನ್ಸೂರೆನ್ಸ್ ಮಾಡಲು ಯೋಚಿಸಿದ್ದೇವೆ.

ಮಗುವಿಗೆ ಏನಾದರೂ ಬಿದ್ದು ಅಥವಾ ಪೆಟ್ಟಾಗಿ ಮೂಳೆ ಮುರಿತಕ್ಕೊಳಗಾದಲ್ಲಿ 2000 ರೂಪಾಯಿ ವೆಚ್ಚದ ಶಸ್ತ್ರ ಚಿಕಿತ್ಸೆ, ಒಂದು ದಿನಕ್ಕಿಂತ ಹೆಚ್ಚು ಆಸ್ಪತ್ರೆಯಲ್ಲಿ ಅಡ್ಮಿಟ್ ಆದರೆ 25 ಸಾವಿರಕ್ಕಿಂತ ಮೆಲ್ಪಟ್ಟ ವಿಮೆಯ ವ್ಯವಸ್ಥೆ, ಒಂದು ವೇಳೆ ಪ್ರಾಣ ಹಾನಿ ಅದಲ್ಲಿ 50,000.00 ಸಿಗುವ ವಿಮೆಯನ್ನು ಮಾಡಲು ಸಾದ್ಯವಾಗಿದೆ.

*ಕೊಡವೂರು ಹಿರಿಯ ಪ್ರಾಥಮಿಕ ಶಾಲೆ,ಕೊಡವೂರು. * ಬಿ. ವಿ.ಹೆಗ್ಡೆ ಅನುದಾನಿತ ಪ್ರಾಥಮಿಕ ಶಾಲೆ ಕೀಳಂಜೆ, * ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾವಂಜೆ. *ಸರಕಾರಿ ಹಿರಿಯ ಪ್ರಾಥಮಿಕ ಶಾಲೆ  ಮುಗ್ಗೇರಿ. *ಸರಕಾರಿ ಪ್ರಾಥಮಿಕ ಶಾಲೆ ಗರಡಿ ಮಜಲು. *ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಲ್ಕಳೆ. *ಸರಕಾರಿ ಪ್ರಾಥಮಿಕ ಶಾಲೆ  ಕೇಳಾರ್ಕಳ  ಬೆಟ್ಟು. * ಸರಕಾರಿ ಮಾದರಿ  ಹಿರಿಯ ಪ್ರಾಥಮಿಕ ಶಾಲೆ (ಫಿಶರೀಶ್ ) ಮಲ್ಪೆ.


ಒಟ್ಟು 8 ಸರಕಾರಿ ಶಾಲೆಯ 565  ಮಕ್ಕಳಿಗೆ ಉಚಿತ ಆರೋಗ್ಯ ವಿಮೆ ಮಾಡಲು ಸಹಕರಿಸಿದ  ಸೆಲ್ಯೂಟ್ ತಿರಂಗಾ ಉಡುಪಿ, ಹಾವಂಜೆ ಗ್ರಾಮ ಪಂಚಾಯತ್, ಗ್ರಾಮ ವಿಕಾಸ ಸಮಿತಿ ಹಾವಂಜೆ, ಸುಧಾ ಜ್ಯೋತಿ ಕಲಾ ಪ್ರತಿಷ್ಠಾನ ತೆಂಕನಿಡಿಯೂರು, ಸ್ನೇಹಿತ ಯುವ ಸಂಘ ಕಾನಂಗಿ ಈ ಯೋಜನೆಯಲ್ಲಿ ಕೈ ಜೋಡಿಸಿದೆ.  

 
 
 
 
 
 
 
 
 
 
 

Leave a Reply