Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

ಇಂದ್ರಾಳಿ ಆಂಗ್ಲ ಮಾಧ್ಯಮ ಸಮೂಹ ಸಂಸ್ಥೆಗಳು ರಕ್ಷಕ – ಶಿಕ್ಷಕ ಸಂಘದ ಮಹಾಸಭೆ

ಇಂದ್ರಾಳಿ ಆಂಗ್ಲ ಮಾಧ್ಯಮ ಸಮೂಹ ಸಂಸ್ಥೆಗಳ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯು ಶಾಲಾ ಸಂಚಾಲಕರಾದ ಶ್ರೀ. ಕೆ ಅಣ್ಣಪ್ಪ ಶೆಣೈಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ನಿರ್ಗಮನ ಅಧ್ಯಕ್ಷರಾದ ಶ್ರೀ ದಿನೇಶ್ ಹೆಗ್ಡೆ ಆತ್ರಾಡಿ, ಉಪಾಧ್ಯಕ್ಷರಾದ ಶ್ರೀ ಶಶಿರಾಜ್ ಕುಂದರ್ ಕೋಶಾಧಿಕಾರಿ ಶ್ರೀಮತಿ ಅಕ್ಷತಾ ಭಟ್ ಉಪಸ್ಥಿತರಿದ್ದರು.
ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ ವಿನಾಯಕ್ ಕಿಣಿಯವರು ಮತ್ತು ಪ್ರಾಥಮಿಕ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೇಶ್ಮಾ ಶಾಲಾ ವರದಿಯನ್ನು ವಾಚಿಸಿದರು ಹಾಗೂ ಕೋಶಾಧಿಕಾರಿ ಶ್ರೀಮತಿ ಅಕ್ಷತಾ ಭಟ್ 2021-22ರ ಲೆಕ್ಕ ಪತ್ರದ ವರದಿಯನ್ನು ವಾಚಿಸಿದರು.

ಸಭೆಯಲ್ಲಿ ರಕ್ಷಕ – ಶಿಕ್ಷಕ ಸಂಘದ 2022-24ರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದು ಶ್ರೀ ದಿನೇಶ್ ಹೆಗ್ಡೆ ಆತ್ರಾಡಿಯವರು ಅಧ್ಯಕ್ಷರಾಗಿ ಪುನರಾಯ್ಕೆಯದರು. ಉಪಾಧ್ಯಕ್ಷರಾಗಿ ಶ್ರೀ.ಅಶೋಕ ನಾಯಕ್ ಕೋಶಾಧಿಕಾರಿಯಾಗಿ ಶ್ರೀ ಕೆ ಜಗದೀಶ್ ಕಾಮತ್ ಆಯ್ಕೆಯಾದರು.
ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ವಿದ್ಯಾ ಅಮರ ಪೈ, ಶ್ರೀ. ಕೆ.ರತ್ನಾಕರ ಶೆಣೈ, ಶಿಕ್ಷಕ – ರಕ್ಷಕ ಸಂಘದ ಪದಾಧಿಕಾರಿಗಳು, ಶಿಕ್ಷಕವೃಂದ, ಹೆತ್ತವರು ಉಪಸ್ಥಿತರಿದ್ದರು.
ಸಹಶಿಕ್ಷಕಿಯರಾದ ಶ್ರೀಮತಿ ಅನುಪಮ ಸ್ವಾಗತಿಸಿ, ಶ್ರೀಮತಿ ವಿಂಧ್ಯಾ ನಿರೂಪಿಸಿ, ಶ್ರೀಮತಿ ದೀಪಿಕಾ ಭಟ್ ಶ್ರೀಮತಿ ಅಖಿಲಾ ಮತ್ತು ಶ್ರೀಮತಿ ಆಕ್ಷಯ ಭಟ್ ಪ್ರಾರ್ಥನೆಗೈದರು ಶ್ರೀಮತಿ ದೀಪಶ್ರೀ ವಂದಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!