ಉಡುಪಿ ಇಂಡಸ್ತ್ರಿಯಲ್ ಕೋ ಆಪರೇಟಿವ್ ಸೊಸೈಟಿ ಮೂಡುಬೆಳ್ಳೆ ಸ್ಥಳಾಂತರಿತ ಶಾಖೆ ಉದ್ಘಾಟನೆ

ಕಿನ್ನಿಮುಲ್ಕಿಯಲ್ಲಿ ಪ್ರಧಾನ ಕಚೇರಿ ಹೊಂದಿದ ಉಡುಪಿ  ಇಂಡಸ್ತ್ರಿಯಲ್ ಕೋ ಆಪರೇಟಿವ್ ಸೊಸೈಟಿ ೩೦ವರ್ಷಗಳ ಹಿಂದೆ ಆರಂಭಿಸಿದ ಮೂಡುಬೆಳ್ಳೆ ಶಾಖೆಯ ಸ್ಥಳಾಂತರಿತ ಕಟ್ಟಡದ ಉದ್ಘಾಟನೆಯು ಶುಕ್ರವಾರ ಕಾಲೇಜು ರಸ್ತೆಯ ಚರ್ಚ್ ಬಿಲ್ಡಿಂಗ್‌ನಲ್ಲಿ ನೆರವೇರಿತು.
ಮೂಡುಬೆಳ್ಳೆ ಸೈಂಟ್ ಲಾರೆನ್ಸ್ ಚರ್ಚ್ ಧರ್ಮ ಗುರು ಅತಿ ವಂದನೀಯ ರೆ. ಫಾ. ಜಾರ್ಜ್ ಥಾಮಸ್ ಡಿಸೋಜಾ ಉದ್ಘಾಟನೆ ನೆರವೇರಿಸಿ, ಹಣದ ಸದ್ವಿನಿಯೋಗದಿಂದ ವೃದ್ಧಿ ಜತೆಗೆ ಸಮಾಜ, ಪರಿಸರದ ಅಭಿವೃದ್ದಿ ಸಾದ್ಯö. ಸದ್ಭಳಕೆಯಾಗದ ಹಣ ಖರೀದಿ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ದೇವರು, ಸರಕಾರ ಕೊಡುವ ಅವಕಾಶದ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಶ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಆರ್ಥಿಕ ವ್ಯವಸ್ಥೆಗೆ ಸಹಕಾರಿ ಕ್ಷೇತ್ರ ಬಹು ಅಮೂಲ್ಯ ಕೊಡುಗೆ ನೀಡುತ್ತಿದ್ದು ಪ್ರತಿಯೊಂದು ಸಂಸ್ಥೆ ಮೇಲೆ ಜನರಿಟ್ಟ ಪ್ರೀತಿ, ವಿಶ್ವಾಸ, ನಂಬಿಕೆ ಉಳಿಸಿಕೊಳ್ಳುವುದು ಅತಿ ಮುಖ್ಯರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕುಗಳಲ್ಲಿ ಸ್ಥಳೀಯರ ಕೊರತೆಯಿದ್ದರೆ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಸ್ಥಳೀಯ ಜನರ ಜತೆ ಸ್ಥಳೀಯ ನೌಕರರು ಹೊಂದಿದ ಸೌಹಾರ್ದ ಸಂಬಂಧ ಕಾರಣವಾಗಿದೆ.
ಪಡೆದ ಸಾಲದ ಕ್ಲಪ್ತ ಮರುಪಾವತಿ ಅನ್ಯರಿಗೆ ಸಾಲ ಒದಗಿಸಲು ಪೂರಕವಾಗಿದ್ದು ವ್ಯವಹಾರದ ಜತೆಗೆ ಗ್ರಾಹಕರಿಗೆ ಉತ್ತಮ ಸೇವೆ, ಸವಲತ್ತು ಒದಗಿಸುವುದು ಅತಿ ಅಗತ್ಯವಾಗಿದೆ ಎಂದರು. ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಪ್ರವೀಣ್ ಬಿ. ನಾಯಕ್ ಮಾತನಾಡಿ, ಜಿಲ್ಲೆಯ ಬೆಳವಣಿಗೆಯಲ್ಲಿ ಸಹಕಾರಿ ಸಂಘಗಳ ಪಾತ್ರ ಹಿರಿದು. ಶಿಸ್ತುö, ಪಾರದರ್ಶಕತೆಯ ಹಾದಿಯಲ್ಲಿ ಸಂಘಗಳ ಪ್ರಗತಿಗೆ ಇಲಾಖೆ ಸದಾ ಬದ್ಧ ಎಂದು ಹೇಳಿದರು.
ಉಡುಪಿ ಇಂಡಸ್ಟಿçಯಲ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ  ಅರುಣ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಸಣ್ಣ ಉದ್ದಿಮೆ, ಗುಡಿ ಕೈಗಾರಿಕೆ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಾಲ ಒದಗಿಸಲಾಗುತ್ತಿದ್ದು ಲಾಕರ್ ಸೌಲಭ್ಯದ ಸದುಪಯೋಗವನ್ನು ಗ್ರಾಹಕರು ಪಡೆಯಬಹುದು. ಸ್ಥಳೀಯ ಜನತೆಯ ಸಹಕಾರ ಅತ್ಯಗತ್ಯ ಎಂದು ನುಡಿದರು.
ಭದ್ರತಾ ಕೊಠಡಿಯನ್ನು ಮೂಡುಬೆಳ್ಳೆ ಗ್ರಾ ಪಂ. ಅಧ್ಯಕ್ಷ  ಸುಧಾಕರ ಪೂಜಾರಿ ಉದ್ಘಾಟಿಸಿದರು. ಡಾ. ಎಚ್. ಬಿ. ಶೆಟ್ಟಿ ಮಾತನಾಡಿದರು. ಉತ್ತಮ ಗ್ರಾಹಕರಾದ ಥಾಮಸ್ ಡಿಮೆಲ್ಲೊ, ವರದರಾಜ ಕಾಮತ್, ಸುಮ ಶೆಟ್ಟಿ, ರೋಮನ್ ಡಿಸೋಜ, ಪುಂಡಲೀಕ ನಾಯಕ್, ವಿನಿಲ್ ವಿನ್ಸೆಂಟ್ ಡಿಸೋಜ ಅವರನ್ನು ಗೌರವಿಸಲಾಯಿತು.
ವಿನೋದಾ ಶೆಟ್ಟಿ, ಕವಿತಾ ಹಾಗೂ ಸಹನಾ ಪ್ರಾರ್ಥಿಸಿದರು.
ಸೊಸೈಟಿ   ಅಧ್ಯಕ್ಷ   ಅರುಣ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ರಾಜೇಶ್ ಹೆಗ್ಡೆ ಪ್ರಾಸ್ತಾವಿಕ ಮಾತನ್ನಾಡಿದರು. ಉಪಾಧ್ಯಕ್ಷ ಮಟ್ಟಾರು ಗಣೇಶ್ ಕಿಣಿ ವಂದಿಸಿದರು.
 
 
 
 
 
 
 
 
 
 
 

Leave a Reply