ಹಾವುಗಳು ಪ್ರಕೃತಿಗೆ ದೇವರ ಕೊಡುಗೆ-ಉರಗ ತಜ್ಞ ಗುರುರಾಜ್ ಸನಿಲ್

ಉಡುಪಿ : ನಮ್ಮ ಪರಿಸರ ತುಂಬಾ ನಾನಾವಿಧದ ಹಾವುಗಳು ಸುತ್ತಾಡುತ್ತಿದ್ದು ಅವೆಂದೂ ಭಯಂಕರಗಳಾಗಿರದೇ ಪರಿಸರ ಸ್ವಚ್ಛತೆಯನ್ನು ಕಾಪಾಡಿ ಆರೋಗ್ಯವಂತ ಸಮಾಜಕ್ಕೆ ದೇವರು ನೀಡಿದ ಕೊಡುಗೆಗಳಾಗಿವೆ.

ಬಹುತೇಕ ಹಾವುಗಳು ಮೃದು ಸ್ವಭಾವವನ್ನು ಹೊಂದಿದ್ದು ಮನುಷ್ಯರಿಂದ ತೊಂದರೆಗೊಳಗಾದಾಗ ಮಾತ್ರ ಪ್ರತಿಕಾರ ಗೈಯುತ್ತವೆ. ತಮ್ಮ ಆಹಾರವನ್ನು ಅರಸುತ್ತಾ ಬಂದ ಹಾವುಗಳ ಸಂಚಾರದಿಂದ ಪರಿಸರ ಮಾಲಿನ್ಯ ಸಂಪೂರ್ಣ ದೂರವಾಗುವ ಮೂಲಕ ಆರೋಗ್ಯವಂತ ಸಮಾಜಕ್ಕೆ ಅವುಗಳು ಪೂರಕವಾಗುತ್ತವೆ ಎಂದು ಖ್ಯಾತ ಉರಗ ತಜ್ಞ ಗುರುರಾಜ್ ಸನಿಲ್ ಹೇಳಿದ್ದಾರೆ.

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರೆಡ್ ಕ್ರಾಸ್ ಘಟಕದಿಂದ ಜನವರಿ 28ರಂದು ಹಮ್ಮಿಕೊಂಡ ‘ಹಾವು-ನಾವು’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ವಿಷದ ಹಾವುಗಳು ಒಂದೊಮ್ಮೆ ಕಚ್ಚಿದರೆ ತತ್ ಕ್ಷಣ ಕಂಡುಕೊಳ್ಳಬಹುದಾದ ಪ್ರಾಥಮಿಕ ಚಿಕಿತ್ಸೆಯ ಬಗೆಗೆ ಈ ಸಂದರ್ಭದಲ್ಲಿ ಅವರು ಮಾಹಿತಿ ನೀಡಿದರು‌.
ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಅಧ್ಯಕ್ಷತೆ ವಹಿಸಿದ್ದರು. ರೆಡ್ ಕ್ರಾಸ್ ಘಟಕದ ಅಧ್ಯಾಪಕ ಸಲಹೆಗಾರ ಜಾವೆದ್ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply