ಸೌದಿ ಅರೇಬಿಯಾ ಪರೀಕ್ಷಾ ಕೇಂದ್ರಗಳಲ್ಲಿ ಹಿಜಾಬ್‌ ನಿಷೇಧ

ರಿಯಾಧ್:‌ ಜಾತ್ಯತೀತ ರಾಷ್ಟ್ರವಾದ ಭಾರತದಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡದಿದ್ದರೆ ನಾವು ಪರೀಕ್ಷೆಯನ್ನೇ ಬರೆಯುವುದಿಲ್ಲ ಎಂದು ಮನೆಗೆ ಹೋದ ವಿದ್ಯಾರ್ಥಿನಿಯರಿದ್ದಾರೆ. ಆದರೆ, ಇಸ್ಲಾಮಿಕ್‌ ರಾಷ್ಟ್ರವಾದ ಸೌದಿಅರೇಬಿಯಾದಲ್ಲಿಯೇ ಪರೀಕ್ಷಾ ಕೇಂದ್ರಗಳಲ್ಲಿ ಹೆಣ್ಣುಮಕ್ಕಳು ಹಿಜಾಬ್‌ ಧರಿಸುವು ದನ್ನು ನಿಷೇಧಿಸಲಾಗಿದೆ. ಆ ಮೂಲಕ ಸೌದಿ ಅರೇಬಿಯಾ ಕ್ರಾಂತಿಕಾರಿ ಹೆಜ್ಜೆ ಇರಿಸಿದೆ.

ಸೌದಿ ಶಿಕ್ಷಣ ಹಾಗೂ ತರಬೇತಿ ಮೌಲ್ಯಮಾಪನ ಆಯೋಗವು (ETEC) ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಕಾರಣಕ್ಕೂ ಹೆಣ್ಣುಮಕ್ಕಳು ಹಿಜಾಬ್‌ ಧರಿಸಿ ಬರುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಹಿಜಾಬ್‌ ಧರಿಸುವ ಬದಲು ಇನ್ನುಮುಂದೆ ಸಮವಸ್ತ್ರ ಧರಿಸಿ ಆಗಮಿಸಬೇಕು ಎಂದು ಆದೇಶಿಸಿದೆ. ನಾಲ್ಕು ವರ್ಷದ ಹಿಂದೆಯೇ ಅಂದರೆ, 2018ರಲ್ಲಿಯೇ ಸೌದಿ ಅರೇಬಿಯಾ ಬುರ್ಖಾವನ್ನು ಕಾನೂನುಬದ್ಧ ಅಲ್ಲ ಎಂದು ಘೋಷಿಸಿತ್ತು.

ಸೌದಿ ಅರೇಬಿಯಾದಲ್ಲಿ ಹೆಣ್ಣುಮಕ್ಕಳು ಶಾಲೆಗೆ ಬರುವಾಗ ಕೂದಲು, ತೋಲು ಹಾಗೂ ಕುತ್ತಿಗೆ ಮರೆಮಾಚುವ ಹಾಗಿರುವ ವಸ್ತ್ರವನ್ನು ಧರಿಸುತ್ತಾರೆ. ಇದಕ್ಕೆ ‘ಅಬಯ’ ಎಂದು ಕರೆಯುತ್ತಾರೆ. ಇದನ್ನೇ ಸೌದಿ ನಿಷೇಧಿಸಿದೆ. ಹಿಜಾಬ್‌ ವಿರುದ್ಧ ಇರಾನ್‌ನಲ್ಲಿ ದೊಡ್ಡ ಆಂದೋಲನವೇ ನಡೆದಿತ್ತು. ಆದರೆ, ಕರ್ನಾಟಕದಲ್ಲಿ ಮಾತ್ರ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಮೊರೆ ಹೋಗಲಾಗಿದೆ.

 
 
 
 
 
 
 
 
 
 
 

Leave a Reply