ಕೋಲ್ಕೊತಾದಲ್ಲಿ ಹೆಲ್ಮೆಟ್ ಇಲ್ಲದಿದ್ದರೆ ಇಂಧನ ಇಲ್ಲ ಎಂಬ ಹೊಸ ನಿಯಮ

ಕೋಲ್ಕೊತಾ: ದ್ವಿಚಕ್ರ ವಾಹನ ಅಪಘಾತದಿಂದ ಆಘಾತಕಾರಿ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಡಿಸೆಂಬರ್ 8ರಿಂದ ಫೆಬ್ರವರಿ 5ರವರೆಗೆ ‘ಹೆಲ್ಮೆಟ್ ಇಲ್ಲ ಅಂದರೆ, ಇಂಧನ ಇಲ್ಲ’ ಎಂಬ ವಿಭಿನ್ನ ಅಭಿಯಾನವನ್ನು ಕೋಲ್ಕೊತಾ ಪೊಲೀಸರು ಆಯೋಜಿಸಿದ್ದಾರೆ. 

ಈ ದಿನಗಳಲ್ಲಿ ಯಾವುದೇ ಪೆಟ್ರೋಲ್ ಬಂಕ್ ಗಳಿಗೆ ಹೆಲ್ಮೆಟ್ ಇಲ್ಲದೆ ಬರುವ ದ್ವಿಚಕ್ರ ವಾಹನ ಸವಾರರಿಗೆ ಪೆಟ್ರೋಲ್ ಮಾರಾಟ ಮಾಡುವಂತಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಹಿನ್ನೆಲೆ ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ಮಾತನಾಡಿ, ನಾವು ಈ ನಿಯಮವನ್ನು ಸ್ವಾಗತಿಸುತ್ತೇವೆ. ಆದರೆ ಕೆಲವೊಮ್ಮೆ ಪೊಲೀಸರ ರಕ್ಷಣೆ ಇಲ್ಲದೆ ಇಂತಹ ನಿಯಮ ಜಾರಿಗೊಳಿಸುವುದು ಕಷ್ಟಸಾಧ್ಯ ಎಂದಿದ್ದಾರೆ.

ಇಂತಹುದೇ ನಿಯಮವನ್ನು ಈ ಹಿಂದೆ ನೋಯ್ಡಾ, ಅಲಿಗಢ ಮತ್ತು ಬೆಂಗಳೂರಿನಲ್ಲೂ ಕೂಡ ಈ ರೀತಿಯ ಜಾರಿಗೆ ತರಲಾಗಿತ್ತು.

 
 
 
 
 
 
 
 
 
 
 

Leave a Reply