ಶಿವಪುರ: ಹೆಬ್ರಿ ತಾಲೂಕು ಮಟ್ಟದ ಕವಿಗೋಷ್ಠಿ

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಹೆಬ್ರಿ ತಾಲ್ಲೂಕು ಘಟಕ ಜೇಸಿಐ ಹೆಬ್ರಿ ಮತ್ತು ಗೆಳೆಯರ ಬಳಗ ಶಿವಪುರ ಇದರ ಸಹಯೋಗದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಸಭಾ ಮಂಟಪದಲ್ಲಿ 26.6.2022 ರಂದು ನಡೆದ ಹೆಬ್ರಿ ತಾಲ್ಲೂಕು ಮಟ್ಟದ ಕವಿಗೋಷ್ಠಿ ಯಶಸ್ವಿಯಾಗಿ ನಡೆಯಿತು.

ಸರಿಯಾದ ಸಮಯಕ್ಕೆ ಪ್ರಾರಂಭವಾಗಿ ನಿಗದಿತ ಸಮಯ ಮುಕ್ತಾಯವಾಯಿತು.ಅತಿಥಿ ಅಭ್ಯಾಗತರ ಸಮಯ ಪ್ರಜ್ಞೆ , ಸಮಯೋಚಿತ ಮಾತುಗಳಿಂದ ಮತ್ತು ಕವಿಗಳ ಆಸಕ್ತಿ , ಅತ್ತ್ಯುತ್ತಮ ಸಹಭಾಗಿತ್ವದಿಂದ ಕಾರ್ಯಕ್ರಮ ಯಶಸ್ವಿಯಾಯಿತು.

ಉದ್ಘಾಟನಾ ಸಮಾರಂಭ ಯಾವುದೇ ವಿಳಂಬವಿಲ್ಲದೆ ಸಾಗಿತ್ತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಬ್ರಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರೀನಿವಾಸ ಭಂಡಾರಿಯವರು ವಹಿಸಿ ಬಹಳ ಉತ್ತಮ ರೀತಿಯಲ್ಲಿ ನಡೆಸಿಕೊಟ್ಟರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿರುವ ಮಹಾಬಲೇಶ್ವರ ಅಡಿಗ ಅವರು ಸಾಹಿತ್ಯದಲ್ಲಿ ಯಕ್ಷ ಸಾಹಿತ್ಯದ ಬಗ್ಗೆಯೂ ಕಾರ್ಯಕ್ರಮಗಳು ನಡೆಯುವಂತೆ ಆಗಬೇಕು ಎನ್ನುತ್ತಾ ಶಿವಪುರದಲ್ಲಿನ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಚಟುವಟಿಕೆಗಳನ್ನು ನೆನಪಿಸಿಕೊಂಡರು.

ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ರಾಗಿರುವ ನೀಲಾವರ ಸುರೇಂದ್ರ ಅಡಿಗ ಅವರು ಆಶಯ ಭಾಷಣ ಮಾಡಿದರು ವೇದಿಕೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಶಂಕರ ನಾರಾಯಣ ಕೊಡಂಚ , ಕವಿಗೋಷ್ಠಿ ಸಮನ್ವಯಕಾರರಾದ ಶ್ರೀಮತಿ ಕಾತ್ಯಾಯಿನಿ ಕುಂಜಿಬೆಟ್ಟು, ಶಿವಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೇಖರ್ ಶೆಟ್ಟಿ , ಉದ್ಯಮಿ ಪ್ರಸನ್ನ ಕೂಡ (ಮೂಕಾಂಬಿಕಾ ಕ್ರಷರ್ ಕಲ್ಮುಂಡ ) ಹೆಬ್ರಿ ತಾಲ್ಲೂಕು ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷರಾದ ರಮೇಶ್ ಪೂಜಾರಿ , ಕಸಾಪ ಉಡುಪಿ ಜಿಲ್ಲೆ ಇದರ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ , ಸಂಘಟನಾ ಕಾರ್ಯದರ್ಶಿಯಾದ ಪಿವಿ ಆನಂದ ಸಾಲಿಗ್ರಾಮ , ಕಾರ್ಕಳ ತಾಲ್ಲೂಕು ಕಸಾಪ ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಜೇಸಿಐ ಹೆಬ್ರಿ ಅಧ್ಯಕ್ಷರಾದ ರೂಪೇಶ್ ನಾಯ್ಕ್ , ಉಡುಪಿ ತಾಲ್ಲೂಕು ಕಸಾಪ ಅಧ್ಯಕ್ಷರಾದ ರವಿರಾಜ್ ಎಚ್ ಪಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶೈಲಜಾ ಶಿವಪುರ ಇವರ ಸ್ವರಚಿತ ಧ್ವನಿಸುರುಳಿ ಕರುಳ “ಬಳ್ಳಿ” ಬಿಡುಗಡೆಗೊಳಿಸಿದರು

ಕಸಾಪ ಹೆಬ್ರಿ ತಾಲ್ಲೂಕು ಗೌರವ ಕಾರ್ಯದರ್ಶಿಯಾಗಿರುವ ಡಾ। ಪ್ರವೀಣ್ ಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು .

ಮಂಜುನಾಥ ಕೆ ಶಿವಪುರ ಇವರು ಸ್ವಾಗತಿಸಿ ಸತೀಶ್ ಬೇಳಂಜೆ ಇವರು ಧನ್ಯವಾದವಿತ್ತರು .ಚೈತನ್ಯ ಶಿವಪುರ ಇವರ ಗೀತ ಗಾಯನ ಕಾರ್ಯಕ್ರಮವಿತ್ತು.

ತದನಂತರ ಹೆಬ್ರಿ ತಾಲ್ಲೂಕು ಮಟ್ಟದ ಕವಿಗೋಷ್ಟಿ ಇದೇ ವೇದಿಕೆಯಲ್ಲಿ ನಡೆಯಿತು .ಸಮನ್ವಯಕಾರರಾಗಿ ಶ್ರೀಮತಿ ಕಾತ್ಯಾಯಿನಿ ಕುಂಜಿಬೆಟ್ಟು ಅವರು ಕಾರ್ಯಕ್ರಮ ನಡೆಸಿಕೊಟ್ಟರು
ಕವಿಗಳಾಗಿ ಅರುಣ ಹೆಬ್ರಿ, ಪೂರ್ಣೇಶ್ ಹೆಬ್ರಿ, ಅಶ್ವಿನಿ ಕೆ ಕೊಂಜಾಡಿ, ದೀಕ್ಷಾ ಎಸ್ ಯು, ಪ್ರೇಮ ಬಸನಗೌಡ ಬಿರಾದಾರ ,ಸತೀಶ್ ಆಚಾರ್ಯ ವರಂಗ ,ಅಜಿತ್ ಮುದ್ರಾಡಿ, ಪ್ರೀತಿ ಮಾಂತೇಶ್ ಬನ್ನೆಟ್ಟಿ ,ಅಶ್ವಿನಿ ಕುಲಾಲ್ ಕಡ್ತಲ ,ಸಚಿನ್ ಕಾನ್ಬೆಟ್ಟು,ಶರಣ್ಯ ಬೆಳುವಾಯಿ, ಚೈತ್ರ ಕಬ್ಬಿನಾಲೆ ,ಡಾ। ಪ್ರವೀಣ್ ಕುಮಾರ್ ,ಮಹೇಶ್ ಹೈಕಾಡಿ ಸತೀಶ ಬೇಳಂಜೆ ,ಪ್ರೀತೇಶ್ ಕುಮಾರ್ ,ಸವಿತಾ ರತ್ನಾಕರ ಇವರು ತಮ್ಮ ಕವನಗಳನ್ನು ವಾಚಿಸಿದರು
ಮಂಜುನಾಥ್ ಕೆ ಶಿವಪುರ ಅವರು ಕವಿಗೋಷ್ಠಿಯನ್ನು ನಿರ್ವಹಿಸಿ, ಸಂತೋಷ್ ಮುದ್ರಾಡಿ ಇವರು ಧನ್ಯವಾದವನ್ನಿತ್ತರು

ಸಮನ್ವಯಕಾರರಾಗಿ ಮಾತನಾಡಿದ ಕಾತ್ಯಾಯಿನಿ ಕುಂಜಿಬೆಟ್ಟು ಅವರು ಕವನ ಹೇಗಿರಬೇಕು, ಕಾವ್ಯ ಉಂಟಾಗುವ ಬಗೆಯನ್ನು ಹಲವು ಕನ್ನಡದ ಕವಿಗಳ ಕವನಗಳನ್ನು ಉಲ್ಲೇಖಿಸಿ ಮಾತನಾಡಿದರು .ಜೊತೆಗೆ ಕವಿಗಳ ಕವನಗಳ ಬಗ್ಗೆ ಪ್ರೋತ್ಸಾಹದ ಮಾತುಗಳನ್ನಾಡಿ ಪ್ರೋತ್ಸಾಹಿಸಿದರು.
ಕವಿಗೋಷ್ಠಿಯಲ್ಲಿ ವಾಚಿಸಿದ ಕವನಗಳ ಬಗ್ಗೆ ಸಭೆಯಲ್ಲಿ ಉತ್ತಮ ಪ್ರತಿಸ್ಪಂದನೆ ವ್ಯಕ್ತವಾಯಿತು. ಉತ್ತಮ ರೀತಿಯಲ್ಲಿ ಕವಿಗೋಷ್ಠಿ ಮೂಡಿಬಂತು .ಯಾವುದೇ ಅವಸರ ಇಲ್ಲದೆ ಎಲ್ಲ ಕವಿಗಳೂ ಈ ಕವನ ಗೋಷ್ಠಿಯಲ್ಲಿ ಬಹಳ ಖುಷಿಯಿಂದ ಪಾಲ್ಗೊಂಡರು. ಅದೇ ರೀತಿ ಸಮನ್ವಯಕಾರರ ಕಾವ್ಯ ಪಾಠ ಕವಿಗಳಿಗೆ ಹಿತವೆನಿಸಿತು.

ಬೇರೆ ಬೇರೆ ಕ್ಷೇತ್ರದಲ್ಲಿ ಶಿವಪುರದ ಹೆಸರನ್ನು ಪಸರಿಸಿದ ಮಹನೀಯರ ಹೆಸರನ್ನು ಉಲ್ಲೇಖಿಸುತ್ತ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಕಳ ಘಟಕದ ಪೂರ್ವಾಧ್ಯಕ್ಷರು ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರೂ ಆಗಿರುವ ಹರಿದಾಸ ಬಿ ಸಿ ರಾವ್ ಶಿವಪುರ ಇವರ ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಲಾಯಿತು.
ಯಕ್ಷ ಸಾಹಿತ್ಯದ ಬಗ್ಗೆಯೂ ಹೆಚ್ಚಿನ ಗಮನ ಹರಿಸುವಂತೆ ಅತಿಥಿ ಅಭ್ಯಾಗತರು ಹಾಗೂ ಸಭಿಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಮತ್ತೊಂದು ಚಿಂತನೆಗೆ ಕಾರಣವಾಯಿತು.

ಅಚ್ಚುಕಟ್ಟಾದ ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಪ್ರಾರಂಭವಾಗಿ ಸಮಯಕ್ಕೆ ಸರಿಯಾಗಿ ನಿಗದಿತ ಸಮಯದಲ್ಲಿ ಮುಗಿದದ್ದು ಖುಷಿಯೆನಿಸಿತು. ಅಚ್ಚುಕಟ್ಟಾದ ಸಭಾ ವ್ಯವಸ್ಥೆ ,ಉತ್ತಮ ಸಭಾಂಗಣ ಅಚ್ಚುಕಟ್ಟಾದ ಊಟದ ವ್ಯವಸ್ಥೆ…… ಶಂಕರನ ಸನ್ನಿಧಾನದಲ್ಲಿ ನಡೆದ ಈ ಹೆಬ್ರಿ ತಾಲ್ಲೂಕು ಮಟ್ಟದ ಕವಿಗೋಷ್ಠಿ ಒಂದು ಯಶಸ್ವಿ ಮತ್ತು ಅರ್ಥಪೂರ್ಣ ಕಾರ್ಯಕ್ರಮ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ

ಉಡುಪಿ ಜಿಲ್ಲಾ ಕಸಾಪ ಪದಾಧಿಕಾರಿಗಳು ,ಜೇಸಿಐ ಸದಸ್ಯರು, ಶಿವಪುರದ ಹೆಬ್ರಿಯ ಸಾಹಿತ್ಯ ಆಸಕ್ತರು , ಶಿವಪುರ ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಊರು ಪರವೂರಿನ ಸಾಹಿತ್ಯ ಆಸಕ್ತರ ಭಾಗವಹಿಸುವಿಕೆಯು ಕವಿಗೋಷ್ಠಿಯು ಸಹೃದಯ ಯರ ಭಾಗವಹಿಸುವಿಕೆಯಿಂದ ಯಶಸ್ಸು ಆಗುತ್ತದೆ ಎಂಬುದನ್ನು ತೋರಿಸಿಕೊಟ್ಟಿತು.

 
 
 
 
 
 
 
 
 
 
 

Leave a Reply