ಹೆಬ್ರಿಯಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ

ಸಮಯೋಚಿತವಾಗಿ ನೇತ್ರ ತಪಾಸಣೆ ಮಾಡಿಸಿಕೊ೦ಡು ತಮ್ಮ ಕಣ್ಣಿನ ದೃಷ್ಟಿಯನ್ನು ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಗ್ರಾಮಾ೦ತರ ಪ್ರದೇಶದಲ್ಲಿ ಜನರಿಗೆ ತಮ್ಮ ನೇತ್ರ ತಪಾಸಣೆ ಮಾಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ಹೆಬ್ರಿ ಬ೦ಟರ ಸ೦ಘದ ಉದಯ ಕುಮಾರ್ ಶೆಟ್ಟಿ ಅವರ ನಡೆ ಶ್ಲಾಘನೀಯ ಎ೦ದು ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರು ಹೇಳಿದರು.
ಅವರು ಹೆಬ್ರಿ ಬ೦ಟರ ಯಾನೆ ನಾಡವರ ಸ೦ಘ ಅಜೆಕಾರು ವಲಯ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ, ಹೆಬ್ರಿ ಸಮುದಾಯ ಆರೋಗ್ಯ ಕೇ೦ದ್ರ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ವ್ಯ.ಸೇ.ಸ.ಸ೦ಘ, ಲಯನ್ಸ್ ಕ್ಲಬ್ ಹೆಬ್ರಿ ಸಿಟಿ, ಸೀತಾನದಿ ಸೌಖ್ಯ ಯೋಗ ಟ್ರಸ್ಟ್, ಬೇಳ೦ಜೆ ಹಾ. ಉ.ಸ.ಸ೦ಘ ಇವುಗಳ ಸಹಯೋಗದೊ೦ದಿಗೆ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇವರು ಹೆಬ್ರಿ ಬ೦ಟರ ಭವನದಲ್ಲಿ ನಡೆಸಿಕೊಟ್ಟ ಉಚಿತ ನೇತ್ರ ತಪಾಸಣೆ, ಪೊರೆ ಚಿಕಿತ್ಸೆ ಮತ್ತು ಉಚಿತ ಕನ್ನಡಕ ವಿತರಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರ೦ಭದ ಅಧ್ಯಕ್ಷತೆ ವಹಿಸಿದ್ದ ಹೆಬ್ರಿ ಅಜೆಕಾರು ಬ೦ಟರ ಸ೦ಘದ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಅವರು ಮಾತನಾಡಿ ಸಮಾಜದ ಕಟ್ಟ ಕಡೆಗಿನ ವ್ಯಕ್ತಿಯೂ ನೇತ್ರ ಚಿಕಿತ್ಸೆಯಿ೦ದ ವ೦ಚಿತರಾಗಬಾರದು ಎ೦ಬ ಉದ್ದೇಶವಿಟ್ಟುಕೊ೦ಡು ಮಾಡುವ ಪ್ರಸಾದ್ ನೇತ್ರಾಲಯದ ಇ೦ತಹ ಶಿಬಿರಗಳು ಸಮಾಜಕ್ಕೆ ಮಾದರಿಯಾಗಿದೆ ಎ೦ದರು.
ಮಹಿಳಾ ಬ೦ಟರ ಸ೦ಘದ ಅಧ್ಯಕ್ಷೆ ಭಾನು ಪಿ. ಬಲ್ಲಾಳ್, ಹೆಬ್ರಿ ಸಿಟಿ ಲಯನ್ಸ್ ಅಧ್ಯಕ್ಷ ವಾದಿರಾಜ್ ಶೆಟ್ಟಿ, ವ್ಯವಸಾಯ ಸೇವಾ ಸಹಕಾರಿ ಸ೦ಘದ ಅಧ್ಯಕ್ಷ ಕರುಣಾಕರ ಶೆಟ್ಟಿ, ನೇತ್ರ ತಜ್ಞೆ ಡಾ. ಗುಣಶ್ರೀ, ಡಾ. ಅನ್ವಿತಾ ಶೊಭಿತಾ, ಪ್ರಸಾದ್ ನೇತ್ರಾಲಯದ ಸಾರ್ವಜನಿಕ ಸ೦ಪರ್ಕಾಧಿಕಾರಿ ಮೋಹನ್‌ದಾಸ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ೦ಟರ ಸ೦ಘದ ಪ್ರಧಾನ ಕಾರ್ಯದರ್ಶಿ ಸೀತಾನದಿ ವಿಟ್ಠಲ ಶೆಟ್ಟಿ ಸ್ವಗತಿಸಿದರು. ಹೆರ್ಗ ಪ್ರೌಢ ಶಾಲೆಯ ಶಿಕ್ಷಕ ನಿತ್ಯಾನ೦ದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಯುವ ಬ೦ಟರ ಸ೦ಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ವ೦ದಿಸಿದರು.
ಶಿಬಿರದಲ್ಲಿ ಭಾಗವಹಿಸಿ ತಪಾಸಣೆಗೊಳಗಾದ ೩೫೦ ಶಿಬಿರಾರ್ಥಿಗಳಲ್ಲಿ ೫೦ ಮ೦ದಿ ಉಚಿತ ಶಸ್ತç ಚಿಕಿತ್ಸೆಗೆ ಆಯ್ಕೆಯಾದರು, ೨೪೦ ಮ೦ದಿ ಫಲಾನುಭವಿಗೆಳು ಉಚಿತ ಕನ್ನಡಕ ವಿತರಣೆಗೆ ಆಯ್ಕೆಯಾದರು. ೪೦ ಮ೦ದಿ ನೇತ್ರದಾನದ ಘೋಷಣೆ ಮಾಡಿದರು.

 
 
 
 
 
 
 
 
 
 
 

Leave a Reply