ನಾಟ್ಕದೂರಿನಲ್ಲಿ ಸೆಷ್ಟಂಬರ್‌ 29ರಿಂದ ಅಕ್ಟೋಬರ್‌ 06 ಅವ್ವ ನನ್ನವ್ವ ರಂಗೋತ್ಸವ

ಹೆಬ್ರಿ : ಮುದ್ರಾಡಿ ನಾಟ್ಕದೂರು ನಮ ತುಳುವೆರ್‌ಕಲಾ ಸಂಘಟನೆಯ ವತಿಯಿಂದ ಸಂಸ್ಕೃತಿ ಇಲಾಖೆ ನವದೆಹಲಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರದ ಸಹಕಾರದಲ್ಲಿ ದಸರಾ ಮಹೋತ್ಸವದ ಪ್ರಯುಕ್ತ ೨೨ನೇ ವರ್ಷದ ನವರಂಗೋತ್ಸವ ಮತ್ತು ನಾಟ್ಕ ಮುದ್ರಾಡಿಯ ೩೭ನೇ ಸಂಭ್ರಮ ಮತ್ತು ಅವ್ವ ನನ್ನವ್ವ ರಂಗೋತ್ಸವ ನಡೆಯಲಿದೆ. ೯ ದಿನಗಳ ಕಾಲ ವಿವಿಧ ನಾಟಕ, ಯಕ್ಷಗಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್‌ಕುಮಾರ್‌ರಂಗೋತ್ಸವ ಉದ್ಘಾಟಿಸುವರು. ಕ್ಷೇತ್ರದ ಅಧ್ಯಕ್ಷರಾದ ರಾಜ್ಯ ಗಣಿ ಮತ್ತು ಕ್ರಷರ್‌ಮಾಲಕರ ಸಂಘದ ಅಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಅಧ್ಯಕ್ಷತೆ ವಹಿಸುವರು. ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಹೆಗ್ಡೆ, ಉಡುಪಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮುದ್ರಾಡಿ ದಿವಾಕರ ಎನ್‌ಶೆಟ್ಟಿ, ವಾಸ್ತು ತಜ್ಞ ಪ್ರಮಲ್‌ಕುಮಾರ್‌ಕಾರ್ಕಳ, ಮುದ್ರಾಡಿ ಗ್ರಾಮ ಪಂಚಾಯಿತಿ ಸದಸ್ಯ ಗಣಪತಿ ಮುದ್ರಾಡಿ ಸಹಿತ ವಿವಿಧ ಗಣ್ಯರು ಭಾಗವಹಿಸುವರು. ಉತ್ತರಕನ್ನಡ ಜಿಲ್ಲೆಯ ರಂಗ ನಟ ನಿರ್ದೇಶಕ ಗುರುಮೂರ್ತಿ ವಿಎಸ್‌ಅವರಿಗೆ ಬಿ.ವಿ.ಕಾರಂತ ಯುವ ಪ್ರಶಸ್ತಿ ಹಾಗೂ ಭಾಗವತ ಪಟ್ಟ ಸತೀಶ ಶೆಟ್ಟಿ, ಬಿಲ್ಲವ ಮಹಾ ಮಂಡಳದ ಅಧ್ಯಕ್ಷ ಡಾ.ರಾಜಶೇಖರ ಕೋಟ್ಯಾನ್‌, ಉದ್ಯಮಿ ಮೂಡಬಿದರೆಯ ತಿಮ್ಮಯ್ಯ ಶೆಟ್ಟಿ, ಉಡುಪಿ ಪ್ರಸಾದ್‌ನೇತ್ರಾಲಯದ ಡಾ. ಕೃಷ್ಣ ಪ್ರಸಾದ್‌, ಉದ್ಯಮಿ ಸುಗುಣ ಶಂಕರ್‌ಉಡುಪಿ, ಉದ್ಯಮಿ ಪ್ರವೀಣ್‌ಜತ್ತನ್‌, ದೊಂಡೆರಂಗಡಿ ಪಂಚಮಿ ಚಾರಿಟೇಬಲ್‌ಟ್ರಸ್ಟ್‌ಅಧ್ಯಕ್ಷ ಪೂನಾ ಪುರಂದರ ಪೂಜಾರಿ ಅವರಿಗೆ ಕರ್ಣಾಟ ನಾಡ ಪೋಷಕ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಘಟನೆಯ ಅಧ್ಯಕ್ಷ ಸುಕುಮಾರ್‌ಮೋಹನ್‌ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply