ಆದರ್ಶ ಆಸ್ಪತ್ರೆ ಉಡುಪಿ: ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಆದರ್ಶ ಚಾರಿಟೇಬಲ್ ಟ್ರಸ್ಟ್ (ರಿ) ಆದರ್ಶ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಮತ್ತು ಆದರ್ಶ ಆಸ್ಪತ್ರೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಮಧುಮೇಹ ದಿನದ ಅಂಗವಾಗಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದಿನಾಂಕ 13.11.2022ನೇ ಭಾನುವಾರ ಬೆಳಿಗ್ಗೆ 8.೦೦ರಿಂದ ಮಧ್ಯಾಹ್ನ 2:೦೦ರ ವರೆಗೆ ಆದರ್ಶ ಆಸ್ಪತ್ರೆ ಉಡುಪಿ ಇಲ್ಲಿ ಆಯೋಜಿಸಲಾಗಿದೆ. 

    ಈ ಶಿಬಿರವನ್ನು ಕರ್ನಾಟಕ ಸರಕಾರ ಮಾಜಿ ಸಂಸದರು ಹಾಗೂ ಸಚಿವರಾದ ಸನ್ಮಾನ್ಯ ಶ್ರೀ ವಿನಯ ಕುಮಾರ್ ಸೊರಕೆಯವರು ದೀಪವನ್ನು ಬೆಳಗಿಸುವ ಮೂಲಕ ಉದ್ಘಾಟಿಸಲಿರುವರು. ಡಯಾಬಿಟೀಸ್ ಖಾಯಿಲೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಡಯಾಬಿಟೀಸ್ ರಸಪ್ರಶ್ನೆ ಕರ‍್ಯಕ್ರಮವನ್ನು ಉಡುಪಿ ತಾಲೂಕಿನ ಮಕ್ಕಳಿಗೆ ಆಯೋಜಿಸಲಾಗಿತ್ತು. ಒಂದನೇ ವಿಭಾಗದಲ್ಲಿ ಪ್ರೌಢಶಾಲಾ ಮಕ್ಕಳಿಗೆ ಹಾಗೂ ಎರಡನೇ ವಿಭಾಗದಲ್ಲಿ ಪದವಿ ಪೂರ್ವ ಮಕ್ಕಳಿಗೆ, ನರ್ಸಿಂಗ್ ಕಾಲೇಜು ಪ್ಯಾರಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಮಕ್ಕಳಿಗೆ ಆಯೋಜಿಸಲಾಗಿತ್ತು. ವಿಜೇತರಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನವನ್ನು ವಿತರಿಸಲಾಗುವುದು. 

    ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಆದರ್ಶ ಆಸ್ಪತ್ರೆಯ ತಜ್ಞ ವೈದ್ಯರುಗಳಾದ, ಡಾ| ಜಿ.ಎಸ್.ಚಂದ್ರಶೇಖರ್ ಹಿರಿಯ ವೈದ್ಯಕೀಯ ತಜ್ಞರು, ಡಾ| ಉದಯ ಕುಮಾರ ಪ್ರಭು ಹಿರಿಯ ವೈದ್ಯಕೀಯ ತಜ್ಞರು, ಡಾ| ಸುದೀಪ್ ಶೆಟ್ಟಿ ವೈದ್ಯಕೀಯ ತಜ್ಞರು, ಡಾ| ಶ್ರೀಕಾಂತ ಕೃಷ್ಣ ಹಿರಿಯ ಹೃದ್ರೋಗ ತಜ್ಞರು, ಡಾ| ವಿಶು ಕುಮಾರ ಬಿ ಹೃದ್ರೋಗ ತಜ್ಞರು, ಡಾ| ಮೇಘಾ ಪೈ ಮೂತ್ರಪಿಂಡ ಖಾಯಿಲೆಗಳ ತಜ್ಞರು, ಡಾ| ಸಜ್ಜಾ ವೆಂಕಟೇಶ್ ನರರೋಗ ತಜ್ಞರು, ಡಾ| ಅಭಿಜಿತ್ ಕುಮಾರ್ ನೇತ್ರ ತಜ್ಞರು ಭಾಗವಹಿಸಲಿರುವರು. 

   ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸುವ ಎಲ್ಲರಿಗೂ ಮೂತ್ರಪಿಂಡ ಖಾಯಿಲೆಗಳ ತಪಾಸಣೆ, ನರರೋಗ ತಪಾಸಣೆ, ಹೃದಯ ರೋಗದ ತಪಾಸಣೆ, ಕಣ್ಣಿನ ತಪಾಸಣೆ ಹಾಗೂ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ, ರಕ್ತದೊತ್ತಡ ಪರೀಕ್ಷೆ, ರಕ್ತದ ಸಕ್ಕರೆ ಅಂಶ, ರಕ್ತದ ಕೊಬ್ಬಿನಾಂಶ ಹಾಗೂ ಇಸಿಜಿ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ವೈದ್ಯರ ಪರೀಕ್ಷೆಯ ಸಮಯದಲ್ಲಿ ಅಗತ್ಯವೆಂದು ಕಂಡುಬರುವ ರೋಗಿಗಳಿಗೆ ಹೃದಯದ ಸ್ಕಾö್ಯನಿಂಗ್ (ಇಕೋ) ಹಾಗೂ ಟಿಎಂಟಿ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ಅಲ್ಲದೆ ಡಯಾಬಿಟೀಸ್ ಖಾಯಿಲೆ ಬಗ್ಗೆ ಮಾಹಿತಿ ನೀಡುವ ವಿವಿಧ ಪ್ರಾತ್ಯಕ್ಷಿತೆಗಳ ಪ್ರದರ್ಶನವಿರುತ್ತದೆ. ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಈ ಶಿಬಿರದ ಪ್ರಯೋಜನವನ್ನು ಪಡೆಯಬೇಕೆಂದು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ| ಜಿ ಎಸ್ ಚಂದ್ರಶೇಖರ್ ತಿಳಿಸಿರುತ್ತಾರೆ.

Leave a Reply