ಶಿಲೆಯಲ್ಲಿ ಅರಳಿದ ಯೋಗಾಸನ ಭಂಗಿ

ಆಧುನಿಕ ಒತ್ತಡದ ಜೀವನಕ್ರಮದಲ್ಲಿ ದೊಡ್ದವರಷ್ಟೇ ಅಲ್ಲದೇ ಮಕ್ಕಳೂ ಸಹ ಇರುವುದನ್ನು ನಾವೆಲ್ಲ ಗಮನಿಸಬಹುದಾಗಿದೆ. ಇಂದು ವಿದ್ಯಾರ್ಥಿಗಳು ನಾನಾ ಕಾರಣದಿಂದ ಒತ್ತಡದಲ್ಲಿಯೇ ಕಲಿಕೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿರುವುದು ಅದು ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ. ಇದನ್ನು ಅರಿತು ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಅಂಗಡಿಯಲ್ಲಿ ನಿತ್ಯವೂ ಸಹ ಯೋಗ-ಧ್ಯಾನ ಮತ್ತು ಆಸನವನ್ನು ಕಲಿಸಿ, ಅದರ ಉಪಯುಕ್ತತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗುತ್ತಿದೆ. ದೈಹಿಕ-ಮಾನಸಿಕ ವಿಕಾಸಕ್ಕೆ ಹಾಗೂ ಮಾನವನ ದೇಹದ ಪ್ರತಿಯೊಂದು ಅವಯವದ ಸಕ್ರಿಯ ಚಟುವಟಿಕೆಗೆ ಸಾಧನವಾದ ಯೋಗ ಶಿಕ್ಷಣವನ್ನು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಕಲಿಸುವುದರಿಂದ ಅವರ ಸರ್ವತೋಮುಖ ವಿಕಾಸಕ್ಕೆ ಕಾರಣವೆಂದು ಅರಿತು ಸಿದ್ಧಿವಿನಾಯಕ ಶಾಲೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಯೋಗ ಶಿಕ್ಷಣವನ್ನು ಮಕ್ಕಳಿಗೆ ಕಡ್ಡಾಯಗೊಳಿಸಿದೆ. 

ಇದು ಕೇವಲ ಪಾಠಕ್ಕೇ ಮಾತ್ರ ಸೀಮಿತವಾಗಿರದೇ ಮಕ್ಕಳ ಎದುರಿಗೆ ಸದಾಕಾಲ ಯೋಗ-ಯೋಗಾಸನದ ಭಂಗಿ ಕಾಣುತ್ತಿರಲಿ, ಆ ಮೂಲಕ ಅವರಿಗೆ ಸ್ಪೂರ್ತಿಯಾಗಲಿ ಎಂಬ ಸದಾಶಯದಿಂದ ಶಾಲಾ ಆವಾರದಲ್ಲಿ “ಮತಂಗವನ” ಎಂಬ ಉದ್ಯಾನವನವನ್ನು ನಿರ್ಮಿಸಿ ಅಲ್ಲಿ ಹಲವಾರು ಮಾದರಿಯ ಯೋಗಾಸನದ ಭಂಗಿಯ ಕಲ್ಲಿನ ಶಿಲ್ಪವನ್ನು ನಿರ್ಮಿಸಿ, ಶಿಲೆಯಲ್ಲಿ ಯೋಗಾಸನದ ಮಾದರಿಯನ್ನು ನಿರ್ಮಿಸಿದ್ದಾರೆ.

ಇದು ಮಕ್ಕಳನ್ನು ಅತಿಯಾಗಿ ಆಕರ್ಷಿಸಿದ್ದು, ಯೋಗ-ಯೋಗಾಸನವನ್ನು ಅವರೆಲ್ಲ ಮೆಚ್ಚಿ ಅದನ್ನು ನಿತ್ಯವೂ ತಾವು ಮಾಡಲು ಅನುಕೂಲ ಮಾಡಿಕೊಟ್ಟಿದ್ದು ವಿಶೇಷ.

ಒಟ್ಟಿನಲ್ಲಿ ನಮ್ಮ ಸನಾತನ ಭಾರತೀಯ ಪರಂಪರೆಯಾದ ಯೋಗವನ್ನು ಎಳವೆಯಲ್ಲಿಯೇ ಮಕ್ಕಳ ಮನದಲ್ಲಿ ಬಿತ್ತಿ ಆ ಮೂಲಕ ಓದಿನಲ್ಲಿ ಏಕಾಗ್ರತೆ ಹೊಂದಿ, ಉತ್ತಮ ಶೈಕ್ಷಣಿಕ ಜೀವನ ಸಾಗಿಸಿ, ಭಾವಿ ಭವಿಷ್ಯತ್ತಿಗೆ ಇಲ್ಲಿಯ ಮಕ್ಕಳು ಆಸ್ತಿಯಾಗಲಿ ಎಂಬ ಸದಾಶಯ ಈ ವಿದ್ಯಾಸಂಸ್ಥೆಯದ್ದಾಗಿದೆ.

 
 
 
 
 
 
 
 
 

Leave a Reply