ಹಾಸನದಲ್ಲಿ ಪ್ರತಿಭಟನಾಕಾರರ ರಂಪಾಟ

ಹಾಸನ: ಇಂದು ಕನ್ನಡ ಪರ ಸಂಘಟನೆಗಳಿಂದ ಮರಾಠ ನಿಗಮ ಸ್ಥಾಪನೆ ವಿರೋಧಿಸಿ ರಾಜ್ಯಾದ್ಯಂತ ಬಂದ್ ನಡೆಯುತ್ತಿದ್ದೆ. ಹಾಸನದಲ್ಲಿ ಪ್ರತಿಭಟನಾಕಾರರು ಎನ್​.ಆರ್​. ವೃತ್ತದಲ್ಲಿ ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ್ದು, ಬಸ್ ಗಳಿಗೆ ಅಡ್ಡ ಮಲಗಿ ರಂಪಾಟ ಮಾಡಿದ್ದಾರೆ.

ಎಂದಿನಂತೆ ಬೆಳಗ್ಗೆಯಿಂದ ಸಂಚಾರ ಆರಂಭಿಸಲಾಗಿತ್ತು. ಕೆಲ ಪ್ರತಿಭಟನಾಕಾರರು ಬಸ್​ಗಳಿಗೆ ಅಡ್ಡಮಲಗಿದ್ದು, ಅವರನ್ನು ಪೊಲೀಸರು ಚದುರಿಸಿದ್ದಾರೆ. ಇನ್ನು ಬಿಎಂ ರಸ್ತೆಯ ಬಳಿ ತೆರೆದಿರುವ ಹೋಟೆಲ್, ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಬಂದ್​ಗೆ ಕರೆ ಕೊಟ್ಟಿದ್ದರೂ ಯಾಕಾಗಿ ವ್ಯಾಪಾರ ನಡೆಸುತ್ತಿದ್ದೀರಿ ಎಂದು ಆವಾಜ್ ಕೂಡ ಹಾಕಿದ್ದಾರೆ.

ಈ ವೇಳೆ ಪ್ರತಿಭಟನಾಕಾರರು ಮತ್ತು ವರ್ತಕರ ನಡುವೆ ವಾಗ್ವಾದ ನಡೆದಿದ್ದು ದರ್ಪದಿಂದ ಹೇಳಿದರೆ ಬಂದ್ ಮಾಡೋದಿಲ್ಲ. ಮನವಿ ಮಾಡಿ ಎಂದು ವ್ಯಾಪಾರಿಗಳು ತಿರುಗೇಟು ಕೊಟ್ಟಿದ್ದಾರೆ. ಹಾಸನದದ್ಯಾಂತ ಪಾದಯಾತ್ರೆಯಲ್ಲಿ ತೆರಳಿ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸುತ್ತಿರುವ ಪ್ರತಿಭಟನಾಕಾರರನ್ನು ಪೊಲೀಸರು ಹಿಂಬಾಲಿಸುತ್ತಿದ್ದು ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.

 
 
 
 
 
 
 
 
 
 
 

Leave a Reply