ಶಿಕ್ಷಕರ ದಿನಾಚರಣೆ ಪ್ರಯುಕ್ತ ಶ್ರೀ ಕೃಷ್ಣಮಧ್ವಾಸಂಸ್ಥಾನಮ್ ಮೂಲಕ ಉಡುಪಿ ಸಂಸ್ಕೃತ ಕಾಲೇಜಿನ ನಿವೃತ ಪ್ರಾಚಾರ್ಯರದ ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯರನ್ನು ಅವರ ಧರ್ಮಪತ್ನಿ ಸರಸ್ವತಿಯವರೊಂದಿಗೆ ಅಭಿನಂದಿಸಲಾಯಿತು.
ಅಭಿನಂದನೆ ಸ್ವೀಕರಿಸಿದ ಸಗ್ರಿ ಆಚಾರ್ಯರು ಪ್ರತಿ ಶಿಕ್ಷಕನೊಳಗೆ ವೇದವ್ಯಾಸ ಹಯಗ್ರೀವ ದೇವರ ಚಿಂತನೆ ಮೂಲಕ ಗುರುಗಳಿಗೆ ಗೌರವಿಸಿದರೆ ಅಂತರ್ಯಾಮಿ ಜ್ಞಾನರೂಪಿ ಭಗವಂತನು ನಿಮ್ಮಿಂದ ಸತ್ಕರ್ಮಗಳಿಗೆ ಪ್ರೇರೇಪಿಸಿ ಆದರ್ಶವಂತನಾಗಿ ಬದುಕಬಹುದು. ಹಾಗೆ ಜೀವನ ನಡೆಸಿದರೆ ಅದೇ ಗುರುಗಳಿಗೆ ನೀವು ನೀಡುವ ಮಹಾ ಗುರು ವಂದನೆ ಎಂಬುದಾಗಿ ಗುರು ಸಂದೇಶ ನೀಡಿ ಹರಸಿದರು.
ಸಂಸ್ಥಾನದ ಗೋಪಾಲಕೃಷ್ಣ ಭಟ್, ಹಯವದನ ಭಟ್, ವಿಷ್ಣು ಎಂ. ಎಸ್, ಭಾಸ್ಕರ್ ರಾವ್ ಕಿದಿಯೂರ್, ಸುರೇಶ್ ಕಾರಂತ್, ರವೀಂದ್ರ ಆಚಾರ್, ಕಿರಣ್ ಎಸ್ ರಾವ್, ಅನಂತಕೃಷ್ಣ ಭಾಗವತ್ , ಅನಂದತೀರ್ಥ್ ಉಪಾಧ್ಯಾಯ, ಅಶ್ವಿನಿ ಉಪಸ್ಥಿತರಿದ್ದರು. ಸಂಸ್ಥಾನದ ಸಂಚಾಲಕ ರಮೇಶ್ ಭಟ್ ಹಾಗೂ ಮಹಿತೋಷ್ ಆಚಾರ್ಯರು ಕಾರ್ಯಕ್ರಮವನ್ನು ಸಂಯೋಜಿದ್ದು ಓಂಪ್ರಕಾಶ್ ಭಟ್ ಧನ್ಯವಾದವಿತ್ತರು