ಕೋಟ- ಹಂದೆ ದೇವಳದ ನೂತನ ರಂಗಮOಟಪ ಸಚಿವರಿಂದ ಉದ್ಘಾಟನೆ

ಕೋಟ:ರಾಜಕಾರಣವನ್ನೆ ವೃತ್ತಿಯಾಗಿ ಸ್ವೀಕರಿಸದೆ ವೃತವಾಗಿ ತಮ್ಮ ಜೀವಿತ ಅವಧಿಯಲ್ಲಿ ಯಶೋಗಾಧೆ ಸೃಷ್ಠಿಸಿದ ಡಾ.ವಿ ಎಸ್ ಆಚಾರ್ಯರವರ ರಾಜಕಾರಣದ ತಳಹದಿಯಲ್ಲಿ ಬೆಳೆದವನು ನಾನು,ಅವರ ಇಚ್ಛೆಗೆ ಅನುಗುಣವಾಗಿ ರಾಜ್ಯದ ಮುಜರಾಯಿ ಮಂತ್ರಿಯಾಗಿ ಸಾಕಷ್ಟು ದೇವಳಗಳಿಗೆ ಹಣ ಬಿಡುಗಡೆಗೊಳಿಸಿದ್ದೇನೆ ಅಭಿವೃದ್ಧಿ ಸಹ ಕಂಡಿದೆ ಎಂದು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕೋಟದ ಹಂದೆ ವಿಷ್ಣುಮೂರ್ತಿವಿನಾಯಕ ದೇವಳದ ರಂಗಮoಟಪ ಲೋಕಾರ್ಪಣೆಗೊಳಿಸಿ ಮಾತನಾಡಿ ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿಗೊಂಡರೆ ಆಯಾ ಗ್ರಾಮಗಳು ಅಭಿವೃದ್ಧಿ ಗೊಂಡoತೆ ಈ ದಿಸೆಯಲ್ಲಿ ಹಂದೆ ದೇವಳದ ಅಭಿವೃದ್ಧಿಗೆ ನಮ್ಮ ಸರಕಾರ ಇನ್ನಷ್ಟು ಸಹಕಾರ ನೀಡುತ್ತದೆ. ರಾಜ್ಯ ಸರಕಾರದ ಇಲಾಖೆಯಲ್ಲಿನ ಸಚಿವನಾಗಿ ಸಮರ್ಥವಾಗಿ ನಿಭಾಯಿಸಿದ ತೃಪ್ತಿ ನನ್ನಗಿದೆ.ರಾಜಕಾರಣದಲ್ಲಿ ಶ್ರದ್ಧಾಭಾವದಲ್ಲಿ ಕಾರ್ಯನಿರ್ವಹಿಸಿ, ಜನಸಾಮಾನ್ಯರ ತುಡಿತಗಳಿಗೆ ಸರಕಾರ ಸ್ಪಂದಿಸುವ ಕೆಲಸ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಸಚಿವರನ್ನು ಸನ್ಮಾನಿಸಲಾಯಿತು.ಇದೇ ವೇಳೆ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿದ ಹೆಚ್ ಅನಿಲ್ ಹಂದೆ ಸಹಿತ ಹಲವರನ್ನು ಗೌರವಿಸಲಾಯಿತು.

ದೇವಳದ ಅಧ್ಯಕ್ಷ ಹೆಚ್.ಅಮರ ಹಂದೆ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಹಂದೆ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜಾರಾಮ ಹಂದರ,ದೇವಳದ ಪುಷ್ಕಣಿ ಜೀರ್ಣೋದ್ಧಾರ ಸಮಿತಿ ಸದಸ್ಯ ಪದ್ಮನಾಭ ಭಟ್,ನಿವೃತ್ತ ಬ್ಯಾಂಕ್ ಅಧಿಕಾರಿ ನರಸಿಂಹ ಸೋಮಯಾಜಿ,ಜೀರ್ಣೋದ್ಧಾರ ಸಮಿತಿ ಸದಸ್ಯ ವೆಂಕಟರಮಣ ಸೋಮಯಾಜಿ, ಕಟ್ಟೆ ಗೆಳೆಯರ ಬಳಗದ ಕಾರ್ಯದರ್ಶಿ ಸುರೇಶ್ ಪೂಜಾರಿ,ಕೋಟತಟ್ಟು ಗ್ರಾ.ಪಂ ಅಧ್ಯಕ್ಷೆ ಅಶ್ವಿನಿದಿನೇಶ್ ,ಉಪಾಧ್ಯಕ್ಷ ವಾಸು ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.ಉಪನ್ಯಾಸಕ ರಾಘವೇಂದ್ರ ತುಂಗ ಸ್ವಾಗತಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕ ಹೆಚ್ ಸುಜಯೀಂದ್ರ ಹಂದೆ ಕಾರ್ಯಕ್ರಮ ನಿರೂಪಿಸಿದರು.ಸುದರ್ಶನ ಉರಾಳ ವಂದಿಸಿದರು.

ಭಾನುವಾರ ಕೋಟದ ಹಂದೆ ವಿಷ್ಣುಮೂರ್ತಿವಿನಾಯಕ ದೇವಳದ ರಂಗಮoಟಪವನ್ನು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಲೋಕಾರ್ಪಣೆಗೊಳಿಸಿದರು.

 
 
 
 
 
 
 
 
 
 
 

Leave a Reply