ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದೇ ಟಿ.ಎ.ಪೈಯವರಿಗೆ ಶ್ರದ್ಧಾ೦ಜಲಿ – ಡಾ| ಹರೀಶ ಹಂದೆ

ಮಣಿಪಾಲ,:  ಜಲಕ್ಷಾಮ, ಹವಾಮಾನ ವೈಪರೀತ್ಯ, ಇಂಧನವೇ ಮೊದಲಾದ ಜಾಗತಿಕ ಸಮಸ್ಯೆಗಳಿಗೆ ಮಣಿಪಾಲ ಕೇಂದ್ರವು ಪರಿಹಾರ ಸೂಚಕ ಕೇಂದ್ರವಾಗಬೇಕು. ಎರಡು ವರ್ಷಗಳಿಂದ ಕಾಡುತ್ತಿರುವ ಕೊರೊನಾ ಕಾಲಘಟ್ಟದಲ್ಲಿ ಇದುವೇ ಟಿ.ಎ.ಪೈಯವರಿಗೆ ಸಲ್ಲಿಸಬಹುದಾದ ಶ್ರದ್ಧಾಾಂಜಲಿ ಎಂದು ಸೆಲ್ಕೊ ಸೋಲಾರ್ ಲೈಟ್‌ಸ್‌ ಪ್ರೈ.ಲಿ. ಸ್ಥಾಪಕ ಮತ್ತು ಅಧ್ಯಕ್ಷ ಡಾ| ಹರೀಶ ಹಂದೆ ಅಭಿಪ್ರಾಾಯಪಟ್ಟರು.
 
ಮಣಿಪಾಲದ ಟಿ.ಎ.ಪೈ ಮೆನೇಜ್ಮೆೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ ) ಮತ್ತು ಮಾಹೆ ವಿ.ವಿ. ಸೋಮವಾರ ವ್ಯಾಲಿವ್ಯೂ ಹೊಟೇಲ್ ಸಭಾಂಗಣದಲ್ಲಿ ಆಯೋಜಿಸಿದ ಸ್ಥಾಪಕರ  ದಿನದಂದು 39ನೆಯ ಟಿ.ಎ.ಪೈ ಸ್ಮಾರಕ  ಉಪನ್ಯಾಾಸ ನೀಡಿ ಡಾ. ಹಂದೆ ಮಾತನಾಡಿದರು.
ದಶಕಗಳ ಹಿಂದೆಯೇ ಬಯೋಗ್ಯಾಸ್‌ಗೆ ಉತ್ತೇಜನ ನೀಡಿದ ಪೈಯವರು ಕೊರೊನಾ ಕಾಲಘಟ್ಟದಲ್ಲಿ ಉದ್ಭವವಾದ ಸಮಸ್ಯೆಗಳಿಗೆ ಮಾರ್ಗದರ್ಶಕರಾಗಿ ಕಂಡುಬರುತ್ತಾರೆ. 
ಕೊರೊನಾದಿಂದ 16 ಕೋಟಿ ಜನರು ಬಡತನ ರೇಖೆಗೆ ಬಂದಿದ್ದಾರೆ. ಪೈಯವರ ಇಂಕ್ಲೂಸಿವ್‌ನೆಸ್ (ಎಲ್ಲರನ್ನು ಒಳಗೊಳಿಸುವಿಕೆ) ನೀತಿ ಸಾರುವ ನಾಯಕತ್ವ ಇಂದು ಅಗತ್ಯವಾಗಿದೆ. ಇದುವೇ ರಾಷ್ಟ್ರದ ಆಸ್ತಿ ನಿರ್ಮಿಸುವ ಕ್ರಮ ಎಂದು ಡಾ| ಹಂದೆ ಹೇಳಿದರು. ಬ್ರೆಜಿಲ್‌ನಂತಹ ರಾಷ್ಟ್ರಗಳಲ್ಲಿ ನಗರೀಕರಣವೇ ಕ್ರಿಮಿನಲ್‌ ಗಳನ್ನು ಸೃಷ್ಟಿಸಿವೆ.   ಮಣಿಪುರದಲ್ಲಿ 100 ಕಿ.ಮೀ.ಗೆ ಒಂದು ಬ್ಯಾಂಕ್  ಸಿಗುತ್ತಿಲ್ಲ. ಅಸ್ಸಾಂನ ಭತ್ತದ ಉತ್ಪಾದನಾ ತಜ್ಞ ಬೆಂಗಳೂರಿನಲ್ಲಿ ಇನ್ನೇನೋ ಮಾಡುತ್ತಿದ್ದಾನೆ.  
 ಇಥಿಯೋಪಿಯಾ, ತಾಂಜಾನಿಯಾದಲ್ಲಿ ನೀರಿನ ಬರ ಕಾಣುತ್ತಿದೆ. ಆರೋಗ್ಯ ಸೇವೆಗಳು ಎಲ್ಲರಿಗೂ ಸಿಗುವಂತಾಗಬೇಕು. ವಿಶ್ವ ಸಂಸ್ಥೆ 2030ರಲ್ಲಿ ಗುರಿ ಇರಿಸಿಕೊಂಡ ‘ಎಸ್‌ಜಿಎಸ್’ ಸುಸ್ಥಿರ  ಅಭಿವೃದ್ದಿ ನೀತಿಯಲ್ಲಿ ಹವಾಮಾನ ಬದಲಾವಣೆ, ಇಂಧನ, ಬರವೇ ಮೊದಲಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಟ್ಯಾಾಪ್ಮಿ ಮಾಹೆ, ಭಾರತೀಯ ವಿಕಾಸ ಟ್ರಸ್‌ಟ್‌‌ಗಳು ಮುಂದಾಗಿ ಮಣಿಪಾಲವು ಸಾಮಾಜಿಕ ಉದ್ಯಮಶೀಲರ ರಾಜಧಾನಿಯಾಗಬೇಕು ಎಂದು ಡಾ| ಹಂದೆ ಆಶಿಸಿದರು.
 
ಕರಾವಳಿಯ ಹೈನುಕ್ರಾಂತಿ : ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ಅವರು ಗೌರವ ಅತಿಥಿ ಗಳಾಗಿ ಪಾಲ್ಗೊ0ಡು ಟಿ.ಎ.ಪೈಯವರ ಕಾಳಜಿಯಿಂದಾಗಿಯೇ ಕ್ಷೀರ ಕ್ಷಾಮವಿದ್ದ ಕರಾವಳಿ ಜಿಲ್ಲೆಯಲ್ಲೀಗ ನಿತ್ಯ 6 ಲಕ್ಷ ಲೀ. ಹಾಲು ಉತ್ಪಾಾದನೆಯಾಗುತ್ತಿದೆ.
ಲಾಭದಲ್ಲಿ, ಗುಣಮಟ್ಟದಲ್ಲಿ ದ.ಕ. ಹಾಲು ಒಕ್ಕೂಟ ಮುಂಚೂಣಿಯಲ್ಲಿರಲೂ ಕೆನರಾ ಮಿಲ್ಕ್   ಮೂಲಕ ಪೈಯವರು ಹಾಕಿಕೊಟ್ಟ ಭದ್ರಬುನಾದಿ ಕಾರಣ ಎಂದು ಬೆಟ್ಟು ಮಾಡಿದರು.
 
ಅಂಚೆ ಲಕೋಟೆ ಬಿಡುಗಡೆ : ಜನ್ಮ ಶತಮಾನೋತ್ಸವದ ಅಂಗವಾಗಿ ಅಂಚೆ ಇಲಾಖೆ ಹೊರತಂದ ವಿಶೇಷ ಲಕೋಟೆ ಮತ್ತು ಅಂಚೆ ಚೀಟಿಯನ್ನು ಕರ್ನಾಟಕ ವೃತ್ತದ ಚೀಫ್ ಪೋಸ್ಟ್  ಮಾಸ್ಟರ್ ಜನರಲ್ ಶಾರದಾ ಸಂಪತ್ ಅವರು ಬಿಡುಗಡೆ ಗೊಳಿಸಿದರು. ಮಹಿಳಾ ಸಬಲೀಕರಣ, ಕೃಷಿ ಸಾಲ, ಧೀರೂಭಾಯಿ ಅಂಬಾನಿ, ಪಾಟೀಲ ಪುಟ್ಟಪ್ಪನಂತಹವರಿಗೆ ಸಾಲ ನೀಡಿಕೆಯಲ್ಲಿ ತೋರಿದ ಮಾನವೀಯತೆಗಳಿಗೆ ಟಿ.ಎ.ಪೈ ಅಗ್ರಣಿಯಾಗಿ ಕಂಡುಬರುತ್ತಾರೆ. 
ಇದರ ಜತೆ ಉಡುಪಿ ಲಯನ್‌ಸ್‌ ಕ್ಲಬ್ ಅಧ್ಯಕ್ಷರೂ ಆಗಿದ್ದರು. ಮುಂದಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಇಂತಹ ವ್ಯಕ್ತಿಗಳು ಶತಮಾನಕ್ಕೆ ಒಮ್ಮೆ ಜನಿಸುತ್ತಾಾರೆ ಎಂದು ಮಾಹೆ ಸಹಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್ ಬಣ್ಣಿಸಿದರು.
ಟಿ.ಎ.ಪೈಯವರು ದೂರದೃಷ್ಟಿಯಿಂದ ಆರಂಭಿಸಿದ ಟ್ಯಾಪ್ಮಿ ಮುಂಚೂಣಿ ಬಿ ಸ್ಕೂಲ್‌ಗಳಲ್ಲಿ ಒಂದಾಗಿದೆ ಎಂದು ಮಾಹೆ ಕುಲಪತಿ ಎಂ.ಡಿ. ವೆಂಕಟೇಶ್ ಹೇಳಿದರು.
 
ಮಂಗಳೂರು ಕೆಎಂಸಿ ಪ್ರಾಧ್ಯಾಪಕ ಡಾ| ಲಕ್ಷ್ಮಣ ಪ್ರಭು ಟಿ.ಎ.ಪೈಯವರ ಸಂಸ್ಮರಣೆ ಮಾಡಿದರು. ಮಾಹೆ ಟ್ರಸ್ಟ್ ನ  ಟ್ರಸ್ಟಿ ವಸಂತಿ ಪೈ, ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್ ಯು. ಪೈ, ಬಿವಿಟಿ ನಿರ್ವಾಹಕ ವಿಶ್ವಸ್ಥ ಟಿ.ಅಶೋಕ್ ಪೈ ಉಪಸ್ಥಿತರಿದ್ದರು.
ಟ್ಯಾಾಪ್ಮಿ ನಿರ್ದೇಶಕ ಪ್ರೊ. ಮಧು ವೀರರಾಘವನ್ ಸ್ವಾಗತಿಸಿದರು. ಶೈಕ್ಷಣಿಕ ಡೀನ್ ಡಾ| ವಿಶ್ವನಾಥನ್ ಅಯ್ಯರ್ ಕಾರ್ಯಕ್ರಮ ನಿರ್ವಹಿಸಿ ಅಸೋಸಿಯೇಟ್ ಡೀನ್ ಡಾ| ಸುಧೀಂದ್ರ ವಂದಿಸಿದರು.
ಟ್ಯಾಪ್ಮಿ ಸಿಬಂದಿಗಳಾದ ಡಾ ಸುಲಗ್ನಾ ಮುಖರ್ಜಿ, ಡಾ ಅನಿಮೇಶ ಬಹದೂರ್, ಸುಧಾ ಭಟ್, ನಾರಾಯಣ ಅವರನ್ನು ಗೌರವಿಸಲಾಯಿತು.
 
 
 
 
 
 
 
 
 
 
 

Leave a Reply