“ತಾಡವಾಲೆ ಗ್ರಂಥಗಳನ್ನು ಓದುವ ತಂಡವನ್ನು ಸಿದ್ಧಪಡಿಸಬೇಕು” ~ಗುರುಪ್ರಸಾದ್

ನಮ್ಮ ದೇಶದಲ್ಲಿ ಅಸಂಖ್ಯಾತ ತಾಡವಾಲೆ ಉಪಲಬ್ಧವಿದ್ದು ಅವುಗಳ ಸಂರಕ್ಷಣೆ ವೇಗವಾಗಿ ನಡೆಯಬೇಕಿದೆ. ವಿವಿಧ ಭಾಷೆಗಳ ಲಿಪಿಯಲ್ಲಿರುವ ತಾಡವಾಲೆ ಗ್ರಂಥಗಳನ್ನು ಓದುವ ತಂಡವನ್ನು ಸಿದ್ಧಪಡಿಸಬೇಕು. ಇದು ಸಾಧ್ಯವಾದರೆ ಮಾತ್ರ ಗಂಥಗಳ ಸರಿಯಾದ ಸಂರಕ್ಷಣೆ ಸಾಧ್ಯವಾಗುವುದು. ಈ ನಿಟ್ಟಿನಲ್ಲಿ ಕ-ನಾಡು ಸಂಸ್ಥೆಯು ಕನ್ನಡ-ತುಳು-ಸಂಸ್ಕೃತ ಮುಂತಾದ ಲಿಪಿಗಳನ್ನೊಳಗೊಂಡ ಕೀಬೋರ್ಡ್ ನ್ನು ಸಿದ್ಧಪಡಿಸಿ ತರಗತಿಯನ್ನು ನೀಡಲಾಗುತ್ತಿದೆ ಎಂದು ಕ-ನಾಡು ಮುಖ್ಯಸ್ಥ ಗುರುಪ್ರಸಾದ್ ತಿಳಿಸಿದರು.

ಅಮೇರಿಕಾದಲ್ಲಿ ಅನೇಕ ವರ್ಷಗಳ ಕಾಲ ನೆಲೆಸಿದ್ದ ಗುರುಪ್ರಸಾದ್ ಭಾರತೀಯ ಪ್ರಾಚೀನ ಗ್ರಂಥಗಳ ಸಂರಕ್ಷಣೆಗಾಗಿ ಭಾರತಕ್ಕೆ ಆಗಮಿಸಿ ವಿಶಿಷ್ಟ ಯೋಜನೆಗಳನ್ನು ಆಯೋಜಿಸಿ ಕಾರ್ಯ ಪ್ರವೃತ್ತರಾಗಿದ್ದಾರೆ. ಈ ಯೋಜನೆಯ ಅಂಗವಾಗಿ ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ಗೀತಾ ಮಂದಿರದಲ್ಲಿ ಸ್ಥಾಪಿಸಿರುವ ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದ ಜೊತೆಯಲ್ಲಿ ಜಂಟಿ ಕಾರ್ಯಕ್ರಮವನ್ನು ನಿರ್ಣಯಿಸಿ ಪ್ರತಿಷ್ಠಾನಕ್ಕೆ ಮೂರು ಕೀಬೋರ್ಡ್ ನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಕ-ನಾಡು ಸಂಸ್ಥೆಯ ಸದಸ್ಯರು ಇದ್ದರು.

ಪ್ರತಿಷ್ಠಾನದ ನಿರ್ದೇಶಕರಾದ ಡಾ.ಬಿ.ಗೋಪಾಲಾಚಾರ್ಯರು ಮುಂದಿನ ಕಾರ್ಯಯೋಜನೆಗಳನ್ನು ತಿಳಿಸಿದರು.

 
 
 
 
 
 
 
 
 
 
 

Leave a Reply