ಶ್ರೀ ಗುರುನರಸಿಂಹ ಸೌಹಾರ್ದ ಸಹಕಾರಿ ಸಂಘ ಸತತ ಏಳು ವರ್ಷಗಳಿಂದ ಶೇ 25 ರ ಡಿವಿಡೆಂದ್ ಹಂಚಿಕೆ

ಕೋಟ: ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ
ಸಾಲಿಗ್ರಾಮ ಇದರ ಹನ್ನೆರಡನೇ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಸೆ.೧೦ರಂದು
ಸoಘದ ಆಡಳಿತ ಕಛೇರಿಯಲ್ಲಿ ಜರಗಿತು. ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ
ಆನಂದ್ ಸಿ ಕುಂದರ್‌ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು ಆರಂಭದಿoದಲೂ ಲಾಭದಲ್ಲಿ ಮುನ್ನೆಡೆಯುತ್ತಿದ್ದು ವರದಿ ಸಾಲಿನಲ್ಲಿ ರೂ. 24.೦೦ ಲಕ್ಷದಷ್ಟರ ಲಾಭಗಳಿಸಿ ಸದಸ್ಯರಿಗೆ ಶೇ. 25ರ ಡಿವಿಡೆಂದ್ ಘೋಷಿಸುದರ ಮೂಲಕ
ಸತತ ಏಳು ವರ್ಷಗಳಿಂದ ಸದಸ್ಯರಿಗೆ ಲಾಭಾಂಶ ನೀಡಿ ದಾಖಲೆ ನಿರ್ಮಿಸಿದೆ. ಗ್ರಾಮಾಂತರ
ಪ್ರದೇಶದ ಜನರಲ್ಲಿ ಉಳಿತಾಯ ಮನೋವೃತ್ತಿಯನ್ನು ವಡಮೂಡಿಸಿ ರೂ.
9.50 ಕೋಟಿಗೂ ಅಧಿಕ ಠೇವಣಿ ಸಂಗೃಹಿಸಿ 39 ಕೋಟಿ ವ್ಯವಹಾರ ನಡೆಸಿ ಸದಸ್ಯರಿಗೆ ರೂ. 8.50 ಕೋಟಿಗೂ ಮಿಕ್ಕಿ ವಿವಿಧ ಬಗೆಯ ಸಾಲ ವಿತರಿಸಿದೆ.
ಕಳೆದ ಸಾಲಿನಲ್ಲಿ ಮಹಾಮಾರಿ ಕರೋನಾದಿಂದ ಒಟ್ಟಾರೆ ಆರ್ಥಿಕ ಚೇತರಿಕೆ ಇಲ್ಲದಿದ್ದರೂ
ಸಾಲಗಾರ ಪ್ರe್ಞÁವಂತ ಸದಸ್ಯರು ಸ್ವಯಂ ಪ್ರೇರಿತರಾಗಿ ಸಾಲ ಸಂದಾಯ ಮಾಡಿ
ಸಂಘವು ಶೇ. 98 ಕ್ಕೂ ಅಧಿಕ ವಸೂಲಿ ಪ್ರಗತಿ ಸಾದಿಸಿದೆ. ಒಟ್ಟಿನಲ್ಲಿ ಸದಸ್ಯರ
ಸಕ್ರಿಯ ಸಹಭಾಗಿತ್ವದಲ್ಲಿ ಕ್ಷಿಪ್ರ ಪ್ರಗತಿ ಸಾಧಿಸಿದ ಹೆಮ್ಮೆ ಇದೆ ಎಂದು
ಅಭಿಪ್ರಾಯಪಟ್ಟರು ಸoಘದ ಲೆಕ್ಕ ಪರಿಶೋಧಕ ಪದ್ಮನಾಭ
ಕಾಂಚನ್‌ರವರು ಸಂಘದ ಲೆಕ್ಕ ಪತ್ರಗಳು ಮತ್ತು ಕಡತಗಳ
ನಿರ್ವಹಣೆ ಮೆಚ್ಚತಕ್ಕವಿಚಾರವಾಗಿದ್ದು ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದರೆ
ತಪ್ಪಾಗಲಾರದೆoದರು. ಈ ಹಿನ್ನಲೆಯಲ್ಲಿ ಸಂಘವು “ಅ” ವರ್ಗದ ಆಡಿಟ್ ವರ್ಗೀಕರಣಕ್ಕೆ
ಅರ್ಹತೆ ಹೊಂದಿದೆ ಎಂದರು. ಸoಘದ ಸಂಸ್ಥಾಪಕ ಹೆಚ್ .ಮಧುಸೂಧನ
ಐತಾಳ ಹಾಗೂ ಇತ್ತೀಚಿಗೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು
ಇದರ ನಿರ್ದೇಶಕರಾಗಿ ಆಯ್ಕೆಯಾದ ಸಂಘದ ನಿರ್ದೇಶಕ ಮತ್ತು
ಸಂಸ್ಥಾಪಕರಲ್ಲಿ ಒರ್ವರಾದ ಮಂಜುನಾಥ.ಎಸ್.ಕೆ ಮತ್ತು ಮತ್ತು
ಬ್ರಹ್ಮಾವರ ಕ್ಯಾಥೋಲಿಕ್ ಕ್ರೆಡಿಟ್ ಕೋ- ಆಪರೇಟಿವ್ ಸಂಘದ ಸ್ಥಾಪಕ ಹಾಗೂ ಕಳೆದ
25 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ವೆಲೆರಿಯನ್ ಮೆನೇಜಸ್
ಇವರುಗಳನ್ನು ಸನ್ಮಾನಿಸಲಾಯಿತು.

ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪದವಿ ಪೂರ್ವ ಕಾಲೇಜಿನ
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯದಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ
ಸದಸ್ಯರ ಮಕ್ಕಳಿಗೆ ನಗದು ಬಹುಮನ ನೀಡಿ ಪುರಸ್ಕರಿಸಲಾಯಿತು.

ಸಭೆಯಲ್ಲಿ ಕಾರ್ಯಸೂಚಿಯಂತೆ ಪ್ರತೀಯೋರ್ವ ನಿರ್ದೆಶಕರು
ವಿಷಯವನ್ನು ಮಂಡಿಸಿ ವಿವರಣೆ ನೀಡಿ ಸರ್ವಾನುಮತದ ಅನುಮೋದನೆ
ಪಡೆಯಲಾಯ್ತು. ಸಭೆಯಲ್ಲಿ ಉಪಾದ್ಯಕ್ಷ ಸಂಜೀವ ಜಿ, ನಿರ್ದೇಶಕರುಗಳಾದ
ಡಾ.ಕೆ.ಕೃಷ್ಣ ಕಾಂಚನ್, ಮಂಜುನಾಥ ಎಸ್.ಕೆ., ಡಾ.ಸತೀಶ ಪೂಜಾರಿ, ವಸಂತ ಶೆಟ್ಟಿ, ಶಂಕರ ಬoಗೇರ, ವೈ. ಕೃಷ್ಣಮೂರ್ತಿ ಐತಾಳ, ಹೆಚ್. ಮಧುಸೂಧನ ಐತಾಳ್, ಶಾಂತಾ ಭಟ್ ಮತ್ತು ನಾಗರತ್ನ ಬಾÊರಿ, ಉಪಸ್ಥಿತರಿದ್ದರು. ಸಹಕಾರಿಯ ಪ್ರಧಾನ ವ್ಯವಸ್ಥಾಪಕ ಜಿ.ಎಸ್. ಸೋಮಯಾಜಿಯವರು ವರದಿ ಮಂಡಿಸಿದರು. ಶಾಂತಾ ಭಟ್ಟ
ವಂದನಾರ್ಪಣೆಗೈದರು.

ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಸಾಲಿಗ್ರಾಮ ಇದರ
ಹನ್ನೆರಡನೇ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಸೆ.10ರಂದು ಸಂಘದ ಆಡಳಿತ
ಕಛೇರಿಯಲ್ಲಿ ಜರಗಿತು.

 
 
 
 
 
 
 
 
 

Leave a Reply