Janardhan Kodavoor/ Team KaravaliXpress
24.6 C
Udupi
Thursday, June 30, 2022
Sathyanatha Stores Brahmavara

ಗುಣರಂಜನ ಶೆಟ್ಟಿ ರಕ್ಷಣೆಗಾಗಿ ಮನವಿ

ರಾಜ್ಯ ಜಯ ಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಗುಣರಂಜನ ಶೆಟ್ಟಿಯನ್ನು ಹತ್ಯೆ ಮಾಡಲು ಸಂಚು ಹೂಡಿರುವವರನ್ನು ವಿಳಂಬವಿಲ್ಲದೆ ಬಂಧಿಸಿ ಕ್ರಮ ತೆಗೆದುಕೊಳ್ಳಬೇಕು. ಗುಣರಂಜನ ಶೆಟ್ಟಿಗೆ ಕೂಡಲೆ ರಕ್ಷಣೆ ಒದಗಿಸಬೇಕೆಂದು ರಾಜ್ಯದ ಮುಖ್ಯಮಂತ್ರಿಯವರಿಗೆ ಜಯ ಕರ್ನಾಟಕ ಜನಪರ ವೇದಿಕೆಯ ಉಡುಪಿ ಜಿಲ್ಲಾ ನಿಯೋಗ ಜೂ. 20ರಂದು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿಯವರ ಮೂಲಕ ಮನವಿ ಸಲ್ಲಿಸಿ ಒತ್ತಾಯ ಪಡಿಸಿತು. ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಕಾರ್ಯಕಾರಣಿ ಸದಸ್ಯ ಜನನಿ ದಿವಾಕರ ಶೆಟ್ಟಿ ನೇತೃತ್ವದ ನಿಯೋಗದಲ್ಲಿ ಉಡುಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ನಿರಂಜನ ಹೆಗ್ಡೆ ಅಲ್ತಾರು, ಸುಧಾಕರ ರಾವ್ ಬಾರಕೂರು, ನಿತ್ಯಾನಂದ ಅಮೀನ್, ಎಸ್. ಎಸ್. ತೋನ್ಸೆ ಉಡುಪಿ, ಕರುಣಾಕರ ಪೂಜಾರಿ, ಶ್ಯಾಮ್ಸನ್ ಸ್ವಿಕ್ಟೇರ ಬ್ರಹ್ಮಾವರ, ಸಂತೋಷ ಶೆಟ್ಟಿ, ಪ್ರಭಾಕರ ಶೆಟ್ಟಿ ಅಲ್ಬಾಡಿ, ಮೋಹನದಾಸ ಶೆಟ್ಟಿ ಕುಂಜಾಲು, ವಿಜಯ ಹೆಗ್ಡೆ ಕಳ್ತೂರು, ಲೂವಿಸ್ ಮಣಿಪಾಲ ಮೊದಲಾದವರು ಇದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!