Janardhan Kodavoor/ Team KaravaliXpress
23.4 C
Udupi
Saturday, February 4, 2023
Sathyanatha Stores Brahmavara

ಗೋವಿಗಾಗಿ ಮೇವು – 2021 -22 ಅಭಿಯಾನಕ್ಕೆ ಚಾಲನೆ

ಉಡುಪಿ : ಪೇಜಾವರ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಕಳೆದ ವರ್ಷ ಆರಂಭಗೊಂಡ ಗೋವಿಗಾಗಿ ಮೇವು ಅಭಿಯಾನಕ್ಕೆ ಮಾರ್ಚ್‌ ತನಕ 300 ಕ್ಕೂ ಹೆಚ್ಚು ಸಂಘಟನೆ ಗಳು ಭಾಗಿಯಾಗಿ ಅಭಿಯಾನ ಚಿಕ್ಕಮಂಗಳೂರು ಜಿಲ್ಲೆಗೂ ಹಬ್ಬಿ ಯಶಸ್ವಿಯಾಗಿತ್ತು. ಈ ವರ್ಷದ ಗೋವಿಗಾಗಿ ಮೇವು ಕಾರ್ಯಕ್ರಮಕ್ಕೆ ಕರಾವಳಿ ಪ್ರಾಧಿಕಾರದ ಅದ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಗೋವಿಗೆ ಮೇವನ್ನು ನೀಡುವುದರ ಮೂಲಕ ಅಧಿಕೃತ ಚಾಲನೆ ನೀಡಿದರು.

ಬಳಿಕ ಮಾತನಾಡಿ ಗೋವಿಗಾಗಿ ಮೇವು ಅಭಿಯಾನದ ತಂಡ ಜಿಲ್ಲೆಯಲ್ಲೇ ಪಾದರಸದಂತೆ ಕೆಲಸ ಮಾಡಿ ಅನೇಕ ಸಂಘಸಂಸ್ಥೆಗಳಿಗೆ ಪ್ರೇರೇಪಿಸುತ್ತಿರುವುದು ನೈಜ ಹಿಂದುತ್ವದ ಸಂಕೇತ ಅಭಿಯಾನ ರಾಜ್ಯ ವ್ಯಾಪಿ ಹರಡಲಿ ಎಂದರು. 

ಗೋವಿಗಾಗಿ ಮೇವು ಅಭಿಯಾನದ ಸ್ಥಾಪಕ ಸಂಚಾಲಕ ಪ್ರಥ್ವೀರಾಜ್ ಶೆಟ್ಟಿ ಪ್ರಾಸ್ಥಾವಿಕವಾಗಿ ಮಾತನಾಡಿ ಬಿಲ್ಲಾಡಿ ಜಿಲ್ಲೆಯ ಎಲ್ಲಾ ಸಂಘಸಂಸ್ಥೆಗಳನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತೇವೆ ಅಭಿಯಾನದಲ್ಲಿ ಕೈ ಜೋಡಿಸುವಂತೆ ಕರೆ ನೀಡಿದರು. 

ಬಂಟರ ಸಂಘ ಬೆಂಗಳೂರು ಕೋಶಾಧಿಕಾರಿ ದೀಪಕ್ ಶೆಟ್ಟಿ ಬಾರಕೂರು ಮಾತ ನಾಡಿ ಸಂಘಟಿತ ಯುವಕರ ಗೋಪ್ರೇಮ ,ಗೋಸೇವೆ ಇತರ ಸಂಘಟನೆ ಗೆ ಮಾದರಿಯಾಗಲಿ ಎಂದರು.

ಅರೂರು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ರಾಜೀವ ಕುಲಾಲ್, ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು, ಕರ್ವಾಲು,ಕೆಂಜೂರು ಲಯನ್ಸ್ ಕ್ಲಬ್ ಅಧ್ಯಕ್ಷೆ ಜಯಶ್ರೀ ಶೆಟ್ಟಿ,ವಿಕಾಸ್ ಶೆಟ್ಟಿ ಉಡುಪಿ, ಗೋವಿಗಾಗಿ ಮೇವು ಕೋಟ ವಲಯಾದ್ಯಕ್ಷ ಪ್ರದೀಪ್ ಪೂಜಾರಿ,ಮಹಿಳಾ ಅದ್ಯಕ್ಷೆ ವಿದ್ಯಾ ಸಾಲ್ಯಾನ್ ,ಜಿಲ್ಲಾ ಸಮಿತಿಯ ನಾಗೇಂದ್ರ ಪುತ್ರನ್,ಪ್ರದೀಪ್ ಪಡುಕೆರೆ,ಶಿವರಾಮ್ ಬಂಗೇರ, ಕೋಟ, ಸ್ಪಂದನ ಯುವಕ ಮಂಡಲ ಆರೂರು,ಮಹಾಲಿಂಗೇಶ್ವರ ಭಜನಾ ಮಂಡಳಿ ಕೂರಾಡಿ,ಪಾಂಚಜನ್ಯ ಯುವಕ ಮಂಡಲ ಕೋಟ,ನೀತಾ ಪ್ರಭು ಗೆಳೆಯರ ಬಳಗ ಹಿರಿಯಡ್ಕ,ಗೋವಿಗಾಗಿ ಮೇವು ಕೋಟ – ಸಾಲಿಗ್ರಾಮ ವಲಯ ತಂಡ, ಸಂಘಟನೆಗಳು ಭಾಗವಹಿಸಿದ್ದವು ಶಿಕ್ಷಕ ಸಂತೋಷ್ ಶೆಟ್ಟಿ ಎಳ್ಳಂಪಳ್ಳಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!